ಗುರುವಾರ , ಮಾರ್ಚ್ 23, 2023
29 °C

ಶೆಟ್ಟಿಕೊಪ್ಪದ ಅಯ್ಯಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೆಟ್ಟಿಕೊಪ್ಪ (ಎನ್.ಆರ್.ಪುರ): ನಂಬಿಕೆಯೇ ಜೀವನ. ಎಲ್ಲರೂ ಭಗವಂತನಲ್ಲಿ ನಂಬಿಕೆ ಇಡಬೇಕು ಎಂದು ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀಸೇನಾ ಭಟ್ಟಾರಕ ಪಸ್ವಾಮೀಜಿ ತಿಳಿಸಿದರು.

ಇಲ್ಲಿನ ಅಯ್ಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಮಠದಿಂದ ಮಕರ ಸಂಕ್ರಮಣ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಮನುಷ್ಯನಿಗೆ ಕೋಟಿ, ಕೋಟಿ ಹಣವಿದ್ದರೂ ನೆಮ್ಮದಿ ಇಲ್ಲದಿದ್ದರೆ ಫಲವಿಲ್ಲ. ನೆಮ್ಮದಿ ಸಿಗುವುದು ದೇವಾಲಯದಲ್ಲಿ ಮಾತ್ರ. ದೇವಾಲಯಗಳು ಮನುಷ್ಯನ ಜೀವನದ ನೆಮ್ಮದಿಯ ಶಾಂತಿಯ, ದುಃಖ ದುಮ್ಮಾನಗಳನ್ನು ನಿವೇದಿಸಿಕೊಳ್ಳುವ ತಾಣಗಳಾಗಿವೆ ಎಂದರು.

ಧರ್ಮದ ದಾರಿಯಲ್ಲಿ ನಡೆಯುವ ವ್ಯಕ್ತಿಗೆ ಯಾವುದೇ ಭಯವಿಲ್ಲ. ಅಧರ್ಮದಲ್ಲಿ ನಡೆಯುವ ವ್ಯಕ್ತಿ ಭಯಭೀತನಾಗುತ್ತಾನೆ. ಎಲ್ಲಾ ಮನುಷ್ಯರಲ್ಲೂ ದ್ವೇಷವಿರುತ್ತದೆ. ದ್ವೇಷವಿಲ್ಲದ ವ್ಯಕ್ತಿ ದೇವರಾಗುತ್ತಾನೆ, ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ನೂರಾರು ಕರ್ಮಗಳನ್ನು ಮಾಡಿರುತ್ತಾನೆ. ಅದಕ್ಕೆ ಪರಿಹಾರವೆಂದರೆ ದೇವರ ಮೊರೆ ಹೋಗುವುದು. ದೇವರ ಸನ್ನಿಧಿಗೆ ಹೋದರೆ ಎಲ್ಲವನ್ನೂ ದೇವರು ಮನ್ನಿಸುತ್ತಾನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿಯ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು ಮಾತನಾಡಿ, ಸ್ವಾಮೀಜಿಯವರ ಆಶೀರ್ವಾದ, ಪ್ರವಚನಗಳು ಮನುಷ್ಯನನ್ನು ಒಳಿತಿನ ಕಡೆಗೆ ಕೊಡ್ಯೂಯುತ್ತದೆ. ಧರ್ಮದ ಬಗ್ಗೆ ಜಾಗೃತಿಯನ್ನು ಉಂಟು ಮಾಡುತ್ತದೆ ಎಂದರು.

ದೇವಸ್ಥಾನ ಮಂಡಳಿಯ ಕಾರ್ಯದರ್ಶಿ ಬಿ.ಆರ್.ವೆಂಕಟೇಶ್, ಉಪಾಧ್ಯಕ್ಷ ಎನ್.ಎಂ.ಕಾಂತರಾಜ್, ಸದಸ್ಯರಾದ ಎಂ.ಟಿ.ಕುಮಾರ್, ಎ.ಬಿ.ಚಂದ್ರಶೇಖರ್, ಸಚ್ಚಿನ್, ಎಂ.ಪ್ರಶಾಂತ್, ಎಸ್.ಎಸ್.ಶ್ರೀನಿವಾಸ್, ಎಂ.ಕೆ.ಮಂಜುನಾಥ್, ಟಿ.ಪಿ.ಸುಧಾಕರ್ ಆಚಾರ್, ಮಣಿಕಂಠ ಮಹಿಳಾ ಸಂಘದ ಅಧ್ಯಕ್ಷೆ ಸುನಂದ, ಸದಸ್ಯರಾದ ಎಸ್.ವಿ.ಗಾಯತ್ರಿ, ದಾನಮ್ಮ, ಪುಷ್ಪಾ, ಶೈಲಾ, ಹೊನ್ನಮ್ಮ, ಶೆಟ್ಟಿಕೊಪ್ಪ ಎಂ. ಮಹೇಶ್ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು