ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನಲ್ಲಿ 512 ಎಕರೆ ಅರಣ್ಯ ಜಾಗ ಮತ್ತು ಕಂದಾಯ ಭೂಮಿ ತಮ್ಮ ಹೆಸರಿಗೆ ಖಾತೆ ಇಂಡೀಕರಿಸಿಕೊಡಲು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯಲ್ಲಿನ ದಾಖಲೆಗಳಲ್ಲಿ ಗ್ರಾಮ ಲೆಕ್ಕಿಗರ ಸಹಿ, ನಕ್ಷೆಗಳು ಎಲ್ಲವೂ ನಕಲಿ ಎಂದು ತಹಶೀಲ್ದಾರ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು 512 ಎಕರೆ 26 ಗುಂಟೆ ಜಮೀನು ಕಬಳಿಸಲು ಮಾರೆಬೈಲ್ ಗ್ರಾಮದ ಮನ್ಮಥ (ನೇಮಣ್ಣಗೌಡ) ಎಂಬುವರು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ತಹಶೀಲ್ದಾರ್ ಅಶ್ವಿನಿ ನೀಡಿರುವ ದೂರು ಆಧರಿಸಿ ಮೂಡಿಗೆರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ 2023 ನ.3ರಿಂದ 2024ರ ಆ.2ರ ತನಕ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ, ‘ಅರ್ಜಿದಾರರು ಹಾಜರುಪಡಿಸಿರುವ ಎಲ್ಲಾ ದಾಖಲೆಗಳು, ನಕ್ಷೆಗಳು ಸಕ್ಷಮ ಅಧಿಕಾರಿಗಳಿಂದ ದೃಢೀಕರಣ ಆಗಿಲ್ಲ. ವಿಶೇಷ ಜಿಲ್ಲಾಧಿಕಾರಿ ಅವರ ಇನಾಂ ಆದೇಶದ ಪ್ರತಿಯಲ್ಲಿರುವ ಸರ್ವೆ ನಂಬರ್ಗಳಿಗೂ, ನಕ್ಷೆಯ ಸರ್ವೆ ನಂಬರ್ಗಳಿಗೂ ತಾಳೆಯಾಗುತ್ತಿಲ್ಲ. ಪಹಣಿ ದಾಖಲೆಗಳಲ್ಲಿ ಮ್ಯುಟೇಷನ್ ಉಲ್ಲೇಖ ಇಲ್ಲ. ಎಲ್ಲ ದಾಖಲೆಗಳಲ್ಲಿ ಗ್ರಾಮ ಲೆಕ್ಕಿಗರ ಸಹಿ ನಕಲಿಯಾಗಿವೆ. ಮೇಲ್ನೋಟಕ್ಕೆ ಎಲ್ಲಾ ದಾಖಲೆಗಳೂ ನಕಲಿ ಎಂಬಂತೆ ಕಾಣಿಸುತ್ತಿದೆ. ಆದ್ದರಿಂದ ಠಾಣೆಯಲ್ಲಿ ದೂರು ದಾಖಲಿಸಿ’ ಎಂದು ಮೂಡಿಗೆರೆ ತಹಶೀಲ್ದಾರ್ ಅವರಿಗೆ ಆದೇಶಿಸಿದ್ದರು.

ಇದನ್ನು ಆಧರಿಸಿ ಪೊಲೀಸ್ ಠಾಣೆಗೆ ತಹಶೀಲ್ದಾರ್ ಅಶ್ವಿನಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎಲ್ಲಾ ಅಂಶಗಳು ಎಫ್ಐಆರ್ನಲ್ಲಿ ಉಲ್ಲೇಖಗೊಂಡಿವೆ.

ಎಫ್ಐಆರ್ ಪ್ರಕಾರ, ಆರೋಪಿ ಮನ್ಮಥ ಭೂಮಿ ತನ್ನ ವಶಕ್ಕೆ ಪಡೆಯಲು ಮಂಡಿಸಿದ್ದ ವಾದ ಹೀಗಿದೆ.

‘ಅಷ್ಟೂ ಜಮೀನು ತಮ್ಮ ಪೂರ್ವಜರಾದ ಎಂ.ಎನ್.ಈರೇಗೌಡ ಮತ್ತು ಹೂವಣ್ಣಗೌಡ ಎಂಬುವರಿಗೆ ಸೇರಿತ್ತು. 1956ರಲ್ಲಿ ಇನಾಂ ರದ್ದತಿ ಕಾಯ್ದೆ ಜಾರಿಯ ಬಳಿಕ ಸರ್ಕಾರದ ವಶಕ್ಕೆ ಹೋಗಿತ್ತು. ಇದೇ ಕಾಯ್ದೆಯ ನಿಯಮ 7ರ ಅಡಿಯಲ್ಲಿ ಈರೇಗೌಡ ಮತ್ತು ಹೂವಣ್ಣಗೌಡ ಅವರು ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿ ಮುಂದೆ ಅರ್ಜಿಸಲ್ಲಿಸಿದ್ದರು. 1974ರ ಮಾ.5ರಂದು ಇಬ್ಬರಿಗೂ ಅಧಿಬೋಗದಾರಿಕೆ ನೊಂದಾಯಿಸಲಾಗಿದೆ.

ವಿಶೇಷ ಜಿಲ್ಲಾಧಿಕಾರಿ ಅವರ ಆದೇಶದಂತೆ ₹1024.52 ಮೊತ್ತವನ್ನು ತಹಶೀಲ್ದಾರ್ ಅವರಿಗೆ ಪಾವತಿಸಲಾಗಿದೆ. ನಕ್ಷೆ ಕೂಡ ತಯಾರಿಸಲಾಗಿದೆ. ಆದರೆ, ಈ ಜಮೀನುಗಳ ಖಾತೆ ಅರಣ್ಯ ಎಂದಾಗಿದ್ದು, 2 ಲಕ್ಷ ಸಸಿಗಳನ್ನು ನೆಡಲಾಗಿದೆ. ಮರಮಾಲಿಕೆ ಬಾಬ್ತು ₹3.50 ಲಕ್ಷವನ್ನು 1984ರಲ್ಲಿ ಅರಣ್ಯ ಇಲಾಖೆಗೆ ಪಾವತಿಸಲಾಗಿದೆ. ಹಣ ಸಂದಾಯ ಕುರಿತು ಅಂದಿನ ಡಿಸಿಎಫ್ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

‘ಅದೇ ವರ್ಷ ಜಿಲ್ಲಾಧಿಕಾರಿ ಅವರು ಭೂಮಂಜೂರಾತಿ ಸಮಿತಿ ಮುಂದೆ ವಿಷಯ ಮಂಡಿಸಿ ಈರೇಗೌಡ ಮತ್ತು ಹೂವಣ್ಣಗೌಡ ಅವರಿಗೆ ಭೂಮಿ ಮಂಜೂರು ಮಾಡಲು ನಡಾವಳಿ ದಾಖಲಿಸಿದ್ದಾರೆ. ಇದೇ ವರ್ಷ ಹೂವಣ್ಣ ಗೌಡ ಮೃತಪಟ್ಟರೆ, 1985ರಲ್ಲಿ ಈರೇಗೌಡ ಮೃತಪಟ್ಟಿದ್ದಾರೆ. 1981ರಲ್ಲಿ ಹೂವಣ್ಣಗೌಡ ಮತ್ತು 1983ರಲ್ಲಿ ಈರೇಗೌಡ ಅವರು ಮನ್ಮಥ ಅವರಿಗೆ ವಿಲ್ ಬರೆದುಕೊಟ್ಟಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಆಧರಿಸಿ ಹಕ್ಕು ದಾಖಲಿಸಲು 2001ರಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ. ಆದರೂ, ತಹಶೀಲ್ದಾರ್ ಅವರು ಖಾತೆ ದಾಖಲಿಸಿಲ್ಲ. ಆದ್ದರಿಂದ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಲಾಗಿದೆ. ಉಪವಿಭಾಗಾಧಿಕಾರಿ ಅವರಿಗೆ ಖಾತೆ ಇಂಡೀಕರಣ ಮಾಡಿಕೊಡಲು ಕ್ರಮ ಕೈಗೊಳ್ಳಬೇಕು’ ಎಂದು ಮನ್ಮಥ ಅವರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

‘ಖಾಸಗಿ ಜಾಗ ಕಬಳಿಕೆಗೂ ಯತ್ನ’

ನಕಲಿ ದಾಖಲೆ ಸೃಷ್ಟಿಸಿ ಪಡೆಯಲು ಪ್ರಯತ್ನಿಸಿರುವ ಜಾಗದಲ್ಲಿ ಅರಣ್ಯ ಭೂಮಿ, ಕಂದಾಯ ಜಾಗ ಮತ್ತು ಖಾಸಗಿ ವ್ಯಕ್ತಿಗಳ ಜಾಗವೂ ಇದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಜಿ.ಅಗ್ರಹಾರ, ಅಣಜೂರು, ಜಿ.ಹೊಸಹಳ್ಳಿ ಮತ್ತು ಬಣಕಲ್ ಗ್ರಾಮಗಳ ವಿವಿಧ ಸರ್ವೆ ನಂಬರ್ಗಳಲ್ಲಿ ಒಟ್ಟು 512 ಎಕರೆ 26 ಗುಂಟೆ ಜಾಗದಲ್ಲಿ ಹಲವೆಡೆ ಖಾಸಗಿಯವರ ಹಿಡುವಳಿ ಕೂಡ ಇದೆ. ದುರುದ್ದೇಶದಿಂದ ಇದನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮನ್ಮಥ ಪ್ರಯತ್ನಿಸಿದ್ದಾರೆ ಎಂದು ತಹಶೀಲ್ದಾರ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.