ಚಿಕ್ಕಮಗಳೂರು: ಬದುಕಿರುವ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆದು ಆಸ್ತಿ ಕಬಳಿಸಲು ಪ್ರಕರಣ ಸಖರಾಯಪಟ್ಟಣ ಹೋಬಳಿ ಗುಂಡಸಾಗರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮ ರಾಮೇಗೌಡ ಅವರ ಪತ್ನಿ ಗಂಗಮ್ಮ(75) ಅವರು 2024ರ ಜುಲೈ 4ರಂದು ಮೃತಪಟ್ಟಿದ್ದಾರೆ ಎಂದು ಅರ್ಜಿ ಸಲ್ಲಿಸಿ ಮರಣ ಪ್ರಮಾಣ ಪತ್ರವನ್ನು ತಾಲ್ಲೂಕು ಕಚೇರಿಯಿಂದ ಪಡೆಯಲಾಗಿದೆ. ಅವರ ಹೆಸರಿನಲ್ಲಿದ್ದ 12 ಎಕರೆ ಜಮೀನಿನ ಪೈಕಿ 5 ಎಕರೆಗೂ ಹೆಚ್ಚು ಜಮೀನನ್ನು ಸಂಬಂಧಿಕರು ಖಾತೆ ಮಾಡಿಸಿಕೊಂಡಿದ್ದರು.

ಗಂಗಮ್ಮ ಅವರಿಗೆ ಒಬ್ಬ ಗಂಡು ಮಗ ಮತ್ತು ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಇವರ ಹೆಸರಿಗೂ ಖಾತೆ ಬದಲಾವಣೆ ಮಾಡದೆ ನಕಲಿ ವಂಶವೃಕ್ಷ ಸೃಷ್ಟಿಸಿ ಸಂಬಂಧಿಕರು ಆಸ್ತಿ ಲಪಟಾಯಿಸಿದ್ದಾರೆ ಎಂಬ ಗಂಗಮ್ಮ ಅವರ ಮಗಳು ಚಂದ್ರಮ್ಮ ಅವರ ಪತಿ ರಾಜಪ್ಪ ದೂರು ನೀಡಿದ್ದಾರೆ.

‘ನಾಲ್ವರು ಅಕ್ರಮ ಕೂಟ ಕಟ್ಟಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಜೀವಂತ ಇರುವ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದವರು ಯಾರು, ಗ್ರಾಮ ಆಡಳಿತಾಧಿಕಾರಿ ಮುದ್ರೆಯನ್ನು ಎಲ್ಲಿ ಮಾಡಿಸಿದರು ಎಂಬುದರ ಕುರಿತು ತನಖೆ ನಡೆಸಿ ವರದಿ ನೀಡಬೇಕು’ ಎಂದು ಕಂದಾಯ ನಿರೀಕ್ಷಕರಿಗೆ ತಹಶೀಲ್ದಾರ್ ಆದೇಶ ನೀಡಿದ್ದಾರೆ.

ಮತ್ತೊಂದೆಡೆ ರಾಜಪ್ಪ ಅವರು ದೂರು ನೀಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಹಶೀಲ್ದಾರ್ ಅವರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಸ್ವಯಂ ಮೇಲ್ಮನವಿ ಸಲ್ಲಿಸಿದ್ದಾರೆ. ಏಳು ಜನ ಸಂಬಂಧಿಕರನ್ನು ಪ್ರತಿವಾದಿ ಮಾಡಿದ್ದಾರೆ.

ವಿಚಾರಣೆ ನಡೆಸಿರುವ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ, ಅಷ್ಟೂ ಖಾತೆಗಳನ್ನು ರದ್ದುಪಡಿಸಲು ಆದೇಶಿಸಿದ್ದಾರೆ.

‘ಒಟ್ಟು ಐದು ಎಕರೆಗೂ ಹೆಚ್ಚು ಜಾಗವನ್ನು ಮೂವರ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಗಂಗಮ್ಮ ಅವರ ಮಗನಿಗೂ ಬೆದರಿಕೆ ಹಾಕಲಾಗುತ್ತಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ’ ಎಂದು ರಾಜಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಜೀವಂತ ಇರುವ ಮಹಿಳೆ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಂಗಮ್ಮ ಅವರಿಗೆ ನ್ಯಾಯ ಒದಗಿಸಬೇಕು’ ಎದು ಎಂದು ಒತ್ತಾಯಿಸಿದರು.

ಕಂದಾಯ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿಗೆ ನೋಟಿಸ್ ನೀಡಲಾಗಿದ್ದು ಅವರಿಂದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
–ಸಿ.ಎಸ್. ಪೂರ್ಣಿಮಾ ತಹಶೀಲ್ದಾರ್ ಕಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.