ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ‘ಸಹಕಾರ ಸಮೃದ್ಧಿ’ ದೃಷ್ಟಿಕೋನ ಇಟ್ಟುಕೊಂಡು ಸಹಕಾರ ಸಚಿವಾಲಯ ರಚನೆ ಮಾಡಿರುವುದು ದೇಶದ ಸಹಕಾರಿ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಎಂದು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದ್ದಾರೆ.

‘ಸಹಕಾರ ಸಂಸ್ಥೆಗಳನ್ನು ಬಲಪಡಿಸಲು ಪ್ರತ್ಯೇಕವಾದ ಆಡಳಿತ, ಕಾನೂನು, ನೀತಿ ಚೌಕಟ್ಟನ್ನು ರಚಿಸಲು ಸಹಕಾರ ಸಚಿವಾಲಯ ರೂಪುರೇಷೆ ಸಿದ್ಧಪಡಿಸಲಿದೆ. ರಾಷ್ಟ್ರದ ಸಹಕಾರ ಚಳವಳಿಗೆ ವರದಾನವಾಗಲಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಭಾರತದಲ್ಲಿ ಸಹಕಾರ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿದೆ. ದೇಶದ ಮೊದಲ ಸಹಕಾರ ಸಂಘವು ರಾಜ್ಯದ
ಗದಗ ಜಿಲ್ಲೆಯ ಕಣಗಿನಾಳ ಗ್ರಾಮದಲ್ಲಿ 1905ರಲ್ಲಿ ನೋಂದಾಯಿತವಾಯಿತು. ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಅವರು ಸಂಸ್ಥಾಪಕರ ಅಧ್ಯಕ್ಷರಾಗಿದ್ದರು. ಅವರು ದೇಶದ ಸಹಕಾರ ಚಳವಳಿಯ ಆದ್ಯ ಪ್ರವರ್ತಕರಾಗಿದ್ದರು’ ಎಂದು ತಿಳಿಸಿದ್ದಾರೆ.

‘ಸಹಕಾರಿ ಬ್ಯಾಂಕ್‌ಗಳಿಂದಾಗಿ ಗ್ರಾಮೀಣ ಭಾರತದ ಕೃಷಿಕರು, ಬಡ ಜನರು ಹಾಗೂ ಮಹಿಳೆಯರಲ್ಲಿ ಆರ್ಥಿಕ ಸಾಮರ್ಥ್ಯ, ಆತ್ಮವಿಶ್ವಾಸ ವೃದ್ಧಿಸುತ್ತಿರುವುದೇ ಇದಕ್ಕೆ ಸಾಕ್ಷಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.