ಮೂಡಿಗೆರೆ: ತಾಲ್ಲೂಕಿನ ಕಜ್ಜೆಹಳ್ಳಿ ಗ್ರಾಮದಿಂದ ಗವಿಗುಡ್ಡದವರೆಗಿನ ಸುಮಾರು 4 ಕಿ.ಮೀ. ರಸ್ತೆಯನ್ನು ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದಾರೆ.

ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗವಿಗುಡ್ಡವು ಪ್ರಾಕೃತಿಕ ಪ್ರವಾಸಿ ತಾಣವಾಗಿದ್ದು, ಗವಿಗುಡ್ಡದಿಂದ 4 ಕಿ.ಮೀ.ವರೆಗೂ ಗ್ರಾಮದಿಂದ ರಸ್ತೆ ಇದೆ. ರಸ್ತೆ ಇಲ್ಲದ 4 ಕಿ.ಮೀ.ಯನ್ನು ದಟ್ಟವಾದ ಕಾಡಿನೊಳಗೆ ಕ್ರಮಿಸಬೇಕಿತ್ತು. ಗುಡ್ಡದ ಮೇಲೆ ಗವಿಯಜ್ಜನ ದೇವಾಲಯವಿದ್ದು, ಅಲ್ಲಿಗೆ ಪ್ರತಿದಿನ ಕನ್ನೆಹಳ್ಳಿಯಿಂದ ಪುರೋಹಿತರೊಬ್ಬರು ಪೂಜೆಗಾಗಿ ದೇವಸ್ಥಾನಕ್ಕೆ ತೆರಳುತ್ತಾರೆ. ಗವಿಯಜ್ಜನ ದೇವಸ್ಥಾನದಿಂದ ಅರ್ಧ ಕಿ.ಮೀ ಎತ್ತರಕ್ಕೆ ಬಂಡೆ ಕಲ್ಲಿನಲ್ಲಿ ಹತ್ತಿ ಹೋದರೆ ಗವಿಗುಡ್ಡದ ತುದಿ ತಲುಪಬಹುದು. ಅಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಭೂ ಭಾಗದ ಸುಂದರ ನೋಟ ಕಾಣುವುದರಿಂದ ನಿತ್ಯವೂ ಪ್ರವಾಸಿಗರು ಬರುತ್ತಿರುತ್ತಾರೆ.

ನೈಸರ್ಗಿಕವಾದ ಪ್ರೇಕ್ಷಣೀಯ ಸ್ಥಳಕ್ಕೆ ತೆರಳಲು ರಸ್ತೆ ಇಲ್ಲದೆ ಕಾಡು ಮಾರ್ಗದಲ್ಲಿ ಸಾಗಲು ಕಷ್ಟಪಡಬೇಕಾಗಿತ್ತು. ಗವಿಗುಡ್ಡದ ತಪ್ಪಲಲ್ಲಿ 65 ಎಕರೆ ಗೋಮಾಳ ಜಾಗವಿದ್ದು, ಅಲ್ಲಿಗೆ ಜಾನುವಾರುಗಳನ್ನು ಕರೆದೊಯ್ದು ಮೇಯಿಸಲು ರಸ್ತೆ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಜಾನುವಾರುಗಳನ್ನು ಯಾರೂ ಕರೆದೊಯ್ಯುತ್ತಿರಲಿಲ್ಲ. ಇದರಿಂದ ಗೋಮಾಳ ಜಾಗ ಪಾಳು ಬಿದ್ದಿತ್ತು. ಗಿಡಗಂಟಿ, ಪೊದೆ ಬೆಳೆದಿತ್ತು. ಆ ಜಾಗವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡು ಜಾನುವಾರುಗಳಿಗೆ ಮೇಯಲು ಜಾಗವಿಲ್ಲದಂತೆ ಮಾಡಿದ್ದರು. ಅದನ್ನು ಗಮನಿಸಿದ ಗ್ರಾಮಸ್ಥರೊಬ್ಬರು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದರು.

ಇದರಿಂದ ಎಚ್ಚೆತ್ತ ಕಿರುಗುಂದ ಗ್ರಾಮಸ್ಥರು, ಕಾಡು ದಾರಿಯಲ್ಲಿ ಗವಿಗುಡ್ಡದ ತಪ್ಪಲಿನಲ್ಲಿರುವ ಗೋಮಾಳ ಜಾಗಕ್ಕೆ ತೆರಳಿ ಬೇಲಿ ಕಿತ್ತು ಜಾಗವನ್ನು ಖುಲ್ಲಾಗೊಳಿಸಿದ್ದರು. ಇದರಿಂದ ಸಂಘಟಿತರಾದ ಗ್ರಾಮಸ್ಥರು ಗವಿಗುಡ್ಡಕ್ಕೆ ರಸ್ತೆ ನಿರ್ಮಿಸುವ ಯೋಜನೆ ರೂಪಿಸಿ ಗ್ರಾಮಸ್ಥರೇ ತೀರ್ಮಾನ ಮಾಡಿದರು. ಗ್ರಾಮಸ್ಥರಿಂದ ದೇಣಿಗೆ ಸಂಗ್ರಹದ ಮೂಲಕ ₹ 1 ಲಕ್ಷ ಸಂಗ್ರಹಿಸಿ 4 ಕಿ.ಮೀ ಉದ್ದಕ್ಕೂ ಕಾಡು ಕಡಿದು ಜೆಸಿಬಿ ಯಂತ್ರದ ಮೂಲಕ ರಸ್ತೆ ನಿರ್ಮಿಸಿಕೊಂಡಿದ್ದೇವೆ. ರಸ್ತೆ ನಿರ್ಮಾಣ ವಾಗಿರುವುದರಿಂದ ಜಾನುವಾರು ಮೇಯಲು ಅನುಕೂಲವಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ರಸ್ತೆ ನಿರ್ಮಿಸಲು ಮಂಜುನಾಥ್, ಪುನೀತ್, ಹರಿಭಾರ್ಗವ, ಚೆನ್ನಕೇಶವ, ಕೆ.ಈ.ರಮೇಶ್, ಕೆ.ಕೆ.ಚಂದ್ರಪ್ಪ, ಜಯಪ್ಪ, ಪರಮೇಶ್ವರ ಮುಂದಾಳತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.