‘ವೈಯಕ್ತಿಕ ನಿರ್ಧಾರವಲ್ಲ ಪಕ್ಷದ ತೀರ್ಮಾನ’
‘ಬಿಜೆಪಿ- ಜೆಡಿಎಸ್ ಸಮನ್ವಯ ಸಮಿತಿ ರಚನೆ ಮಾಡಿಕೊಂಡು ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಬಿಜೆಪಿ 11 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಎರಡು ಪಕ್ಷದ ಮುಖಂಡರು ಚರ್ಚಿಸಿ ತೀರ್ಮಾನ ತಗೆದುಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು. ‘ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ರಾಜಕೀಯ ಪಕ್ಷಗಳು ಇಲ್ಲ. ಆದರೂ ಆಂತರಿಕವಾಗಿ ಹೊಂದಾಣಿಕೆ ಮಾಡಿಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ಮಾಡಿರುವುದು ವೈಯಕ್ತಿಕ ಆಕಾಂಕ್ಷೆಯಿಂದಲ್ಲ. ನಮ್ಮ ನಿರ್ದೇಶಕರ ಇಚ್ಛೆ ಹಾಗೂ ಪಕ್ಷದ ನಿರ್ಣಯದಂತೆ ಸ್ಪರ್ಧೆ ಮಾಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು.