ಕೊಪ್ಪ: ರಕ್ತದಾನ, ನೇತ್ರದಾನ, ಅಂಗಾಂಗ ದಾನ, ಸ್ವಚ್ಛ ಪರಿಸರ ಘೋಷಣೆಯೊಂದಿಗೆ ಶಿವಮೊಗ್ಗ ಮತ್ತು ಕೊಪ್ಪ ಸೈಕ್ಲಿಂಗ್ ಕ್ಲಬ್ ವತಿಯಿಂದ ಈಚೆಗೆ ಶಿವಮೊಗ್ಗ, ತಿರುಪತಿ ಹಾಗೂ ಪುದುಚೇರಿ ಸೈಕಲ್ ಜಾಥಾ ನಡೆಯಿತು.
ಕೊಪ್ಪ ಸೈಕ್ಲಿಂಗ್ ಕ್ಲಬ್ ನ ಸದಸ್ಯರಾದ ಶ್ರೀರಂಗ ಮೆಡಿಕಲ್ ಮಾಲೀಕ ನರೇಂದ್ರ ಕಾಮತ್, ಅರುಣ್ ಬಾಳಗಡಿ, ಜಿ.ಸಂತೋಷ್, ರಾಜೇಶ್ ಭಟ್ ಹಾಗೂ ಶಿವಮೊಗ್ಗದ ಸೈಕಲ್ ಸವಾರರ ತಂಡ ಒಳಗೊಂಡಂತೆ ಒಟ್ಟು 21 ಮಂದಿ ಜಾಥಾದಲ್ಲಿ ಪಾಲ್ಗೊಂಡಿದ್ದರು.
‘ಒಟ್ಟು 850 ಕಿ.ಲೋ ಮೀಟರ್ ದೂರ, ಒಂದು ವಾರಗಳ ಕಾಲ ಸೈಕಲ್ ಜಾಥಾ ನಡೆಸಲಾಯಿತು. ರಕ್ತದಾನ, ನೇತ್ರದಾನ, ಪರಿಸರ ಕಾಳಜಿಗಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು’ ಎಂದು ಜಾಥಾದಲ್ಲಿ ಪಾಲ್ಗೊಂಡಿದ್ದ ಅರುಣ್ ಬಾಳಗಡಿ ತಿಳಿಸಿದರು.