ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹಲಸೂರು ಗ್ರಾಮದ ಗುಬ್ಬುಗೊಡಿಗೆಯಲ್ಲಿ ಮಮತಾ (31) ಮೃತಪಟ್ಟಿದ್ದು ವರದಕ್ಷಿಣೆ ಕಿರುಕುಳ ಆರೋಪದ ಅಡಿ ಪತಿ ಅವಿನಾಶ್ನನ್ನು ಬಂಧಿಸಲಾಗಿದೆ. ಮಾವ ನಾರಾಯಣಗೌಡ, ಅತ್ತೆ ಅನಸೂಯ ಹಾಗೂ ನಾದಿನಿ ಅಮಿತ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಮತಾ ಅವರನ್ನು 2020ರ ಮೇ 27ರಂದು ಅವಿನಾಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಮಯಲ್ಲಿ 110 ಗ್ರಾಂ ಚಿನ್ನಾಭರಣ ನೀಡಿದ್ದರೂ ಪತಿ, ಅತ್ತೆ ಮತ್ತು ಮಾವ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು ಎಂದು ದೂರಲಾಗಿದೆ. ಅವಿನಾಶ್ಗೆ ₹ 50 ಸಾವಿರ ಮೊತ್ತವನ್ನು ಗೂಗಲ್ ಪೇ ಮೂಲಕ ನೀಡಿದ್ದರೂ ಹಿಂಸೆ ನೀಡುವುದು ನಿಂತಿರಲಿಲ್ಲ ಎನ್ನಲಾಗಿದೆ.

ಜ.26ರಂದು ಮಮತಾಗೆ ಫಿಟ್ಸ್ ಬಂದಿದೆ ಎಂದು ಅವಿನಾಶ್ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಮತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವಿಷಯ ಆ ನಂತರ ತಿಳಿದು ಬಂದಿದ್ದು ಸಾವಿನ ಬಗ್ಗೆ ಅನುಮಾನವಿದೆ ಎಂದು ಸಹೋದರ ಬನ್ನೂರು ಗ್ರಾಮದ ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.