ಚಿಕ್ಕಮಗಳೂರು: ಗುಡ್ಡ ಕುಸಿತ ಮತ್ತು ಪ್ರವಾಹ ಪರಿಸ್ಥಿತಿಯನ್ನು ಪ್ರತಿವರ್ಷ ಎದುರಿಸುವ ಕಾಫಿನಾಡಿನಲ್ಲಿ ಭೂಕುಸಿತದಿಂದ ತೊಂದರೆಗೆ ಸಿಲುಕಿದ ಹಲವು ಕುಟುಂಬಗಳು ಇಂದಿಗೂ ಪುನರ್ವಸತಿ ಸಿಗದೆ ಪರದಾಡುತ್ತಿವೆ. ಮತ್ತೊಂದೆಡೆ ಭೂಕುಸಿತ ಸಂಭವಿಸಬಹುದಾದ ಮೂರು ಸ್ಥಳಗಳನ್ನು ಗುರುತಿಸಿರುವ ಜಿಲ್ಲಾಡಳಿತ, ಅಲ್ಲಿನ ಜನವಸತಿ ಸ್ಥಳಾಂತರಕ್ಕೆ ಸಿದ್ಧತೆ ನಡೆಸಿದೆ.

ಮೂಡಿಗೆರೆ ತಾಲ್ಲೂಕಿನ ಮಲೆಮನೆ ಗ್ರಾಮದ ನಿರಾಶ್ರಿತರಿಗೆ ಆರು ವರ್ಷ ಕಳೆದರೂ ನೆಲೆಯಿಲ್ಲವಾಗಿದೆ. ಬಣಕಲ್, ಮೂಡಿಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಪುನರ್ವಸತಿ ಅವರ ಪಾಲಿಗೆ ಮರೀಚಿಕೆಯೇ ಆಗಿದೆ.

ಮತ್ತೊಂದೆಡೆ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ, ಚಿಕ್ಕಮಗಳೂರು ತಾಲ್ಲೂಕಿನ ಅರೆನೂರು ಹಾಗೂ ಬಾಳೆಹೊನ್ನೂರು ಸಮೀಪದ ಬಂಡಿಮಠದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲು ಮುಂದಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಅನಾಹುತ ಸಂಭವಿಸುವುದು ಮಲೆನಾಡಿನಲ್ಲಿ ಈಗ ಸಾಮಾನ್ಯವಾಗಿದೆ. ಗುಡ್ಡೇತೋಟ ಮತ್ತು ಅರೆನೂರು ಬಳಿ ಗುಡ್ಡ ಕುಸಿತದ ಆತಂಕ ಇದೆ. ಬಾಳೆಹೊನ್ನೂರಿನ ಬಂಡಿಮಠ ಹೊಳೆಬಾಗಿಲು ಪ್ರದೇಶದಲ್ಲಿ ಪ್ರವಾಹ ಭೀತಿ ಇದೆ.

ಅರೆನೂರು ಗ್ರಾಮದ ಸಮೀಪ 5 ಕೂಲಿ ಕಾರ್ಮಿಕ ಕುಟುಂಬಗಳು ಗುಡ್ಡ ಕುಸಿತವಾಗುವ ಸ್ಥಳದಲ್ಲಿ ವಾಸಿಸುತ್ತಿವೆ. ಈ ಕುಟುಂಬಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈಗ ವಾಸಮಾಡುತ್ತಿರುವ ಸ್ಥಳ ಗೋಮಾಳವಾದರೂ ವಾಸಿಸಲು ಯೋಗ್ಯವಾಗಿಲ್ಲ. ಈ ಕುಟುಂಬಗಳನ್ನು ಇದೇ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 32ರಲ್ಲಿನ ಒಂದು ಎಕರೆ ಜಾಗಕ್ಕೆ ಸ್ಥಳಾಂತರ ಮಾಡಲು ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಜಂಟಿ ಸರ್ವೆ ಮಾಡಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿದ್ದಾರೆ.

‘ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಅಪಾಯ ಇರುವುದರಿಂದ ಕೂಡಲೇ ಸ್ಥಳಾಂತರಕ್ಕೆ ಸಿದ್ಧತೆ ನಡೆಸಲಾಗಿದೆ. ಗುಡ್ಡೇತೋಟ, ಬಂಡಿಮಠ, ಅರೆನೂರಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಕುಡಿಯುವ ನೀರು, ವಿದ್ಯುತ್, ರಸ್ತೆ ಸಂಪರ್ಕ ಇರುವ ಜಾಗಕ್ಕೆ ಶೀಘ್ರವೇ ಸ್ಥಳಾಂತರ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ಮಲೆಮನೆ: ಸಿಗದ ನೆಲೆ ತಪ್ಪದ ಅಜ್ಞಾತವಾಸ

2019ರಲ್ಲಿ ಸುರಿದ ಮಳೆಯಿಂದ ಬದುಕು ಕಳೆದುಕೊಂಡ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಮನೆ ಗ್ರಾಮದ ನಿರಾಶ್ರಿತರಿಗೆ ಆರು ವರ್ಷ ಕಳೆದರೂ ನೆಲೆಯಿಲ್ಲದೇ ಅಜ್ಞಾತವಾಸ ಅನುಭವಿಸುವಂತಾಗಿದೆ. ಮಹಾ ಮಳೆಯಿಂದ ಮಲೆಮನೆ ಗ್ರಾಮದ 6 ಮನೆಗಳ ಮೇಲೆ ಗುಡ್ಡ ಕುಸಿದು ಸಂಪೂರ್ಣವಾಗಿ ನೆಲಸಮವಾಗಿದ್ದವು. ಅಲ್ಲದೇ ಜೀವನಕ್ಕಾಗಿ ಬೆವರಿಳಿಸಿ ಉಳುಮೆ ಮಾಡಿದ್ದ ಕೃಷಿ ಭೂಮಿಯೂ ಕುಸಿತಕ್ಕೊಳಗಾಗಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿತ್ತು. ಘಟನೆ ಸಂಭವಿಸಿದಾಗ ಭರವಸೆಯ ಮಹಾಪೂರವನ್ನೇ ಹರಿಸಿದ್ದ ಜನಪ್ರತಿನಿಧಿಗಳು ಸರ್ಕಾರ ಪರಿಹಾರವನ್ನು ಮರೀಚಿಕೆಯನ್ನಾಗಿಸಿದೆ. ಆರೂ ಕುಟುಂಬಗಳ ಬದುಕು ಛಿದ್ರವಾಗಿದೆ. ಒಂದೇ ಊರಿನಲ್ಲಿ ನೆಲೆಸಿದ್ದ 6 ಕುಟುಂಬಗಳಲ್ಲಿ ಒಂದು ಕುಟುಂಬ ಬಣಕಲ್ನಲ್ಲಿ ಮೂವರು ಮೂಡಿಗೆರೆಯಲ್ಲಿ ಹಾಗೂ ಎರಡು ಕುಟುಂಬ ಚಿಕ್ಕಮಗಳೂರಿನಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಕೃಷಿ ಭೂಮಿಯನ್ನು ಕಳೆದುಕೊಂಡ ಇವರ ಜೀವನ ನಿರ್ವಹಣೆಯೇ ಸವಾಲಾಗಿದೆ. ‘ಆರು ವರ್ಷಗಳಿಂದ ನಮ್ಮ ಗೋಳನ್ನು ಕೇಳಿಸಿಕೊಳ್ಳದವರೇ ಇಲ್ಲ. ಆದರೆ ಯಾರೊಬ್ಬರೂ ನಿರಾಶ್ರಿತರ ನೆರವಿಗೆ ಬಂದಿಲ್ಲ. ಹಾನಿಯಾದಾಗ ಸರ್ಕಾರವು ಬದಲಿ ಕೃಷಿಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಅದು ಇದುವರೆಗೂ ಈಡೇರಿಲ್ಲ. ನಿರಾಶ್ರಿತರು ವಾಸ ಮಾಡಲು ಮನೆಯ ಬಾಡಿಗೆ ನೀಡುವುದಾಗಿ ಘೋಷಿಸಿತ್ತು. ಅದೂ ಆಗಲಿಲ್ಲ. ಈಗಿರುವ ಭೂಮಿಯಲ್ಲಿ ಕೃಷಿ ಮಾಡಲೂ ಭಯವಾಗುತ್ತದೆ. ಹೊಸದಾಗಿ ಕೃಷಿ ಮಾಡಿ ಮತ್ತೆ ಭೂಕುಸಿತವಾದರೆ ಹಾಕಿದ ಶ್ರಮವು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೃಷಿಯೊಂದಿಗೆ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಇಂದು ಆದಾಯವೇ ಇಲ್ಲದೇ ನಲುಗುವಂತಾಗಿದೆ. ಕೂಡಲೇ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿ ನಮಗೂ ಬದುಕುವ ಹಕ್ಕು ಕಲ್ಪಿಸಬೇಕು’ ಎನ್ನುತ್ತಾರೆ ನಿರಾಶ್ರಿತ ಅಶ್ವತ್. ತಾಲ್ಲೂಕು ಗುಡ್ಡಗಾಡು ಪ್ರದೇಶ ಆಗಿರುವುದರಿಂದ ನೂರಾರು ಮನೆಗಳು ಗುಡ್ಡದ ಬುಡದಲ್ಲಿಯೇ ಇವೆ. ಕೆಲವೆಡೆ ಗುಡ್ಡ ಕೊರೆದು ಒಂದಷ್ಟು ಜಾಗವನ್ನು ಸಮತಟ್ಟು ಮಾಡಿ ಮನೆ ನಿರ್ಮಿಸಿಕೊಳ್ಳಲಾಗಿದ್ದು ಉಳಿದ ಜಾಗವು ಮಳೆಗಾಲದಲ್ಲಿ ಜರಿಯುವ ಅಪಾಯ ಎದುರಾಗಿದೆ. 2019ರವರೆಗೂ ಗುಡ್ಡ ಕುಸಿತ ಎಂಬುದು ಬರೀ ಕಲ್ಪನೆಯಾಗಿತ್ತು. ಆದರೆ 2019ರಲ್ಲಿ ಸಂಭವಿಸಿದ ಗುಡ್ಡ ಕುಸಿತವು ಗುಡ್ಡದ ಬುಡದಲ್ಲಿರುವ ಮನೆಗಳಿಗೆ ಆತಂಕ ಸೃಷ್ಟಿಸಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗುಡ್ಡದ ಬುಡದಲ್ಲಿರುವ ಮನೆಗಳ ಸಮೀಕ್ಷೆ ನಡೆಸಿ ಅದರಲ್ಲಿ ಅಪಾಯಕಾರಿಯಾಗಿರುವ ಮನೆಗಳನ್ನು ಸ್ಥಳಾಂತರಿಸುವ ಕಾರ್ಯವು ತುರ್ತಾಗಬೇಕಿದೆ. ಹೊಸದಾಗಿ ಮನೆ ನಿರ್ಮಿಸುವಾಗ ಗುಡ್ಡ ಕೊರೆದು ಗೆರೆ ಮಾಡಿ ನಿರ್ಮಿಸಲು ಮುಂದಾದರೆ ಅನುಮತಿಯನ್ನು ನಿರಾಕರಿಸುವ ಅಗತ್ಯವೂ ಇದೆ ಎನ್ನುತ್ತಾರೆ ಪರಿಸರಾಸಕ್ತರು.

ಗುಡ್ಡೇತೋಟ: ಸ್ಥಳಾಂತರಕ್ಕೆ ತಯಾರಿ

ಕೊಪ್ಪ ತಾಲ್ಲೂಕಿನ ಮೇಗುಂದ ಹೋಬಳಿ ವ್ಯಾಪ್ತಿಯ ಗುಡ್ಡೆತೋಟದಲ್ಲಿ ಈ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಭೂ ಕುಸಿತದಿಂದ ಆತಂಕ ಎದುರಿಸುತ್ತಿದ್ದ 17 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಕೆಲಸ ಪ್ರಗತಿಯಲ್ಲಿದೆ. ರಸ್ತೆ ಮೇಲ್ಭಾಗದಲ್ಲಿದ್ದ 13 ಮನೆಗಳ ಪೈಕಿ 8 ಮನೆಗಳಿಗೆ ಗ್ರಾಮದ ಸರ್ವೆ ನಂಬರ್ 153ರಲ್ಲಿ 10 ಗುಂಟೆಯಲ್ಲಿ ನಿವೇಶನ ಗುರುತಿಸಿ ಹಂಚಿಕೆ ಮಾಡಲಾಗಿದೆ. ಹಕ್ಕುಪತ್ರ ವಿತರಣೆಗೆ ದಾಖಲೆ ಸಿದ್ಧಪಡಿಸಲಾಗಿದೆ. 5 ಮನೆಗಳಿಗೆ ಭೈರೇದೇವರು ಗ್ರಾಮದ ನಾಯಕನಕಟ್ಟೆ ಎಂಬಲ್ಲಿ 189 ಸರ್ವೆ ನಂಬರ್ನಲ್ಲಿ ನಿವೇಶನ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ನಡೆದಿದೆ. ಉಳಿದಂತೆ 4 ಕುಟುಂಬಗಳಿಗೆ ಬೇರೆ ಕಡೆಗೆ(ನಾಯಕನಕಟ್ಟೆಯಲ್ಲಿ ಗುರುತಿಸಿದ ಜಾಗ) ಸ್ಥಳಾಂತರಗೊಳ್ಳಲು ಒಪ್ಪುತ್ತಿಲ್ಲ. ಆದ್ದರಿಂದ ಗುಡ್ಡೇತೋಟದಲ್ಲಿ 113 ಸರ್ವೆ ನಂಬರ್ 32 ಗುಂಟೆ ಜಾಗ ಮಂಜೂರಾಗಿದೆ. ಆದರೆ ಈ ಜಾಗಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇತ್ಯರ್ಥವಾದರೆ ಅವರಿಗೂ ನಿವೇಶನ ಸಿಗಲಿದೆ. ‘ಈ ಹಿಂದೆ 2019ರಲ್ಲಿ ಒಂದು ಮನೆ ಕಳೆದ ಬಾರಿ ಒಂದು ಮನೆ ಒಟ್ಟು 2 ಮನೆಗಳನ್ನು ಆದ್ಯತೆಯ ಮೇಲೆ ಸ್ಥಳಾಂತರ ಮಾಡಿ ಪುನರ್ ವಸತಿ ಕಲ್ಪಿಸಲಾಗಿದೆ. ಈ ಬಾರಿ 2 ಮನೆಗಳನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಗುಡ್ಡೆತೋಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ಹೇಳಿದರು. ‘ಈ ಬಾರಿ ಇನ್ನೊಂದು ಮನೆ ಅಪಾಯ ಸ್ಥಿತಿಯಲ್ಲಿ ಇರುವುದನ್ನು ಇದೇ ಹೋಬಳಿಯಲ್ಲಿ(ಮೇಗುಂದ) ಗುರುತಿಸಲಾಗಿದೆ. ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಕಟ್ಟೆ ಎಂಬಲ್ಲಿ ರಸ್ತೆ ವಿಸ್ತರಣೆ ಸಂದರ್ಭ ಧರೆ ಕುಸಿತಗೊಂಡಿದ್ದು ಇದರಿಂದ ಬೇಬಿ ಕೋಂ ರಮೇಶ ಅವರ ಮನೆ ಅಪಾಯ ಸ್ಥಿತಿಯಲ್ಲಿದೆ. ಜಯಪುರದಲ್ಲಿರುವ ವಸತಿ ಗೃಹಕ್ಕೆ ಸ್ಥಳಾಂತರಗೊಳ್ಳುವಂತೆ ಹೇಳಿದ್ದೇವೆ’ ಎಂದು ಮೇಗುಂದ ಹೋಬಳಿ ಕಂದಾಯ ನಿರೀಕ್ಷಕ ವಿನಯ್ ತಿಳಿಸಿದರು.

ಹೊಳೆಬಾಗಿಲು ಪ್ರವಾಹ ಭೀತಿ

ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಬಾಗಿಲು ಪ್ರದೇಶ ಪ್ರತಿ ಬಾರಿ ಮಳೆಗಾಲದ ಪ್ರವಾಹದಲ್ಲಿ ಮುಳುಗಡೆಯ ಬೀತಿ ಎದುರಿಸುತ್ತಿದೆ. ಇಲ್ಲಿ 14 ಮನೆಗಳಿದ್ದು 2019ರಲ್ಲಿ ಸುರಿದ ಬಾರಿ ಮಳೆಯಿಂದಾಗಿ ಇಲ್ಲಿನ ಕೆಲವು ಮನೆಗಳಿಗೆ ಸಂಪೂರ್ಣ ಹಾನಿ ಉಂಟಾಗಿತ್ತು. ಸರ್ಕಾರ ನೀಡಿದ ₹5 ಲಕ್ಷ ಪರಿಹಾರ ಪಡೆದ ಸಂತ್ರಸ್ಥರು ಮತ್ತೇ ಹಿಂದಿನ ಸ್ಥಳವಾದ ಹೊಳೆಬಾಗಿಲಿನಲ್ಲೇ ಹೊಸ ಮನೆ ನಿರ್ಮಿಸಿಕೊಂಡಿದ್ದಾರೆ. ಇದೀಗ ಯಥಾಪ್ರಕಾರ ಪ್ರತಿ ವರ್ಷ ಮಳೆಗಾಲದ ಪ್ರವಾಹದಲ್ಲಿ ಅಧಿಕಾರಿಗಳು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವುದು ಮತ್ತೆ ಅವರು ವಾಪಸ್ ಹೋಗುವುದು ವಾಡಿಕೆಯಾಗಿದೆ. ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಿಮಠ ಕೂಡ ಪ್ರತಿ ವರ್ಷ ಮುಳುಗಡೆಯ ಭೀತಿ ಎದುರಿಸುತ್ತಿದೆ. ಅಲ್ಲಿ ವಾಸವಿರುವ 16 ಕುಟುಂಬಗಳನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಮುಂದಾಗಿದ್ದು ಅವರಿಗೆ ಪರ್ಯಾಯವಾಗಿ ಅಕ್ಷರ ನಗರದಲ್ಲಿ ನಿವೇಶನಗಳನ್ನು ನೀಡಲು ಜಾಗ ಗುರುತಿಸಲಾಗಿದೆ. ಅಲ್ಲಿ ಬೆಳೆದಿದ್ದ ಆಕೇಶಿಯಾ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ ವರ್ಷ ಕಳೆದರೂ ನಿವೇಶನ ಹಂಚಿಕೆ ಬಾಕಿ ಉಳಿದಿದೆ. ನಿವೇಶನ ಹಂಚಿಕೆ ನಿಧಾನವಾದ ಕಾರಣ ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಕೂಡ ಅಮೆವೇಗ ಪಡೆದಿದೆ.

ಪೂರಕ ಮಾಹಿತಿ: ಸತೀಶ್ ಜೈನ್, ರವಿಕುಮಾರ್ ಶೆಟ್ಟಿಹಡ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.