ಕಳಸ: ಹೊರನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 100ಕ್ಕೂ ಹೆಚ್ಚು ಕುಟುಂಬಗಳು ನಿವೇಶನಕ್ಕಾಗಿ ಹೊರನಾಡು ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಿದರು.

ಕವನಳ್ಳ ಪ್ರದೇಶದ ಖಾಸಗಿ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಮತ್ತು ಹೊರನಾಡಿನಲ್ಲಿ ದಿನಗೂಲಿ ಕೆಲಸ ಮಾಡುವ ಕುಟುಂಬಗಳು ಮನವಿ ಮಾಡಿವೆ.

ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಡಿ.ಜ್ವಾಲನಯ್ಯ ನೇತೃತ್ವದಲ್ಲಿ ಹೊರನಾಡು ಪಂಚಾಯಿತಿಗೆ ಭೇಟಿ ನೀಡಿದ ವಸತಿ ರಹಿತರು ಗ್ರಾಮ ಪಂಚಾಯಿತಿ ಅಧ್ಯಕ್ಷ ವೃಷಭರಾಜ್ ಅವರಿಗೆ ಮನವಿ ಸಲ್ಲಿಸಿದರು.

ನಾವು ದಶಕಗಳಿಂದ ಹೊರನಾಡು ಗ್ರಾಮದಲ್ಲಿ ವಾಸ ಮಾಡುತ್ತಿದ್ದರೂ ಮನೆ ನಿರ್ಮಿಸಿಕೊಳ್ಳಲು ನಿವೇಶನ ಇಲ್ಲ. ಒಂದು ತಿಂಗಳ ಒಳಗೆ ಪಂಚಾಯಿತಿ ವ್ಯಾಪ್ತಿಯ ಎಲ್ಲ ವಸತಿರಹಿತರಿಗೂ ನಿವೇಶನ ಒದಗಿಸಬೇಕು. ತಪ್ಪಿದರೆ ಮುಂದಿನ ಎಲ್ಲ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಆನಂತರ ಕಳಸ ತಾಲ್ಲೂಕು ಕಚೇರಿಗೆ ತೆರಳಿದ ವಸತಿ ರಹಿತರು ಶಿರಸ್ತೇದಾರ್ ಸುಧಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಹೊರನಾಡು ಗ್ರಾಮದ ದಾರಿಮನೆ ಪ್ರದೇಶದ ಸರ್ವೆ ಸಂಖ್ಯೆ 175ರಲ್ಲಿ ಮತ್ತು ಕವನಳ್ಳದ ಸರ್ವೆ ಸಂಖ್ಯೆ 105ರಲ್ಲಿ ತಲಾ 10 ಎಕರೆ ಭೂಮಿ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.