ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲಸು ಬೆಳೆಯಿಂದ ಆರ್ಥಿಕ ಲಾಭ: ಜಯದೇವಪ್ಪ

Published : 22 ಆಗಸ್ಟ್ 2024, 14:27 IST
Last Updated : 22 ಆಗಸ್ಟ್ 2024, 14:27 IST
ಫಾಲೋ ಮಾಡಿ
Comments

ಕಡೂರು:‘ವೈಜ್ಞಾನಿಕ ರೀತಿಯಲ್ಲಿ ಹಲಸು ಬೆಳೆದರೆ ಆರ್ಥಿಕ ಲಾಭ ಮಾಡಿಕೊಳ್ಳಬಹುದಾದ ಅವಕಾಶಗಳು ಹೇರಳವಾಗಿವೆ’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ಹೇಳಿದರು.

ಗುರುವಾರ ಕಡೂರಿನಲ್ಲಿ ಫ್ಲೋರಜಾ ಸಂಸ್ಥೆ ಹಲಸು ಬೆಳೆ ಕುರಿತು ರೈತರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಕಡೂರು ಪ್ರದೇಶದ ಮಣ್ಣು ಅತ್ಯುತ್ಕೃಷ್ಟವಾಗಿದೆ.ಏಲಕ್ಕಿ, ಲವಂಗ, ಸೇಬು ಸೇರಿದಂತೆ ಹಲವು ಬಗೆಯ ತೋಟಗಾರಿಕಾ ಬೆಳೆಗಳನ್ನು ಇಲ್ಲಿ ಬೆಳೆಯಬಹುದು. ಯಾವುದೇ ಬೆಳೆಯಾಗಲಿ, ಅದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬೆಳೆದರೆ ನಷ್ಟದ ಸಾಧ್ಯತೆ ಕಡಿಮೆ ಇರುತ್ತದೆ’ ಎಂದರು.

ಸಾಂಪ್ರದಾಯಿಕವಾಗಿ ಹಲಸು ಬೆಳೆದರೆ ಅದರಲ್ಲಿ ಆದಾಯ ಪಡೆಯುವ ಅವಧಿ  ಧೀರ್ಘವಾಗಿರುತ್ತದೆ. ಆದರೆ, ಸುಧಾರಿತ ತಳಿಗಳಿಂದ ಕೇವಲ ಎರಡೂವರೆ- ಮೂರು ವರ್ಷಗಳಲ್ಲಿ ಆದಾಯ ಪಡೆಯಬಹುದು. ಒಂದು ಎಕರೆ ಪ್ರದೇಶದಲ್ಲಿ 300 ಹೈಬ್ರಿಡ್ ಹಲಸಿನ ಗಿಡಗಳನ್ನು ಹಾಕಬಹುದು. ಈ ತಳಿಯಿಂದ ಹಲಸಿನ ಹಣ್ಣು ಮಾತ್ರವಲ್ಲ, ಇತರೆ ಮೌಲ್ಯವರ್ಧಿತ ಉತ್ಪನ್ನಗಳನ್ನೂ ಮಾಡಿ ಹೆಚ್ಚಿನ ಲಾಭ ಪಡೆಯಬಹುದಾಗಿದೆ’ ಎಂದರು.

ಫ್ಲೋರಜಾ ಸಂಸ್ಥೆಯ ಕ್ಷೇತ್ರ ವಿಸ್ತರಣಾಧಿಕಾರಿ ಮುರುಳಿ ಮೋಹನ್ ಮಾತನಾಡಿ, ‘ಕಡೂರು ತಾಲ್ಲೂಕಿನಲ್ಲಿ 1500 ಎಕರೆಯಷ್ಟು ಹಲಸಿನ ಬೆಳೆ ಪ್ರದೇಶ ವಿಸ್ತರಿಸುವ ಗುರಿ ಹೊಂದಲಾಗಿದೆ. ರೈತರು ಸ್ವಯಂ ಚಿಂತನೆ ನಡೆಸಿ ಹಲಸು ಬೆಳೆಯತ್ತ ಚಿತ್ತ ಹರಿಸಬಹುದು’ ಎಂದರು.

ಸಂಸ್ಥೆಯ ವ್ಯವಸ್ಥಾಪಕ ಬಿ.ಎಸ್.ನಟರಾಜ್, ಮಲ್ಲಿಕಾರ್ಜುನ್, ಉಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT