ಭಾನುವಾರ, ಸೆಪ್ಟೆಂಬರ್ 25, 2022
21 °C
ಬಣಕಲ್‌ನಲ್ಲಿ ಕೆಸರುಗದ್ದೆ ಕ್ರೀಡಾಕೂಟ: ಕೊಡಪಾನ ನಡಿಗೆ, ಹಗ್ಗಜಗ್ಗಾಟ

‘ಗ್ರಾಮೀಣ ಕ್ರೀಡೆಯಿಂದ ಜೀವನೋತ್ಸಾಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟಿಗೆಹಾರ:‘ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಮಾಜಿ ಯೋಧ ಎನ್.ಟಿ.ದಿನೇಶ್ ಹೇಳಿದರು.

ಬಣಕಲ್ ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಬಣಕಲ್‍ನ ಕುವೆಂಪು ನಗರದ ಕೆಸರುಗದ್ದೆಯಲ್ಲಿ ನಡೆದ ‘ಕೆಸರಲ್ಲಿ ಒಂದು ದಿನ’ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

‘ಕೆಸರು ಗದ್ದೆ ಕ್ರೀಡಾಕೂಟವು ಮನೋರಂಜನೆಯ ಜತೆ ದೈಹಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಜಂಜಾಟದ ಜೀವನದ ನಡುವೆ ಕೆಲ ಸಮಯ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜೀವನೋತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ' ಎಂದರು.

ಕಪುಚಿನ್ ಕೃಷಿಕ ಸೇವಾ ಕೇಂದ್ರದ ನಿರ್ದೇಶಕ ಫಾ.ಎಡ್ವಿನ್ ರಾಕೇಶ್ ಡಿಸೋಜ ಮಾತನಾಡಿ, ‘ಇಂತಹ ಕಾರ್ಯಕ್ರಮಗಳ ಮೂಲಕ ಪ್ರಕೃತಿಯ ನಡುವೆ ಸಮಯ ಕಳೆಯಲು ಸಾಧ್ಯ. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ’ ಎಂದರು.

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಕೊಡಪಾನ ನಡಿಗೆ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಯಶೋದಾ, ಫಾ.ಪ್ರಕಾಶ್, ವಿಂಧ್ಯಾ ಯೊಗೀಶ್, ಜಯಶ್ರೀ, ಗ್ರಾ.ಪಂ. ಸದಸ್ಯೆ ಆತಿಕಾ ಭಾನು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು