ಮಂಗಳವಾರ, ಜನವರಿ 28, 2020
29 °C
ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ತಾಣ

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ತಾಣಕ್ಕೆ ಇದೇ 23ರಿಂದ ಕೆಎಸ್‌ಆರ್‌ಟಿಸ್‌ ಬಸ್‌ ಸಂಚಾರ ಕಲ್ಪಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ 23ರಂದು ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡುವರು. ಬಸ್ಸು ಪ್ರತಿದಿನ ನಾಲ್ಕು ಬಾರಿ ಗಿರಿಗೆ ಸಂಚರಿಸಲಿದೆ.

‘38 ಆಸನ ಸೌಲಭ್ಯದ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗಿರಿಶ್ರೇಣಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬುದು ಆ ಭಾಗದ ಊರುಗಳ ಜನರ ಬಹುದಿನಗಳಿಂದ ಬೇಡಿಕೆಯಾಗಿತ್ತು’ ಎಂದು ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ ವೇಳಾಪಟ್ಟಿ ಇಂತಿದೆ: ಚಿಕ್ಕಮಗಳೂರಿನಿಂದ ಬೆಳಿಗ್ಗೆ 7ಕ್ಕೆ ಹೊರಟು 8 ಗಂಟೆಗೆ ಗಿರಿ ತಲುಪಲಿದೆ, ಗಿರಿಯಿಂದ 8.30ಕ್ಕೆ ಹೊರಟು 9.30ಕ್ಕೆ ನಗರಕ್ಕೆ ತಲುಪಲಿದೆ.

ನಗರದಿಂದ 10ಕ್ಕೆ ಹೊರಟು 11 ಕ್ಕೆ ಗಿರಿ, 11.30ಕ್ಕೆ ಗಿರಿಯಿಂದ ಹೊರಟು 12.30ಕ್ಕೆ ನಗರ, ನಗರದಿಂದ ಮಧ್ಯಾಹ್ನ 1 ಕ್ಕೆ ಹೊರಟು 2 ಗಂಟೆಗೆ ಗಿರಿ, ಗಿರಿಯಿಂದ 2.30ಕ್ಕೆ ಹೊರಟು 3.30ಕ್ಕೆ ನಗರ, ಸಂಜೆ 4ಕ್ಕೆ ನಗರದಿಂದ ಹೊರಟು 5ಗಂಟಗೆ ಗಿರಿ ಹಾಗೂ 5.30ಕ್ಕೆ ಗಿರಿಯಿಂದ ಹೊರಟು ಸಂಜೆ 6.30ಕ್ಕೆ ನಗರ ತಲುಪಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು