ಚಿಕ್ಕಮಗಳೂರು: ಕಾಫಿ ಕೊಯ್ಲು ತರಾತುರಿಯಲ್ಲಿ ನಡೆಯುತ್ತಿದ್ದು, ಕಾರ್ಮಿಕರ ಕೊರತೆ ಬೆಳೆಗಾರರನ್ನು ಇನ್ನಿಲ್ಲದೆ ಕಾಡುತ್ತಿದೆ. ಕೊಯ್ಲಿನ ಕೂಲಿ ಕೂಡ ಬಹುತೇಕ ದುಪ್ಟಟ್ಟಾಗಿದ್ದು, ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡಿಸಲು ಪರದಾಡುತ್ತಿದ್ದಾರೆ.

ಕಾಫಿ ಹಣ್ಣು ಕೊಯ್ಲಿಗೆ ಎಲ್ಲರೂ ಮುಂದಾಗಿರುವುದರಿಂದ ಕಾರ್ಮಿಕರ ಕೊರತೆ ಎದುರಾಗಿದೆ. ಹಣ್ಣು ಕೊಯ್ಲಿನ ಸಂದರ್ಭದಲ್ಲಿ ಬರುತ್ತಿದ್ದ ಕಾರ್ಮಿಕರು ಮತ್ತು ಕರೆ ತರುವ ಮೇಸ್ತ್ರಿಗಳು ಈ ಬಾರಿ ಕೊಯ್ಲಿನ ದರ ಏರಿಕೆ ಮಾಡಿದ್ದಾರೆ. ಕಾಫಿಗೆ ಉತ್ತಮ ಬೆಲೆ ಬಂದಿರುವುದರಿಂದ ಕೊಯ್ಲಿನ ದರವನ್ನೂ ಮೇಸ್ತ್ರಿಗಳು ಹೆಚ್ಚಿಸಿದ್ದಾರೆ. ಆದರೆ, ಅದರ ಲಾಭ ವಲಸೆ ಕಾರ್ಮಿಕರಿಗೆ ತಲುಪುತ್ತಿಲ್ಲ.

ಕಾರ್ಮಿಕರನ್ನು ಗುಂಪಾಗಿ ಕರೆ ತರುವ ಮೇಸ್ತ್ರಿಗಳು, ತೋಟದ ಮಾಲೀಕರ ಬಳಿ ಕೂಲಿ ಎಷ್ಟು ಎಂಬುದನ್ನು ನಿಗದಿ ಮಾಡಿಕೊಳ್ಳುತ್ತಾರೆ. ಕೆ.ಜಿ ಲೆಕ್ಕದಲ್ಲಿ ಕೊಯ್ಲಿನ ಕೂಲಿ ಮಾತನಾಡಿಕೊಳ್ಳುವ ಮಧ್ಯವರ್ತಿಗಳು, ಕಾರ್ಮಿಕರಿಗೆ ದಿನಕ್ಕೆ ₹400–₹450 ನಿಗದಿ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಕಾಫಿ ಕೊಯ್ಲು ಯಾವ ದಿನ ಮಾಡಿಸಬೇಕು ಎಂಬುದನ್ನು ಬೆಳೆಗಾರರು ನಿಗದಿ ಮಾಡಲು ಅವಕಾಶ ಇಲ್ಲ. ಮೇಸ್ತ್ರಿಗಳು ಕಾರ್ಮಿಕರನ್ನು ಕಳುಹಿಸಿದ ದಿನ ಕೊಯ್ಲು ಮಾಡಿಸಬೇಕು. ಕಾಫಿ ಹಣ್ಣು ಕೊಯ್ಲಿಗೆ ವಲಸೆ ಕಾರ್ಮಿಕರನ್ನೇ ಆಶ್ರಯಿಸಿರುವ ಬೆಳೆಗಾರರು ಮೇಸ್ತ್ರಿಗಳನ್ನು ನಂಬಿಕೊಂಡಿದ್ದಾರೆ.

ಉತ್ತರ ಕರ್ನಾಟಕದಿಂದ ಬರುತ್ತಿದ್ದ ಕಾರ್ಮಿಕರೂ ಈ ವರ್ಷ ಬಂದಿಲ್ಲ. ಕನ್ನಡ ಭಾಷೆ ಬಾರದ ಅಸ್ಸಾಂ, ಪಶ್ಚಿಮ ಬಂಗಾಳದ ಕಾರ್ಮಿಕರು ಮೇಸ್ತ್ರಿಗಳ ನಿಯಂತ್ರಣದಲ್ಲಿದ್ದಾರೆ. ತೋಟದ ಕಾರ್ಮಿಕರ ಇಡೀ ವ್ಯವಸ್ಥೆಯನ್ನು ಮೇಸ್ತ್ರಿಗಳು ನಿಯಂತ್ರಿಸುತ್ತಿದ್ದು, ಬೆಳೆಗಾರರು ಅನಿವಾರ್ಯವಾಗಿ ಹೆಚ್ಚಿನ ಕೂಲಿ ನೀಡಿ ಕಾಫಿ ಹಣ್ಣು ಕೊಯ್ಲು ಮಾಡಿಸುವ ಸ್ಥಿತಿ ಇದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರ

ಕಾಫಿ ಹಣ್ಣು ಕೊಯ್ಲು ಸಂದರ್ಭದಲ್ಲಿ ಕಾರ್ಮಿಕರು ಕುಟುಂಬ ಸಮೇತ ಬಂದು ತೋಟದ ಲೇನ್ ಮನೆಗಳಲ್ಲಿ ತಂಗುತ್ತಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ಹೋದರೆ ಮಕ್ಕಳು ಮನೆಯಲ್ಲೇ ಉಳಿಯುತ್ತಾರೆ. ಅವರನ್ನು ನೋಡಿಕೊಳ್ಳಲು ಗುಂಪಿನಲ್ಲೇ ಒಂದಿಬ್ಬರಿಗೆ ಸಂಬಳ ನೀಡಿ ನಿಗದಿ ಮಾಡಿಕೊಳ್ಳುತ್ತಾರೆ. ಇಡೀ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಅವರದ್ದರು. ಅವರಿಗೂ ದಿನದ ಕೂಲಿಯನ್ನು ಎಲ್ಲರೂ ಸೇರಿ ನೀಡುತ್ತಾರೆ.

ಆ ಮಕ್ಕಳು ಮಾತ್ರ ಶಿಕ್ಷಣದಿಂದ ದೂರ ಉಳಿಯುತ್ತಾರೆ. ಅಸ್ಸಾಂ, ಪಶ್ಚಿಮ ಬಂಗಾಳದಿಂದ ಬರುವ ಕಾರ್ಮಿಕರ ಮಕ್ಕಳಿಗೆ ಅದೇ ಭಾಷೆಯಲ್ಲಿ ಅರ್ಥ ಮಾಡಿಸಿ ಅಕ್ಷರ ಕಲಿಸುವ ಸಾಮರ್ಥ್ಯ ಸ್ಥಳೀಯ ಶಿಕ್ಷಕರಿಗೆ ಇಲ್ಲ. ಇದರಿಂದ ಇಡೀ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ.

ಪೂರಕ ಮಾಹಿತಿ: ಜೋಸೆಫ್ ಎಂ ಆಲ್ದೂರು, ರವಿಕುಮಾರ್ ಶೆಟ್ಟಿಹಡ್ಲು, ಕೆ ನಾಗರಾಜ್, ರವಿ ಕೆಳಂಗಡಿ, ಕೆ.ವಿ ನಾಗರಾಜ್

ಯಂತ್ರಗಳ ಮೊರೆ

ತರೀಕೆರೆ: ಅಡಿಕೆ ಮತ್ತು ಕಾಫಿ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಲಿಂಗದಹಳ್ಳಿ ಹೋಬಳಿಯ ಗುಡ್ಡಗಾಡು ಪ್ರದೇಶದ ಎಸ್ಟೇಟ್ಗಳಲ್ಲಿ ಕಾಫಿ ಬೆಳೆ ಇದ್ದರೆ ಲಿಂಗದಹಳ್ಳಿ ಉಳಿದ ಭಾಗ ಮತ್ತು ಅಮೃತಾಪುರ ತರೀಕೆರೆ ಕಸಬಾ ಮತ್ತು ಲಕ್ಕವಳ್ಳಿ ಹೋಬಳಿಯ ಬಹುಪಾಲು ಅಡಿಕೆ ಬೆಳೆ ಇದೆ. ತಾಲ್ಲೂಕಿನಲ್ಲಿ ಕಳೆದ ಮೂರು ತಿಂಗಳಿಂದಲೂ ಅಡಿಕೆ ಕೋಯ್ಲು ಪ್ರಾರಂಭವಾಗಿದೆ. ಅವಮಾನ ವೈಪರೀತ್ಯದಿಂದ ತಾಲ್ಲೂಕಿನಲ್ಲಿ ಈ ಬಾರಿ ಅಡಿಕೆ ಇಳುವಳಿ ಕಡಿಮೆಯಾಗಿದೆ. ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದ್ದು ರೈತರು ಯಂತ್ರೋಪಕರಣಗಳ ಮೊರೆ ಹೊಗುತ್ತಿದ್ದಾರೆ.

ಅಡಿಕೆ ಕೊಯ್ಲಿಗೂ ಕಂಟಕ

ಕೊಪ್ಪ: ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲು ಆರಂಭವಾಗಿದ್ದು ಕೃಷಿಕರು ಕೆಲಸದಲ್ಲಿ ಸಂಪೂರ್ಣ ನಿರತರಾಗಿದ್ದಾರೆ. ಅಗತ್ಯ ಇರುವಷ್ಟು ಕೂಲಿ ಕಾರ್ಮಿಕರು ಸಿಗದೇ ತೋಟದ ಮಾಲೀಕರೂ ಕೆಲಸದಲ್ಲಿ ತೊಡಗಿಸಿಕೊಳ್ಳುವಂತಾಗಿದೆ. ಕೆಲವು ಕಡೆಗಳಲ್ಲಿ ಒಂದು ಹಂತದ ಅಡಿಕೆ ಕೊಯ್ಲು ಮುಗಿದಿದ್ದು ಸ್ವಲ್ಪ ದಿನಗಳ ಬಿಡುವು ಮಾಡಿ ಎರಡನೇ ಹಂತದ ಅಡಿಕೆ ಗೊನೆ ತೆಗೆದು ಕೊಯ್ಲು ಮಾಡಲು ನಿರ್ಧರಿಸಿದ್ದಾರೆ. ಹದಿನೈದು ದಿನಗಳ ಹಿಂದೆ ಮಳೆ ವಾತಾವರಣ ಇದ್ದು ಕೃಷಿಕರು ಕಂಗಾಲಾಗಿದ್ದರು. ಇದೀಗ ಬಿಸಿಲು ವಾತಾವರಣವಿದ್ದು ಕೆಲಸ ಭರದಿಂದ ಸಾಗಿದೆ. ಮಲೆನಾಡು ಭಾಗದಲ್ಲಿ ಅಡಿಕೆ ಕಾಫಿ ಭತ್ತ ಕಾಳುಮೆಣಸು ಕೊಯ್ಲು ಒಂದೇ ಸಮಯದಲ್ಲಿ ಬರುವುದರಿಂದ ಸಹಜವಾಗಿ ಕಾರ್ಮಿಕರ ಕೊರತೆ ಎದುರಾಗಿದೆ. ಇದರಿಂದಾಗಿ ಭತ್ತ ಬೆಳೆಯುವುದು ಕಡಿಮೆಯಾಗಿದೆ. ಅಡಿಕೆ ತೋಟಕ್ಕೆ ಗೊಬ್ಬರ ಹಾಕಿ ಬೇಸಾಯ ಮಾಡಲು ಬಂದಿರುವ ಹೊರಗಿನ ಕಾರ್ಮಿಕರೂ ಇದೀಗ ಅಡಿಕೆ ಕೊಯ್ಲು ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ. ಅಡಿಕೆ ಗೊನೆ ತೆಗೆಯುವ ಕೆಲಸಗಾರರಿಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗೆ ಮರ ಏರಿ ಗೊನೆ ಕೀಳುವುದು ಕಡಿಮೆಯಾಗಿದ್ದು ಫೈಬರ್ ದೋಟಿ ಬಳಸಿ ಗೊನೆ ಕೀಳಲಾಗುತ್ತಿದೆ. ಅಂತೆಯೇ ಆ ಕೆಲಸಗಾರರು ಹಲವು ಸಮಸ್ಯೆ ಎರಿಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ತೋಟದ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಗೆ ದೋಟಿ ತಗುಲಿ ಮೃತಪಟ್ಟ ಪ್ರಕರಣಗಳೂ ಇವೆ. ಬಿಡುವಿಲ್ಲದ ಕೆಲಸವು ಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಸಿಪ್ಪೆ ಸುಲಿಯಲು ಕತ್ತಿ ಬದಲು ವಿದ್ಯುತ್ ಚಾಲಿತ ಯಂತ್ರ ಬಳಸಲಾಗುತ್ತಿದೆ. ಸರಿಯಾದ ಸಮಯಕ್ಕೆ ವಿದ್ಯುತ್ ಇರುವುದಿಲ್ಲ ಅಥವಾ ಇದ್ದರೂ ಓಲ್ಟೇಜ್ ಸಮಸ್ಯೆ ಇದೆ.

ಕಾರ್ಮಿಕರ ಕೊರತೆ: ಮಾಲೀಕರ ಪರದಾಟ

ಮೂಡಿಗೆರೆ: ತಾಲ್ಲೂಕಿನಲ್ಲಿ ಮಳೆ ಇಳಿಮುಖವಾದ ಬೆನ್ನಲ್ಲೇ ಕಾಫಿ ಅಡಿಕೆ ಭತ್ತ ಏಕ ಕಾಲದಲ್ಲಿ ಕೊಯ್ಲಿಗೆ ಬಂದಿದ್ದು ಕಾರ್ಮಿಕರಿಲ್ಲದೇ ರೈತರು ಪರದಾಡುವಂತಾಗಿದೆ. ತಾಲ್ಲೂಕಿನಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಹೊರ ರಾಜ್ಯದ ಕಾರ್ಮಿಕರೇ ಕೆಲಸ ಮಾಡುತ್ತಿದ್ದಾರೆ. ಸಂತೆಯಲ್ಲಿ ಮೀನು ಶುಚಿಗೊಳಿಸುವುದರಿಂದ ಕಟ್ಟಡ ನಿರ್ಮಾಣದವರೆಗೂ ಅಸ್ಸಾಂ ಪಶ್ಚಿಮ ಬಂಗಾಳದ ಕಾರ್ಮಿಕರು ಕಾಣಿಸುತ್ತಿದ್ದಾರೆ. ಸ್ಥಳೀಯ ಕಾರ್ಮಿಕರಿಗೆ ವಾಹನ ಸೌಲಭ್ಯ ಕಲ್ಪಿಸಬೇಕು ಕೆಲಸದ ಅವಧಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30ರ ತನಕ ಮಾತ್ರ. ಹೊರ ರಾಜ್ಯದ ಕಾರ್ಮಿಕರು ಬೆಳಿಗ್ಗೆ 9ರಿಂದ ಸಂಜೆ 5ರವರೆಗೂ ಕೆಲಸ ಮಾಡುತ್ತಿದ್ದು ಸ್ಥಳೀಯ ಕಾರ್ಮಿಕರಿಗಿಂತಲೂ ಹೊರ ರಾಜ್ಯದ ಕಾರ್ಮಿಕರಿಗೆ ವೇತನ ಕಡಿಮೆ ಇರುವುದರಿಂದ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂಬುದು ಲೆಕ್ಕಾಚಾರ. ಹೊರ ರಾಜ್ಯದ ಕಾರ್ಮಿಕರು ಕಾಫಿ ತೋಟದ ಲೇನ್ಗಳಲ್ಲಿ ನೆಲೆಸುವುದರಿಂದ ವಾಹನ ಸೌಲಭ್ಯದ ಖರ್ಚಿಲ್ಲ. ಆದರೆ ಹೊರ ರಾಜ್ಯದ ಕಾರ್ಮಿಕರು ಮಾಲೀಕರಿಂದ ಸಾಲ ಪಡೆದು ರಾತ್ರೋರಾತ್ರಿ ಊರು ಬಿಟ್ಟು ಹೋಗಿರುವ ಪ್ರಕರಣಗಳೂ ಇವೆ. ಹೊರ ರಾಜ್ಯದ ಕಾರ್ಮಿಕರಲ್ಲಿ ನಿಪುಣತೆಯ ಕೊರತೆಯಿದ್ದು ಕಟಾವಿನ ವೇಳೆ ಗಿಡಗಳನ್ನು ಹಾನಿ ಮಾಡುತ್ತಾರೆ ಎಂಬ ದೂರು ಇದೆ. ಏಕಕಾಲದಲ್ಲಿ ಕಾಫಿ ಅಡಿಕೆ ಭತ್ತದ ಕೊಯ್ಲು ಪ್ರಾರಂಭವಾಗಿದ್ದು ಉತ್ತರ ಕರ್ನಾಟಕದ ಕಾರ್ಮಿಕರು ಬಂದಿಲ್ಲ. ಹೊರ ರಾಜ್ಯದ ಕಾರ್ಮಿಕರೇ ಗತಿ ಎನ್ನುವಂತಾಗಿದೆ.

ಕಾಫಿ ಕೊಯ್ಲು: ವೇತನ ಹೆಚ್ಚಳ

ಆಲ್ದೂರು: ಕಾಫಿಗೆ ಉತ್ತಮ ಬೆಲೆ ಇರುವಾಗ ಕೊಯ್ಲು ಪೂರ್ಣಗೊಳಿಸಿ ಮಾರಾಟ ಮಾಡುವ ಹಂಬಲ ಬೆಳೆಗಾರರದು. ಕಾಫಿ ಕೊಯ್ಲಿನ ಸಂದರ್ಭದಲ್ಲಿ ಸ್ಥಳೀಯ ಕಾರ್ಮಿಕರಿಗೆ ಬೋನಸ್ ಇದ್ದಂತೆ. ವರ್ಷಪೂರ್ತಿ ₹500ರಿಂದ ₹600 ದಿನದ ಕೂಲಿ ಇದ್ದರೆ ಹಣ್ಣು ಕೊಯ್ಲಿನ ಸಂದರ್ಭದಲ್ಲಿ ಒಂದು ಬುಶಲ್ಗೆ ಕಾಫಿ ಹಣ್ಣು ಕೊಯ್ಲು ಮಾಡಲಿ ₹400 ರಿಂದ ₹450 ಪಡೆಯುತ್ತಾರೆ. ಗಿಡದಲ್ಲಿ ಫಸಲು ಚೆನ್ನಾಗಿದ್ದರೆ ದಿನಕ್ಕೆ ₹2 ಸಾವಿರ ಸಂಪಾದಿಸುತ್ತಾರೆ. ದಿನದ ಸಂಬಳವಾದರೆ ₹800 ನಡೆಯುತ್ತಿದೆ. ಕಾರ್ಮಿಕರಿಗೆ ವಾಹನ ಸೌಕರ್ಯವನ್ನು ಮಾಲೀಕರೇ ಕಲ್ಪಿಸಬೇಕು. ಸ್ಥಳೀಯ ತೋಟಗಳಿಗೆ ₹150 ರಿಂದ ₹200 ಆಟೊರಿಕ್ಷಾ ಬಾಡಿಗೆ ಇದೆ. ಇದೆಲ್ಲದರ ನಡುವೆ ಮೇಸ್ರಿಗೆ ಪ್ರತ್ಯೇಕವಾಗಿ ಕಮಿಷನ್ ನೀಡಬೇಕು. ಒಟ್ಟಾರೆ ಕಾಫಿ ಕೊಯ್ಲು ದುಬಾರಿಯಾಗಿದೆ ಎನ್ನುತ್ತಾರೆ ಬೆಳೆಗಾರ ನವೀನ್ ಬಿ.ಟಿ. ಕಾಫಿ ಬೆಲೆ ಈ ವರ್ಷ ಉತ್ತಮವಾಗಿದ್ದು ಸಂಬಳ ಹೊರೆ ಆಗುವುದಿಲ್ಲ. ಆದರೆ ಬೆಲೆ ಕುಸಿದರೆ ಬೆಳೆಗಾರರು ಕಷ್ಟಕ್ಕೆ ಸಿಲುಕುತ್ತಾರೆ. ಕಾಫಿ ತೋಟಗಳನ್ನು ನಿರ್ವಹಿಸುವುದೇ ಕಷ್ಟವಾಗಲಿದೆ ಎಂದು ಅವರು ಹೇಳುತ್ತಾರೆ.

ಕಾಫಿ ದುಡಿಮೆ ಹೊರ ರಾಜ್ಯಗಳ ಪಾಲು

ಕಳಸ: ಅಸ್ಸಾಂ ಮಧ್ಯಪ್ರದೇಶದಿಂದ ಕಾರ್ಮಿಕರ ವಲಸೆ ಶುರು ಆಗಿದೆ. ಈ ಕಾರ್ಮಿಕರು ಬಾರದಿದ್ದರೆ ದೊಡ್ಡ ತೋಟಗಳಲ್ಲಿ ಕಾಫಿ ಕೊಯ್ಲು ಅಸಾಧ್ಯ ಎಂಬಷ್ಟರ ಮಟ್ಟಗೆ ಸ್ಥಳೀಯ ಕಾರ್ಮಿಕರ ಸಮಸ್ಯೆ ಇದೆ. ಗುಡ್ಡಗಾಡು ಇಲ್ಲದ ಪೇಟೆಗೆ ಹತ್ತಿರದ ತೋಟಗಳಲ್ಲಿ ಕೆಲಸ ಮಾಡಲು ಬಯಸುತ್ತಾರೆ. ಕಳೆದ ವರ್ಷಗಳಲ್ಲಿ ದಿನಕ್ಕೆ ₹350-₹375 ಕೂಲಿಗೆ ದುಡಿಯುತ್ತಿದ್ದ ಇವರು ಈಗ ₹425-₹450 ಕೂಲಿಗೆ ಬೇಡಿಕೆ ಇಡುತ್ತಿದ್ದಾರೆ. ಹಲವಾರು ತೋಟಗಳಲ್ಲಿ ಕಾರ್ಮಿಕರು ಮುಂಗಡ ಹಣ ಪಡೆದು ರಾತ್ರೋರಾತ್ರಿ ಪರಾರಿ ಆಗುತ್ತಿರುವ ಘಟನೆ ನಡೆಯುತ್ತಿದೆ. ಸ್ಥಳೀಯ ಕಳ್ಳತನ ಘರ್ಷಣೆಗಳು ಕೂಡ ಆಗಾಗ ನಡೆಯಿತ್ತಿವೆ. ಕಾರ್ಮಿಕರ ಎಲ್ಲ ಮಾಹಿತಿಯನ್ನು ಹತ್ತಿರದ ಪೊಲಿಸ್ ಠಾಣೆಗೆ ಕೊಟ್ಟ ನಂತರವೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂಬ ನಿಯಮ ಇದ್ದರೂ ಅದು ಪಾಲನೆಯಾಗುತ್ತಿಲ್ಲ. ಇಂತಹ ಸಮಸ್ಯೆಗಳು ಏನೇ ಇದ್ದರೂ ಕಾಫಿ ಕೊಯ್ಲಿನ ಕೆಲಸವು ಹೇಗೋ ನಡೆಯುತ್ತಿದೆ ಎಂಬ ಸಮಾಧಾನ ಬೆಳೆಗಾರರದ್ದು. ವಿಶೇಷ ಎಂದರೆ ಈ ಕಾರ್ಮಿಕರು ತಾವು ಇಲ್ಲಿ ದುಡಿದ ಹಣದಲ್ಲಿ ಶೇ75ರಷ್ಟು ಮೊತ್ತವನ್ನು ಊರಿಗೆ ಕಳಿಸುತ್ತಾರೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.