ಚಿಕ್ಕಮಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸಲು ಹಲವು ಪ್ರಯತ್ನಗಳು ನಡೆಯುತ್ತಿರುವ ನಡುವೆ ಶೂನ್ಯ ದಾಖಲಾತಿ ಶಾಲೆಗಳ ಪಟ್ಟಿ ಬೆಳೆಯುತ್ತಲೇ ಇದೆ. ನಾಲ್ಕು ವರ್ಷಗಳಲ್ಲಿ ಈ ರೀತಿಯ ಶಾಲೆಗಳ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಾಗಿಲು ಮುಚ್ಚುವ ಶಾಲೆಗಳ ಸಂಖ್ಯೆ ಕಡಿಮೆ ಇದೆ. 17 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ್ದು, ಮಕ್ಕಳು ಸರ್ಕಾರಿ ಶಾಲೆಯ ಕಡೆಗೆ ಬರುತ್ತಿದ್ದಾರೆ.

2025-26ನೇ ಶೈಕ್ಷಣಿಕ ವರ್ಷದ ದಾಖಲಾತಿ ಬಹುತೇಕ ಪೂರ್ಣಗೊಂಡಿದೆ. ಮಕ್ಕಳು ಶಾಲೆಯತ್ತ ಬರಲು ಆರಂಭಿಸಿದ್ದಾರೆ. ಆದರೆ, ಈ ವರ್ಷ 5 ಸರ್ಕಾರಿ ಶಾಲೆಗಳಿಗೆ ಮಕ್ಕಳು ಬಾರಲೇ ಇಲ್ಲ. ನಾಲ್ಕು ವರ್ಷಗಳ ಅಂಕಿ ಅಂಶ ಗಮನಿಸಿದರೆ 2022–23ನೇ ಸಾಲಿನಲ್ಲಿ ಅತಿ ಹೆಚ್ಚು 24 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಕಂಡು ಬಂದಿದೆ. 2023–24ನೇ ಸಾಲಿನಲ್ಲಿ 22 ಶಾಲೆಗಳು ಬಾಗಿಲು ಮುಚ್ಚಿವೆ. 2024–25ನೆ ಸಾಲಿನಲ್ಲೂ 23 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. 2025–26ನೇ ಸಾಲಿನಲ್ಲಿ ಈವರೆಗೆ 5 ಶಾಲೆಗಳಲ್ಲಿ ಮಾತ್ರ ಬಾಗಿಲು ಮುಚ್ಚುವ ಹಂತದಲ್ಲಿವೆ.

ಜಿಲ್ಲೆಯಲ್ಲಿ 8 ಶೈಕ್ಷಣಿಕ ವಲಯಗಳಿದ್ದು, ಈ ಪೈಕಿ ಬೀರೂರು ವಲಯದಲ್ಲಿ ಮೂರು, ಚಿಕ್ಕಮಗಳೂರು ಮತ್ತು ಮೂಡಿಗರೆ ವಲಯದಲ್ಲಿ ತಲಾ ಒಂದು ಶಾಲೆಗಳು ಈ ವರ್ಷ ಶೂನ್ಯ ದಾಖಲಾತಿ ಹೊಂದಿವೆ. ಬೀರೂರಿನ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಪಾರ್ವತಿ ನಗರದ ಕಿರಿಯ ಪ್ರಾಥಮಿಕ ಶಾಲೆ, ಎನ್.ಜಿ.ಮಠದ ಕಿರಿಯ ಪ್ರಾಥಮಿಕ ಶಾಲೆ, ಚಿಕ್ಕಮಗಳೂರು ವಲಯದ ಬಂಡೀಹಳ್ಳಿ ಕಿರಿಯ ಪ್ರಾಥಮಿಕ ಶಾಲೆ, ಮೂಡಿಗೆರೆ ವಲಯದ ಕಿರುಗಲಮನೆಯ ಕಿರಿಯ ಪ್ರಾಥಮಿಕ ಶಾಲೆಗಳನ್ನು ಶೂನ್ಯ ದಾಖಲಾತಿ ಎಂದು ಪರಿಗಣಿಸಲಾಗಿದೆ.

ಕಳೆದ ಸಾಲಿನಲ್ಲಿ ಮಲೆನಾಡು ಭಾಗದ ಶಾಲೆಗಳಲ್ಲಿ ಹೆಚ್ಚಾಗಿ ಶೂನ್ಯ ದಾಖಲಾತಿ ಇತ್ತು. ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕಿನ ಸರ್ಕಾರಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಿದ್ದವು. ಈ ವರ್ಷ ಮೂಡಿಗೆರೆಯ ಒಂದು ಶಾಲೆ ಹೊರತುಪಡಿಸಿ ಮಲೆನಾಡಿನ ಸರ್ಕಾರಿ ಶಾಲೆಗಳು ಯಾವೂ ಮುಚ್ಚುವ ಹಂತಕ್ಕೆ ಬಂದಿಲ್ಲ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಅನಿವಾರ್ಯ ಎಂಬ ಆಲೋಚನೆಗಳು ಪೋಷಕರಲ್ಲಿ ನೆಲೆಯೂರಿವೆ. ಇದರಿಂದಾಗಿಯೇ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳಲ್ಲೂ ಈಗ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ 17 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಶೂನ್ಯ ದಾಖಲಾತಿ ಕಡಿಮೆಯಾಗಲು ಇದು ಕಾರಣ ಇರಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಇನ್ನೂ 104 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಬುಧವಾರವಷ್ಟೇ ಅನುಮತಿ ದೊರಕಿದ್ದು, ಇದರಿಂದಲೂ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಹೊಸದಾಗಿ 104 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ರಾಜ್ಯದಲ್ಲಿ 4134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ(ದ್ವಿಭಾಷಾ ಮಾಧ್ಯಮ) ಆರಂಭಿಸಲು ಅನುಮತಿ ನೀಡಿದ್ದು ಈ ಪೈಕಿ ಚಿಕ್ಕಮಗಳೂರು ಜಿಲ್ಲೆಗೂ 104 ಶಾಲೆಗಳಿಗೆ ಅನುಮತಿ ದೊರಕಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 16 ಶೃಂಗೇರಿಯಲ್ಲಿ 13 ಕಡೂರು ಕೊಪ್ಪ ಮೂಡಿರೆರೆ ಎನ್.ಆರ್.ಪುರ ತರೀಕೆರೆ ತಾಲ್ಲೂಕಿನಲ್ಲಿ ತಲಾ 15 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಅನುಮತಿ ನೀಡಿ ಸರ್ಕಾರ ಜುಲೈ 2ರಂದು ಆದೇಶ ಹೊರಡಿಸಿದೆ.

ಶೂನ್ಯ ದಾಖಲಾತಿ ಶಾಲೆಗಳ ಸಂಖ್ಯೆ ವರ್ಷ; ಶಾಲೆಗಳು 2022–23; 24 2023–24; 22 2024–25; 23 2025–26; 5 ಒಟ್ಟು; 74

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.