ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಶೃಂಗೇರಿಯ ಶಾರಾದಾ ಪೀಠದ ಸ್ವಾಮೀಜಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣದಲ್ಲಿ ಧಾರವಾಡದ ದಾದಾ ಸಾಹೇಬ್ ಫಕ್ರುದ್ದಿನ್ ಗೋಡೆವಾಲೆ ಅಲಿಯಾಸ್ ಮುನ್ನಾ ಅಜರ್ (28) ಎಂಬಾತಗೆ ಮೂರು ವರ್ಷ ಸಜೆ, ₹3 ಸಾವಿರ ದಂಡವನ್ನು ಶೃಂಗೇರಿಯ ಜೆಎಂಎಫ್ಸಿ ಕೋರ್ಟ್ ಮಂಗಳವಾರ ವಿಧಿಸಿದೆ.

ನ್ಯಾಯಾಧೀಶರಾದ ದಾಸರಿ ಕ್ರಾಂತಿಕಿರಣ್ ಅವರು ಈ ಆದೇಶ ನೀಡಿದ್ದಾರೆ. ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ ಮೂರು ತಿಂಗಳು ಸಜೆ ಅನುಭವಿಸಬೇಕು ಎಂದು ತಿಳಿಸಿದ್ದಾರೆ.

ಆನೆ ಹತ್ಯೆ ಆರೋಪಿ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಯತ್ನ ಆರೋಪ: ಸಿಎಂಗೆ ಮನೇಕಾ ಪತ್ರ

‘ಮುನ್ನಾ ಅಜರ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಶೃಂಗೇರಿ ಸ್ವಾಮೀಜಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿ, ಸ್ವಾಮೀಜಿ ಅವರ ಫೋಟೊ ಕೆಳಗೆ ‘ಹಮಾರಾ ಗಾಂವ್ ಕಾ ಕುತ್ತಾ ಹೇ ತು’ ಎಂದು ಬರೆದಿರುವುದಾಗಿ ಹರೀಶ್ ವಿ.ಶೆಟ್ಟಿ ಎಂಬವರು ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2015ರ ನವೆಂಬರ್ 29ರಂದು ಪ್ರಕರಣ ನಡೆದಿತ್ತು. ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು’ ಎಂದು ಪ್ರಕರಣದಲ್ಲಿ ವಾದ ಮಂಡಿಸಿದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಣಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.