ಚಿಕ್ಕಮಗಳೂರು: 2025–26ನೇ ಸಾಲಿನ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, 2023-24, 2024–25, 2025–26ನೇ ಸಾಲಿನಲ್ಲಿ ಪ್ರಸ್ತಾಪಿಸಿದ ಯೋಜನೆಗಳಲ್ಲಿ ಬಹುತೇಕವು ಘೋಷಣೆಯಾಗಿಯೇ ಉಳಿದಿವೆ.

2023–24ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೂರು ಕೊಡುಗೆಗಳನ್ನು ಸರ್ಕಾರ ಬಜೆಟ್ನಲ್ಲಿ ನೀಡಿತ್ತು. ಕಿರು ವಿಮಾಣ ನಿಲ್ದಾಣ, ಎನ್.ಆರ್.ಪುರದಲ್ಲಿ ಅಗ್ನಿಶಾಮಕ ಠಾಣೆ, ಕಾಫಿಗೆ ಬ್ರ್ಯಾಂಡ್ ರೂಪ ನೀಡುವ ಪ್ರಸ್ತಾಪ ಮಾಡಿತ್ತು. ಅಗ್ನಿಶಾಮಕ ಠಾಣೆ ನಿರ್ಮಾಣಗೊಂಡಿದ್ದು, ಉಳಿದ ಎರಡು ಯೋಜನೆಗಳು ಪ್ರಸ್ತಾಪದಲ್ಲೇ ಉಳಿದಿವೆ.

ಕಿರು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು. ಇದಕ್ಕೆ 1,200 ಮೀಟರ್ ರನ್ ವೇ ನಿರ್ಮಾಣವಾಗಬೇಕಿದ್ದು, 140 ಎಕರೆ ಜಾಗದ ಅಗತ್ಯವಿದೆ. ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ 120 ಎಕರೆ 22 ಗುಂಟೆ ಜಾಗವನ್ನು ಈ ಹಿಂದೆಯೇ ಕಾಯ್ದಿರಿಸಿದ್ದು, ಬಾಕಿ 19 ಎಕರೆಯನ್ನು ಸುತ್ತಮುತ್ತಲ ರೈತರಿಂದ ಸ್ವಾಧೀನ ಮಾಡಿಕೊಳ್ಳಬೇಕಿದೆ.

ಭೂಸ್ವಾಧೀನಕ್ಕೆ ₹24 ಕೋಟಿ ಅಗತ್ಯವಿದ್ದು, ₹7 ಕೋಟಿ ಲಭ್ಯವಿತ್ತು. ಬಾಕಿ ₹17 ಕೋಟಿ ಅನುದಾನದ ಬರಬೇಕಿತ್ತು. ಸದ್ಯ ಈ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಈಗ ಆರಂಭಿಸಿದೆ. ರೈತರಿಗೆ ಪರಿಹಾರ ವಿತರಿಸಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕಿರು ವಿಮಾನ ನಿಲ್ದಾಣ ಯೋಜನೆಯ ಪೂರ್ವ ತಯಾರಿ ಒಂದು ಹಂತ ಪೂರ್ಣಗೊಂಡಂತೆ ಆಗಲಿದೆ.

ಕಂದಾಯ ಇಲಾಖೆ ಭೂಮಿಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ(ಕೆಎಸ್ಐಐಡಿಸಿ) ಹಸ್ತಾಂತರ ಮಾಡಿದರೆ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಮಾದರಿಯಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಕಾಫಿ ಬ್ರ್ಯಾಂಡಿಂಗ್: ಪ್ರಸ್ತಾಪದಲ್ಲೇ ಬಾಕಿ

ರಾಜ್ಯದ ಕಾಫಿಯನ್ನು ಮೌಲ್ಯವರ್ಧಿಸಿ ಬ್ರ್ಯಾಂಡ್ ಮಾಡುವುದಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ 2023–24ನೇ ಸಾಲಿನ ಬಜೆಟ್ನಲ್ಲಿ ಪ್ರಸ್ತಾಪಿಸಿತ್ತು. ಅದು ಪ್ರಸ್ತಾಪದಲ್ಲೇ ಉಳಿದಿದ್ದು ಕಾರ್ಯರೂಪಕ್ಕೆ ಬಂದಿಲ್ಲ. ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯವು ಜಿ.ಐ(ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಹೊಂದಿವೆ.

ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಹೇಳಿತ್ತು. ಪಶ್ಚಿಮಘಟ್ಟದ ಸಾಲಿನ ಬೆಟ್ಟಗಳಲ್ಲಿ ಬೆಳೆಯುವ ಕಾಫಿಗೆ ತನ್ನದೇ ಆದ ಸ್ವಾದವಿದೆ. ಅದರಲ್ಲೂ ಮರಗಳ ನೆರಳಿನಲ್ಲಿ ಮಲೆನಾಡಿನ ಹವಮಾನದಲ್ಲಿ ಬೆಳೆಯಲಾಗುತ್ತದೆ. ಯಂತ್ರಗಳ ಬಳಕೆ ಇಲ್ಲದೆ ಬಿಸಿಲಿನಲ್ಲೇ ಒಣಗಿಸಿ ಹದ ಮಾಡುವ ಪದ್ಧತಿಯನ್ನು ಬೆಳೆಗಾರರು ಇಂದಿಗೂ ಅನುಸರಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಇದೆ. ಈ ಕಾಫಿಯನ್ನು ಇನ್ನಷ್ಟು ಮೌಲ್ಯವರ್ಧಿಸಿ ಬ್ರ್ಯಾಂಡಿಂಗ್ ರೂಪ ನೀಡಿದರೆ ಬೇಡಿಕೆ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ಈ ವಿಷಯವನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿದ ಸರ್ಕಾರ ಸುಮ್ಮನಾಯಿತು ಎಂದು ಕಾಫಿ ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ಸ್ಪೈಸ್ ಪಾರ್ಕ್: ಜಾಗವಷ್ಟೇ ಮೀಸಲು

2024–25ನೇ ಸಾಲಿನ ಬಜೆಟ್ನಲ್ಲಿ ಜಿಲ್ಲೆಗೆ ಕೆಲವು ಕೊಡುಗೆಗಳು ದೊರೆತಿದ್ದವು. ಎಲ್ಲವೂ ಪ್ರಸ್ತಾಪ ಹಂತದಲ್ಲೇ ಉಳಿದಿವೆ. ಬಹು ವರ್ಷಗಳ ಬೇಡಿಕೆಯಾಗಿದ್ದ ಸ್ಪೈಸ್ ಪಾರ್ಕ್(ಸಾಂಬಾರ ಪದಾರ್ಥಗಳ ಪಾರ್ಕ್) ಸ್ಥಾಪಿಸುವ ಬಗ್ಗೆ ಪ್ರಸ್ತಾಪವಾಯಿತು. ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿ ಹೊಸಕೋಟೆ ಗ್ರಾಮದ ಸರ್ವೆ ನಂಬರ್ 21/1ರಲ್ಲಿ ಸ್ಪೇಸ್ ಪಾರ್ಕ್ ಅಭಿವೃದ್ಧಿಗೆ 10 ಎಕರೆ ಜಮೀನನ್ನು 2021ರಲ್ಲಿ ನಿಗದಿ ಮಾಡಲಾಗಿತ್ತು. ಅದನ್ನು ಕೈಬಿಟ್ಟು ಈಗ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಬೆಟ್ಟದಮನೆ ಗ್ರಾಮದ ಸರ್ವೆ ನಂಬರ್ 114ರಲ್ಲಿ 9 ಎಕರೆ ಜಾಗವನ್ನು ಮೀಸಲಿರಿಸಲಾಗಿದೆ.

ತೋಟಗಾರಿಕೆ ಇಲಾಖೆಗೆ ಭೂಮಿ ವರ್ಗಾವಣೆಯೂ ಆಗಿದೆ. ಯೋಜನೆಯನ್ನು ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ತೋಟಗಾರಿಕೆ ಇಲಾಖೆ ಉದ್ದೇಶಿಸಿದೆ. ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಸಮಾಲೋಚಕರಾಗಿ ಬೆಂಗಳೂರಿನ ಮೆ. ಐಡೆಕ್ ಎಂಬ ಕಂಪನಿಯನ್ನು ನೇಮಿಸಿಕೊಂಡಿದೆ. ಇನ್ನೂ ವರದಿ ಸಿದ್ಧವಾಗಬೇಕಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾರಾಲಯಕ್ಕೆ ವಿನ್ಯಾಸ ತಯಾರಿ

ಚಿಕ್ಕಮಗಳೂರಿನಲ್ಲಿ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಸ್ಥಾಪನೆಗೆ 2024–25ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಹೊರಾಂಗಣ ವಿಜ್ಞಾನ ಪಾರ್ಕ್ಗೆ ₹6.65 ಕೋಟಿ ಮತ್ತು ಗುಮ್ಮಟ ಮಾದರಿಯ ಡೋಮ್ ನಿರ್ಮಾಣಕ್ಕೆ ₹7.95 ಕೋಟಿ ಸೇರಿ ಒಟ್ಟು ₹14.60 ಕೋಟಿ ಅನುಮೋದನೆ ದೊರೆತಿದೆ. ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿ ಜಾಗ ಗುರುತಿಸಲಾಗಿದೆ. ವಿನ್ಯಾಸ ಸಿದ್ಧವಾಗುತ್ತಿದ್ದು ಕಾಮಗಾರಿ ಆರಂಭವಾಗಲೂ ಇನ್ನೂ ಸಮಯ ಬೇಕಾಗಲಿದೆ. ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸುವ ಪ್ರಸ್ತಾಪವನ್ನೂ ಇದೇ ಬಜೆಟ್ನಲ್ಲಿ ಮಾಡಲಾಗಿತ್ತು. ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪ್ರತ್ಯೇಕ ಎರಡು ಜವಳಿ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಲಾಗಿದೆ. ಬೇರೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ.

ಕೇಬಲ್ ಕಾರ್ ಸುದ್ದಿಯೇ ಇಲ್ಲ

ರಾಜ್ಯದ ಹತ್ತು ಪ್ರವಾಸಿ ತಾಣಗಳಲ್ಲಿ ರೋಪ್ವೇ ಮತ್ತು ಕೇಬಲ್ ಕಾರ್ ಅಳವಡಿಸುವ ಬಗ್ಗೆ ಉಲ್ಲೇಖಿಸಲಾಗಿತ್ತು. ಹತ್ತು ತಾಣಗಳಲ್ಲಿ ಚಿಕ್ಕಮಗಳೂರ ಜಿಲ್ಲೆಯೂ ಸೇರಿದೆ ಪರಿಸರಕ್ಕೆ ಹಾನಿಯಾಗದಂತೆ ಕೇಬಲ್ ಕಾರ್ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಜನಪ್ರತಿನಿಧಿಗಳೂ ಭರವಸೆ ನೀಡಿದ್ದರು. ಆದರೆ ರೋಪ್ವೇ ಮತ್ತು ಕೇಬಲ್ ಕಾರ್ ಬಗ್ಗೆ ಜಿಲ್ಲೆಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಆನೆ ಕೇಂದ್ರ: ಇನ್ನೂ ಪತ್ರ ವ್ಯವಹಾರಕ್ಕೆ ಸೀಮಿತ

2025–26ನೇ ಸಾಲಿನ ಬಜೆಟ್ನಲ್ಲಿ ಮಾನವ-ಆನೆ ಸಂಘರ್ಷ ತಪ್ಪಿಸಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪಿಸಲು ₹20 ಕೋಟಿ ಅನುದಾನ ನಿಗದಿ ಮಾಡಲಾಗಿದೆ ಎಂದು ಘೋಷಣೆ ಮಾಡಲಾಗಿದೆ. ಆದರೆ ಈ ಯೋಜನೆ ಇನ್ನೂ ಪತ್ರ ವ್ಯವಹಾರಗಳ ಹಂತದಲ್ಲೇ ಉಳಿದಿದೆ. ಭೂಕುಸಿತ ತಡೆಗೆ ಹಣ ನೀಡುವ ಘೋಷಣೆ ಮಾಡಿತ್ತು. ಇತ್ತೀಚೆಗೆ ₹66 ಕೋಟಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.