‘ನರೇಗಾ ಅಕ್ಷಯ ಪಾತ್ರೆ’ ‘ಆಗದು ಎಂದು ಸುಮ್ಮನೆ ಕುಳಿತರೆ ಜೀವನದಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಶ್ರಮಪಟ್ಟರೆ ಪ್ರತಿಫಲ ಖಂಡಿತ ಸಿಗುತ್ತದೆ. ಇಂದು ನಾನು ನರೇಗಾ ಯೋಜನೆಯಡಿ ಮಾಡಿದ ಸಮಗ್ರ ಅಭಿವೃದ್ಧಿಗೆ ರಾಜ್ಯ ಮಟ್ಟದ ಪ್ರಶಂಸನಾ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ಇದೆ ಈ ಯೋಜನೆ ನನಗೆ ಅಕ್ಷಯ ಪಾತ್ರೆಯಾಗಿದೆ’ ಎಂದು ನರೇಗಾ ಯೋಜನೆ ಫಲಾನುಭವಿ ಹೊನ್ನಮ್ಮ ಹೇಳಿದರು.
ಹೊನ್ನಮ್ಮ ‘ನರೇಗಾ’ ಸದ್ಭಳಕೆ ಮೂಲಕ ಜನ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಜನರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು
ಕೀರ್ತನಾ ಎಚ್.ಎಸ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು
ಗ್ರಾಮೀಣ ಕುಟುಂಬವೊಂದರ ಸರ್ವತೋಮುಖ ಅಭಿವೃದ್ಧಿಗೆ ನರೇಗಾದ ಕೊಡುಗೆ ಮಹತ್ವದ್ದು.ಹೊನ್ನಮ್ಮ ಅವರು ಇತರೆ ಕುಟುಂಬಗಳಿಗೂ ಪ್ರೇರಣೆ
ಚೇತನ್ ಕೆ.ಜಿ. ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲ್ಲೂಕು ಪಂಚಾಯಿತಿ ಕೊಪ್ಪ