ಜಿಂದಾಲ್‌ ಕಂಪೆನಿಗೆ ಜಮೀನು ಕ್ರಯಪತ್ರ ನಿರ್ಣಯ ಪ್ರಶ್ನಿಸಿ ಸಿ.ಎಂಗೆ ಪತ್ರ

ಮಂಗಳವಾರ, ಜೂನ್ 18, 2019
23 °C

ಜಿಂದಾಲ್‌ ಕಂಪೆನಿಗೆ ಜಮೀನು ಕ್ರಯಪತ್ರ ನಿರ್ಣಯ ಪ್ರಶ್ನಿಸಿ ಸಿ.ಎಂಗೆ ಪತ್ರ

Published:
Updated:
Prajavani

ಚಿಕ್ಕಮಗಳೂರು: ಬಳ್ಳಾರಿ ಜಿಲ್ಲೆಯ ಜಿಂದಾಲ್‌ ಕಂಪೆನಿಗೆ 3,667 ಎಕರೆ ಸರ್ಕಾರಿ ಜಮೀನನ್ನು ಕ್ರಯಪತ್ರ (ಸೇಲ್‌ ಡೀಡ್‌) ಮಾಡಿಕೊಡಲು ನಿರ್ಣಯಿಸಿರುವುದಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳು, ಪ್ರಶ್ನೆಗಳು ಎದ್ದಿವೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಚಿವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪ್ರಶ್ನೆಗಳನ್ನು ಉಲ್ಲೇಖಿಸಿದ್ದಾರೆ.

* ಜಿಂದಾಲ್‌ ಕಂಪೆನಿಗೆ ಸೇಲ್‌ ಡೀಡ್‌ ಮಾಡಿಕೊಡುವುದರಿಂದ ರಾಜ್ಯಕ್ಕೆ ಆಗುವ ಲಾಭವೇನು.

* ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲ್ಲೂಕಿನಲ್ಲಿ ಜಮೀನು ವಶಪಡಿಸಿಕೊಳ್ಳಲು ಖಾಸಗಿಯವರಿಗೆ ₹ 30 ಲಕ್ಷದಿಂದ ಒಂದು ಕೋಟಿವರೆಗೂ ಮೀರಿ ಪರಿಹಾರ ಕೊಟ್ಟಿರುವಾಗ ಎಕರೆಗೆ ₹ 1.22 ಲಕ್ಷದಂತೆ ಕ್ರಯ ಪತ್ರ ಮಾಡಿಕೊಡುತ್ತಿರುವುದರ ಉದ್ದೇಶ ಏನು.

* ಈವರೆಗೆ ಈ ಕಂಪೆನಿಗೆ ಎಷ್ಟು ಜಮೀನನ್ನು, ಎಷ್ಟು ವರ್ಷಗಳ ಅವಧಿಗೆ ಭೋಗ್ಯಕ್ಕೆ(ಲೀಸ್‌)ನೀಡಲಾಗಿದೆ.

*ಈ ಕಂಪೆನಿಗೆ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣ ಎಷ್ಟು ಮತ್ತು ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ.

* ಕಂ‍ಪೆನಿ ಆರಂಭಿಸಿದ ಮೇಲೆ ಸುತ್ತಲಿನ ಜನಜೀವನದ ಮೇಲೆ, ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮ ಏನು. ಸಾಮಾಜಿಕ ಪರಿಶೋಧನೆ ಆಗಿದೆಯೇ.

* ಈ ಸ್ಟೀಲ್‌ ಪ್ಲಾಂಟ್‌ನಿಂದ ಎಷ್ಟು ಉದ್ಯೋಗ ಸೃಷ್ಟಿ ಆಗುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಿತ್ತು. ಸೃಷ್ಟಿಯಾಗಿರುವ ಉದ್ಯೋಗ ಎಷ್ಟು? ಸ್ಥಳೀಯರು, ಕನ್ನಡಿಗರಿಗೆ ಎಷ್ಟು ನೀಡಲಾಗಿದೆ.

* ಈ ಕಂಪೆನಿ ಎಂಎಂಎಲ್‌ ಬಾಕಿ ಉಳಿಸಿಕೊಂಡಿರುವ ಹಣ ಎಷ್ಟು

* ಸಂತೋಷ್‌ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಜಿಂದಾಲ್‌ ಕಂಪೆನಿ ಬಗ್ಗೆ ಇರುವ ಉಲ್ಲೇಖ ಏನು

* ಜಮೀನು ಪರಭಾರೆ ಮಾಡಲು ಕಾನೂನು ಇಲಾಖೆ ನೀಡಿರುವ ಅಭಿಪ್ರಾಯ ಏನು

* ಕೆಲ ಐಎಎಸ್‌, ಐಪಿಎಸ್‌ ಅಧಿಕಾರಿಗಳು ನಿವೃತ್ತಿ ನಂತರ ಈ ಕಂಪೆನಿಯಲ್ಲಿ ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ.

* ಈ ಕಂಪೆನಿ ಮತ್ತು ಇತರ ಕಂಪೆನಿಗಳಿಗೆ 2001ರಿಂದ 1009–10ರವರೆಗೆ ಎಂಎಂಎಲ್‌ ಮೂಲಕ ಕಡಿಮೆ ಬಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿರುವ ವರದಿ ಏನು

* ಬಾಕಿ ಪಾವತಿಗಾಗಿ ಎಂಎಂಎಲ್‌ ಮತ್ತು ಜೆಎಸ್‌ಡಬ್ಲು ನಡುವೆ ಕೋರ್ಟ್‌ನಲ್ಲಿರುವ ವಿವಾದ ಇತ್ಯರ್ಥವಾಗಿದೆಯೇ

* ಒಮ್ಮೆ ಸೇಲ್‌ ಡೀಡ್‌ ಮಾಡಿದ ನಂತರ ಸರ್ಕಾರ ಯಾವ ರೀತಿಯಲ್ಲಿ ಕಂಪೆನಿ ಮೇಲೆ ನಿಯಂತ್ರಣ ಮತ್ತು ನಿರ್ದೇಶನ ಮಾಡಲು ಸಾಧ್ಯವಿದೆಯೇ.

* ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 10 ಎಕರೆಗೂ ಹೆಚ್ಚಿನ ಜಾಗವನ್ನು ಯಾವುದೇ ಕೈಗಾರಿಕೆ ನೀಡುವಾಗ ಸೇಲ್‌ ಡೀಡ್‌ ಮಾಡದೇ ದೀರ್ಘಾವಧಿ ಗುತ್ತಿಗೆ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕು ಎಂಬ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದರ ಬಗ್ಗೆ ಕಾಂಗ್ರೆಸ್‌ ಪಕ್ಷದ ನಿಲುವು ಏನು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !