ಅಜ್ಜಂಪುರ: ಭಾರಿ ಮಳೆಯಿಂದಾಗಿ ಇಲ್ಲಿಗೆ ಸಮೀಪದ ಅಂತರಗಟ್ಟೆ ಬಳಿಯ, ಎಚ್.ತಿಮ್ಮಾಪುರ-ಹನುಮನಹಳ್ಳಿ ನಡುವಿನ ಹಳ್ಳ ಭರ್ತಿಯಾಗಿದೆ. ಹಳ್ಳದ ಹೊರ ಹರಿವು ಹೆಚ್ಚಾಗಿದ್ದು, ರಸ್ತೆಯ ಮೇಲೆ ನೀರು ಹರಿಯಿತು.

ಹಳ್ಳದ ನೀರು ಚನ್ನಗಿರಿ, ತರೀಕೆರೆ, ಅಜ್ಜಂಪುರ ತಾಲ್ಲೂಕಿನ ಸುಮಾರು 22 ಕೆರೆಗಳ ಮೂಲಕ ವಾಣಿವಿಲಾಸ ಸಾಗರ ಜಲಾಶಯ ಸೇರುತ್ತದೆ. ಈ ಪಥದಲ್ಲಿನ ಕುಕ್ಕೆ ಸಮುದ್ರ ಕೆರೆಯ ಹಿನ್ನೀರು, ಎಚ್.ತಿಮ್ಮಾಪುರ, ಕಲ್ಕೆರೆ, ಹನುವನಹಳ್ಳಿ, ಚಿಕ್ಕಬಳ್ಳೇಕೆರೆ, ಕೆರೆ ಹೊಸಹಳ್ಳಿ ಭಾಗದ ಕೃಷಿ ಭೂಮಿ ಮೇಲೆ ಹರಿದು, ಬೆಳೆ ಹಾನಿಯಾಗಿದೆ.

ಹಳ್ಳದ ನೀರಿನ ಪ್ರವಾಹಕ್ಕೆ ಸಿಲುಕಿ ಈರುಳ್ಳಿ ಗಡ್ಡೆ ಕೊಚ್ಚಿ ಹೋಗಿದೆ. ಮೆಣಸಿನ ಕಾಯಿ ಗಿಡ ನೆಲಕಚ್ಚಿವೆ. ಬಿತ್ತನೆಯಾಗಿದ್ದ ರಾಗಿ, ಜೋಳ, ಕಡಲೆಕಾಳು ಬೀಜ ನೀರಿನಲ್ಲಿ ತೇಲಿ ಹೋಗಿವೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ರೈತಚನ್ನಬಸಪ್ಪ ಅಳಲು ತೋಡಿಕೊಂಡಿದ್ದಾರೆ.

ಅಂತರಗಟ್ಟೆ-ಚಿಕ್ಕಬಳ್ಳೇಕೆರೆ ರಸ್ತೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ಹಡಗಲು-ಕಳ್ಳಿಹೊಸಹಳ್ಳಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಗ್ರಾಮಗಳ ನಿವಾಸಿಗಳು ಸುತ್ತಿ ಬಳಸಿ ಗ್ರಾಮ ಸೇರುವಂತಾಗಿದೆ ಎಂದು ಸ್ಥಳೀಯ ನಿವಾಸಿ ರೇವಣ್ಣ ಕಷ್ಟ ಹೇಳಿಕೊಂಡಿದ್ದಾರೆ.

ಹಳ್ಳಕ್ಕೆ ವೈಜ್ಞಾನಿಕವಾದ ಸೇತುವೆ ನಿರ್ಮಿಸಿಲ್ಲ. ಹಳ್ಳದ ಪಥ ಸ್ವಚ್ಛಗೊಳಿಸಿಲ್ಲ. ಪಥ ವಿಸ್ತರಣೆ ಮಾಡದೆ ಹಳ್ಳದ ಮೂಲಕ ವಾಣಿ ವಿಲಾಸ ಸಾಗರಕ್ಕೆ ಭದ್ರೆ ನೀರು ಹರಿಯುತ್ತಿದೆ. ಇದರಿಂದಲೇ ನಮ್ಮ ಭಾಗದಲ್ಲಿ ಬೆಳೆ ಹಾನಿ ಸಂಭವಿಸುತ್ತಿದೆ. ಇದಕ್ಕೆ ಭದ್ರಾ ಮೇಲ್ದಂಡೆ ಅಧಿಕಾರಿಗಳೇ ಕಾರಣ ಎಂದು ರೈತ ಮಲ್ಲೇಶಪ್ಪ ಆರೋಪಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್, ಜಿಲ್ಲಾಧಿಕಾರಿ ಭೇಟಿ ನೀಡಬೇಕು. ಬೆಳೆ ಕಳೆದುಕೊಂಡವರಿಗೆ ಪರಿಹಾರ ವಿತರಿಸಬೇಕು. ಹಳ್ಳದ ನೀರಿನಿಂದಾಗಿ ಬಿತ್ತನೆ ಬೀಜ ಕಳೆದುಕೊಂಡವರಿಗೆ, ಪುನ: ಬಿತ್ತನೆ ಮಾಡಲು ಉಚಿತವಾಗಿ ಬಿತ್ತನೆ ಬೀಜ ಕೊಡಬೇಕು ಎಂದು ರೈತ ರವಿಕುಮಾರ್ ಒತ್ತಾಯಿಸಿದ್ದಾರೆ.

ಹಳ್ಳದ ನೀರು ಹೊಲಗಳಿಗೆ ಹರಿಯದಂತೆ ಶಾಶ್ವತ ಪರಿಹಾರ ರೂಪಿಸಬೇಕು. ಹನುಮನಹಳ್ಳಿ-ಎಚ್. ತಿಮ್ಮಾಪುರ ನಡುವಿನ ಹಳ್ಳಕ್ಕೆ ಸೇತುವೆ ಕಟ್ಟಬೇಕು. ಹಳ್ಳದ ಪಥದಂಚಿನ ಜಮೀನಿಗೆ ಕಲ್ಲಿನ ರಿವೀಟ್ ನಿರ್ಮಿಸಬೇಕು. ಇದಕ್ಕೆ ಸರ್ಕಾರ, ಹಣ ಬಿಡುಗಡೆಗೊಳಿಸಬೇಕು. ಇಲ್ಲವಾದರೆ ಅಂತರಗಟ್ಟೆ, ಕಲ್ಕೆರೆ, ಚಿಕ್ಕಬಳ್ಳೇಕೆರೆ, ಅಂತರಗಟ್ಟೆ ರೈತರು, ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಮುಖಂಡ ಹಾಲಸಿದ್ದಪ್ಪ ಎಚ್ಚರಿಕೆ ನೀಡಿದ್ದಾರೆ.

ಕಾಲುವೆ ಮೂಲಕ ಹರಿಸುತ್ತಿದ್ದ ಭದ್ರೆ ನೀರನ್ನು ನಾಲ್ಕು ದಿನದ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಹೆಚ್ಚಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬೆಳೆ ಹಾನಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಭದ್ರಾ ಮೇಲ್ದಂಡೆ ಯೋಜನೆ ಎಇಇ ಸಿದ್ದೇಶ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.