ಚಿಕ್ಕಮಗಳೂರು: ಮಲೆಕುಡಿಯ ಸಮುದಾಯದ ಸುಬ್ಬರಾಯ (70) ಅವರ ಮೃತದೇಹವನ್ನು ತೆಪ್ಪದಲ್ಲಿ ಇಟ್ಟುಕೊಂಡು ಹೊಳೆ ದಾಟಿ ಹೊಳೆಕೂಡಿಗೆ ಗ್ರಾಮಕ್ಕೆ ಒಯ್ದು ಶನಿವಾರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೂಡಿಗೆರೆ ತಾಲ್ಲೂಕಿನ ಹೊಳೆಕೂಡಿಗೆಯ ಸುಬ್ಬರಾಯ ಅವರು (70) ಶುಕ್ರವಾರ ರಾತ್ರಿ ಬಣಕಲ್‌ನಲ್ಲಿ ನಿಧನರಾದರು. ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಶನಿವಾರ ಹೊಳೆಕೂಡಿಗೆಗೆ ಒಯ್ಯಲಾಯಿತು.

ಹೊಳೆಕೂಡಿಗೆಗೆ ರಸ್ತೆ ಸಂಪರ್ಕ ಇಲ್ಲ, ಹೊಳೆ ದಾಟಿಕೊಂಡು ಸಾಗಬೇಕು. ಹೀಗಾಗಿ, ತೆಪ್ಪದಲ್ಲಿ ಶವ ಇಟ್ಟು ಸಾಗಿಸಲಾಯಿತು ಎಂದು ಮೃತರ ಮೊಮ್ಮಗಳು ಅನಿತಾ ‘ಪ್ರಜಾವಾಣಿ’ಯೊಂದಿಗೆಗೋಳು ತೋಡಿಕೊಂಡರು.

ನಾಲ್ಕು ದಶಕಗಳಿಂದ ಹೊಳೆಕೂಡಿಗೆಯ ಕುಟುಂಬಗಳು ಸಂಪರ್ಕಕ್ಕೆ ತೆಪ್ಪವನ್ನೇ ಆಶ್ರಯಿಸಿವೆ. ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಥವಾ ತೂಗು ಸೇತುವೆ ನಿರ್ಮಿಸುವಂತೆ ಹಲವು ಬಾರಿ ಜಿಲ್ಲಾಧಿಕಾರಿ, ಶಾಸಕರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅವರು ಬೇಸರವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.