ಶನಿವಾರ, ಆಗಸ್ಟ್ 13, 2022
24 °C
21ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

ಡಿಸಿಸಿ ಬ್ಯಾಂಕ್‌: 15 ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ನ 13 ನಿರ್ದೇಶಕ ಸ್ಥಾನಗಳ ಚುನಾವಣೆಗೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಈವರೆಗೆ 13 ಮಂದಿಯಿಂದ 15 ನಾಮ ಪತ್ರ ಸಲ್ಲಿಕೆಯಾಗಿವೆ. ಇದೇ 21ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ.

13 ಮಂದಿ ಪೈಕಿ ಇಬ್ಬರು ತಲಾ 2 ನಾಮಪತ್ರ ಸಲ್ಲಿಸಿದ್ದಾರೆ. ಪಿಎಸಿಎಸ್‌ ಸ್ಥಾನಕ್ಕೆ ಚಿಕ್ಕಮಗಳೂರಿನಿಂದ ಎಸ್‌.ಎಲ್‌. ಭೋಜೇಗೌಡ, ಟಿ.ಇ.ಮಂಜು ನಾಥ್‌, ನಿರಂಜನ್‌ ಹಾಗೂ ತರೀಕೆರೆಯಿಂದ ವಿಕುಮಾರ್‌, ಓಂಕಾರ ಸ್ವಾಮಿ, ಮೂಡಿಗೆರೆಯಿಂದ ಸಂದೀಪ್‌, ಹಲಸಮನೆ ಶಿವಣ್ಣ, ಶಿವರಾಜ ಕಲ್ಮನೆ, ಕಡೂರಿನಿಂದ ಇಬ್ಬರು, ಚಿಕ್ಕಮಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾನಕ್ಕೆ ಎಸ್‌.ಎಲ್‌.ಧರ್ಮೇಗೌಡ, ಇತರ ಸಹಕಾರ ಸಂಘ ಸ್ಥಾನಕ್ಕೆ ಆನಂದ ಕುಮಾರ್‌, ರಮೇಶ್‌ ಸಲ್ಲಿಸಿದ್ದಾರೆ.

ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿಯಿಂದ ಈವರೆಗೆ ಯಾರು ನಾಮಪತ್ರ ಸಲ್ಲಿಸಿಲ್ಲ ಎಂದು ಚುನಾವಣಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ತಿಳಿಸಿದ್ದಾರೆ.

13 ಸ್ಥಾನಗಳು: ಪ್ರಾಥಮಿಕ ಕೃಷಿ ಪತ್ತಿನ ಸಂಘ(ಪಿಎಸಿಎಸ್‌) ಚಿಕ್ಕಮಗಳೂರು, ತರೀಕೆರೆ, ಕಡೂರು ತಲಾ ಎರಡು, ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ, ಶೃಂಗೇರಿ ತಲಾ ಒಂದು ,ಇತರ ಸಹಕಾರ ಸಂಘಗಳ ಒಂದು ಸ್ಥಾನ, ಚಿಕ್ಕಮಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಎರಡು ಸಹಿತ ಒಟ್ಟು 13 ಸ್ಥಾನಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು