ಶುಕ್ರವಾರ, ಅಕ್ಟೋಬರ್ 23, 2020
28 °C

ಮದಗದ ಕೆರೆಗೆ ಕಾಂಗ್ರೆಸ್‌ನಿಂದ ಬಾಗಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ರೈತರನ್ನು ದೂರವಿಟ್ಟು ಕಾರ್ಪೊರೇಟ್ ಸಂಸ್ಕೃತಿಯನ್ನು ಪೋಷಿಸುತ್ತಿರುವ ಸರ್ಕಾರವಿದು ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಆರೋಪಿಸಿದರು.

ಕಡೂರು ತಾಲ್ಲೂಕಿನ ಮದಗದ ಕೆರೆಗೆ ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು.

‘ರೈತರ ನೋವಿಗೆ ಸ್ಪಂದಿಸಲು ರೈತ ಜನಪ್ರತಿನಿಧಿಯಿಂದ ಮಾತ್ರ ಸಾಧ್ಯ. ರಾಜ್ಯದ ರೈತರಿಗೆ ಬಗರ್ ಹುಕುಂ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಸಿದ್ದರಾಮಯ್ಯ ಸರ್ಕಾರದ ಅವದಿಯಲ್ಲಿ ಆದೇಶಿಸಲಾಗಿತ್ತು. ಅವರ ರೈತಪರ ಕೆಲಸಗಳನ್ನು ಇಂದಿನ ರಾಜ್ಯ ಸರ್ಕಾರ ತಡೆಹಿಡಿದಿವೆ. ಇಂದಿನ ಚುನಾಯಿತ ಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಕಡಿಮೆ ಇರುವುದರಿಂದ ರೈತರಿಗೆ ಸಾಗುವಳಿ ಪತ್ರ ನೀಡಲಾಗಿಲ್ಲ’ ಎಂದರು

‘ತಾಲ್ಲೂಕಿನ ಜೀವನಾಡಿ ಕೆರೆ ತುಂಬಿದ್ದರೂ ಇದರ ಸರಣಿ ಕೆರೆಗಳು ತುಂಬಿಲ್ಲ. ಐದು ವರ್ಷಗಳ ಭೀಕರ ಬರಗಾಲದ ಕಹಿ ಅನುಭವ ನಮ್ಮೊಂದಿಗಿದೆ. ದೇವರ ಕೃಪೆಯಿಂದ ಮಳೆ ಮತ್ತಷ್ಟು ಚೆನ್ನಾಗಿ ಬಂದು ಎಲ್ಲ ಕೆರೆಗಳೂ ತುಂಬಲಿ. ಕೆರೆಗೆ ಭಾಗಿನ ಅರ್ಪಣೆ ಮಾಡುವುದು ನಮ್ಮ ಸಂಸ್ಕೃತಿ. ತಾಲ್ಲೂಕಿನ ರೈತರ ಪರವಾಗಿ ಅರ್ಪಿಸಿದ್ದೇವೆ. ಯಾವುದೇ ರಾಜಕೀಯ ದೃಷ್ಟಿಯಿಂದಲ್ಲ. ಮುಂದೆ ಅವಕಾಶ ದೊರೆತಲ್ಲಿ ರೈತರ ಧ್ವನಿಯಾಗುವ ಆಶಯ ತಮ್ಮದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಿಬಾಯಿ ಮಾತನಾಡಿ, ‘ಮದಗದಕೆರೆ ಆವರಣದಲ್ಲಿ ಪ್ರವಾಸಿ ಮಂದಿರದ ಅವಶ್ಯಕತೆ ಇದೆ. ಎಮ್ಮೆದೊಡ್ಡಿ ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನವಾಗಬೇಕು’ ಎಂದರು.

ಕಡೂಕು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಚಂದ್ರಮೌಳಿ, ಆಸಂದಿ ಕಲ್ಲೇಶ್, ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಬಸವರಾಜು, ಪುರಸಭೆ ಸದಸ್ಯ ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಶೀರ್ ಸಾಬ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.