ಚಿಕ್ಕಮಗಳೂರು: ವರ್ಷಾಂತ್ಯಕ್ಕೆ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಹೆಲಿ ಟೂರಿಸಂ ಮೂಲಕ ಆಗಸದಿಂದ ಜಿಲ್ಲೆಯ ಪರಿಸರ ದರ್ಶನ ಮಾಡಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಕ್ರಿಸ್ಮಸ್ ರಜೆಯಲ್ಲಿ ಜಿಲ್ಲೆಗೆ ಪ್ರವಾಸಿಗರು ಮುಗಿ ಬೀಳಲಿದ್ದಾರೆ. ವರ್ಷಾಂತ್ಯಕ್ಕೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ನೋಂದಾಯಿತ ಒಂದೂವರೆ ಸಾವಿರಕ್ಕೂ ಹೆಚ್ಚು ಹೋಮ್ಸ್ಟೇಗಳಿದ್ದು, ಅಷ್ಟೇ ಸಂಖ್ಯೆಯಲ್ಲಿ ಪರವಾನಗಿ ಪಡೆಯದ ಹೋಮ್ಸ್ಟೇಗಳಿವೆ.

ಎಲ್ಲಾ ಹೋಮ್ಸ್ಟೇ ಮತ್ತು ರೆಸಾರ್ಟ್ಗಳು ಡಿಸೆಂಬರ್ ಕೊನೆಯ ವಾರಕ್ಕೆ ಪ್ರವಾಸಿಗರು ಬಹುತೇಕ ಕಾಯ್ದಿರಿಸಿಕೊಂಡಿದ್ದಾರೆ. ಇನ್ನೂ ಕೋರಿಕೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ಜಿಲ್ಲೆ ಪ್ರವಾಸಿಗರಿಂದ ತುಂಬಿಕೊಳ್ಳಲಿದೆ. ಬರುವ ಪ್ರವಾಸಿಗರಿಗೆ ಜಿಲ್ಲೆಯ ಪರಿಸರವನ್ನು ಮತ್ತೊಂದು ನೋಟದಿಂದ ಪರಿಚಯಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.

2023ರ ಜನವರಿಯಲ್ಲಿ ನಡೆದ ಜಿಲ್ಲಾ ಉತ್ಸವದ ಸಂದರ್ಭದಲ್ಲಿ ಹೆಲಿ ಟೂರಿಸಂ ಏರ್ಪಡಿಸಲಾಗಿತ್ತು. 7 ನಿಮಿಷದ ಸುತ್ತು ಮತ್ತು 13 ನಿಮಿಷದ ಸುತ್ತುಗಳನ್ನು ನಿಗದಿ ಮಾಡಲಾಗಿತ್ತು. ಜನ ಮುಗಿಬಿದ್ದು ಹೆಲಿಕಾಪ್ಟರ್ನಲ್ಲಿ ಏರಿ ಗಿರಿ ಕಂದರಗಳನ್ನು ಕಣ್ತುಂಬಿಕೊಂಡಿದ್ದರು.

ಇದೇ ಮಾದರಿಯಲ್ಲಿ ಈ ಬಾರಿ ಇನ್ನೂ ಕಡಿಮೆ ನಿಮಿಷಗಳಲ್ಲಿ (6–7 ನಿಮಿಷ) ಹೆಲಿ ಟೂರಿಸಂ ಮಾಡಲು ಜಿಲ್ಲಾಡಳಿತ ಆಲೋಚನೆ ನಡೆಸಿದೆ. ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರು, ಮೂಡಿಗೆರೆ ಮತ್ತು ಕಳಸದಲ್ಲಿ ಏಕ ಕಾಲಕ್ಕೆ ಹೆಲಿ ಟೂರಿಸಂ ಆರಂಭಿಸಲು ತಯಾರಿ ನಡೆದಿದೆ.

ಹೆಲಿಕಾಪ್ಟರ್ಗಳ ಹಾರಾಟದಿಂದ ವನ್ಯಜೀವಿಗಳ ಆವಾಸಕ್ಕೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಆಲೋಚನೆ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಗಿರಿಶ್ರೇಣಿಯನ್ನು ದಾಟಿದರೆ ಜಾಗರ ಕಣಿವೆಯಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಇದೆ. ಆದ್ದರಿಂದ ಗಿರಿಶ್ರೇಣಿಯನ್ನು ಹೆಲಿಕಾಪ್ಟರ್ಗಳು ದಾಟದಂತೆ ಪಕ್ಕಕ್ಕೆ ಮಾತ್ರ ಹೋಗಿ ನಗರವನ್ನು ಸುತ್ತುವರಿದು ವಾಪಸ್ ಬರಲು ಮಾರ್ಗ ನಿಗದಿ ಮಾಡಿದ್ದಾರೆ.

ಕಳಸ ಮತ್ತು ಮೂಡಿಗೆರೆಯಲ್ಲೂ ವನ್ಯಜೀವಿಗಳ ಆವಾಸದಿಂದ ದೂರದಲ್ಲೇ ಹೆಲಿ ಟೂರಿಸಂ ಆಯೋಜಿಸಿ ಆಗಸದಿಂದ ಪರಿಸರವನ್ನು ಪ್ರವಾಸಿಗರಿಗೆ ಪರಿಚಯಿಸಲು ತಯಾರಿ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವರ್ಷಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಸಾಮಾನ್ಯ. ಮುಳ್ಳಯ್ಯನಗಿರಿಗೆ ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬೇಕಿದ್ದು, ಪ್ರವಾಸಿಗರ ವಾಹನಗಳ ಸಂಖ್ಯೆಯನ್ನು ದಿನಕ್ಕೆ 1,200ಕ್ಕೆ ನಿಗದಿ ಮಾಡಲಾಗಿದೆ. ಆರ್ಥಿಕವಾಗಿ ಸಾಧ್ಯತೆ ಇರುವ ಪ್ರವಾಸಿಗರು ಹೆಲಿ ಟೂರಿಸಂ ಬಳಸಿಕೊಂಡು ದೂರದಿಂದ ಗಿರಿ ದರ್ಶನ ಮಾಡಬಹುದು ಎಂದರು.

ಡಿ. 21ರಂದು ಉದ್ಘಾಟನೆ

ಡಿ. 21ರಂದು ಹೆಲಿ ಟೂರಿಸಂ ಉದ್ಘಾಟನೆಗೊಳ್ಳಲಿದ್ದು ಜ. 6ರವರೆಗೆ ನಡೆಯಲಿದೆ. ಡಿ. 20ಕ್ಕೆ ವಿಧಾನ ಮಂಡಲ ಅಧಿವೇಶನ ಮುಗಿಯಿದ್ದು ಮರುದಿನ ಉದ್ಘಾಟನಾ ಕಾರ್ಯಕ್ರಮ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಲಿ ಟೂರಿಸಂಗೆ ತಲಾ ₹4500 ದರವನ್ನು ನಿಗದಿ ಮಾಡಲಾಗುತ್ತಿದೆ. ಇದರಲ್ಲಿ ₹200 ಜಿಲ್ಲಾಡಳಿತಕ್ಕೆ ಬರಲಿದೆ. ಮೂರು ಕಡೆ ಹೆಲಿಪ್ಯಾಡ್ ನಿರ್ಮಾಣವಾಗುತ್ತಿದೆ. ಅದರ ಖರ್ಚನ್ನಾದರೂ ಸರಿದೂಗಿಸಲು ₹200 ಪಡೆಯಲಾಗುತ್ತಿದೆ. ಹೆಲಿ ಟೂರಿಸಂ ನಡೆಸುವ ಸಂಸ್ಥೆಗೆ ಜಿಲ್ಲಾಡಳಿತ ಜಾಗ ಮಾತ್ರ ನೀಡಲಿದೆ. ವಾಸ್ಥವ್ಯ ಅಗ್ನಿಶಾಮಕ ಆಂಬುಲೆನ್ಸ್ ವ್ಯವಸ್ಥೆ ಸೇರಿ ಉಳಿದೆಲ್ಲಾ ಖರ್ಚುಗಳನ್ನು ಅವರೇ ಭರಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.