ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರೀಕೆರೆಯಲ್ಲಿ ಜಂಗಿ ಕುಸ್ತಿ ಇಂದಿನಿಂದ

Last Updated 5 ಅಕ್ಟೋಬರ್ 2022, 12:32 IST
ಅಕ್ಷರ ಗಾತ್ರ

ತರೀಕೆರೆ: ಪಟ್ಟಣದ ಬಯಲು ರಂಗಮಂದಿರದಲ್ಲಿ ಅ.6 ರಿಂದ 8ರ ವರೆಗೆ ರಾಜ್ಯ ಮಟ್ಟದ ಜಂಗಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಹೇಳಿದರು.

ಅವರು ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಡಿ.ವಿ.ಪದ್ಮರಾಜು ಮಾತನಾಡಿ, ಜಂಗಿ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ ಎಂದರು.

ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಮಂಜುನಾಥ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ಉಪವೀರ ಸಮಾಜದ ಮಲ್ನಾಡ್ ನಾಗರಾಜು, ಪುರಸಭಾ ಸದಸ್ಯ ಶಶಾಂಕ್, ವೆಂಕಟೇಶ್, ಕುಹಿನ ಶೆಟ್ಟಿಯ ಶಿವಣ್ಣ, ಬೈಟು ರಮೇಶ್, ಎನ್.ರಾಜು, ಮಾತನಾಡಿದರು.

ಕಾರ್ಯಕ್ರಮ:

ವಗ್ಗಪ್ಪರ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪುರಸಭೆ ಅಧ್ಯಕ್ಷೆ ಕಮಲಾ ರಾಜೇಂದ್ರ ಅಧ್ಯಕ್ಷತೆ ವಹಿಸುವರು. ಆರ್.ರಾಮಚಂದ್ರಪ್ಪ ಅಖಾಡ ಉದ್ಘಾಟಿಸುವರು. ಎರಡನೇ ದಿನ ಉಪ ವಿಭಾಗಧಿಕಾರಿ ಸಿದ್ದಲಿಂಗರೆಡ್ಡಿ, ತಹಶೀಲ್ದಾರ್ ಪೂರ್ಣಿಮಾ, ಟಿ.ವಿ.ಜಯಣ್ಣ, ಟಿ.ಗೋವಿಂದಪ್ಪ, ಟಿ.ಎಸ್.ರಾಜು, ವೃತ್ತ ನಿರೀಕ್ಷಕ ಕೆ.ಎನ್.ರಾಘವೇಂದ್ರ ಪಾಲ್ಗೊಳ್ಳುವರು.

ಸಮಾರೋಪ ಪದ್ಮರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸುವರು. ಶಾಸಕ ಸಂಗಮೇಶ್, ವಗ್ಗಯ್ಯರ ಮಂಜುನಾಥ್, ಮುಖಂಡ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಐಸಿಸಿ ಕಾರ್ಯದರ್ಶಿ ಸಂದೀಪ್, ಮಾಜಿ ಶಾಸಕರಾದ ಟಿ.ಎಚ್. ಶಿವಶಂಕರಪ್ಪ, ಎಸ್. ಎಂ. ನಾಗರಾಜು ಭಾಗವಹಿಸುವರು.

ಕುಸ್ತಿ ಸಂಘದ ಉಪಾಧ್ಯಕ್ಷ ಹರೀಶ್, ಮುಖಂಡರಾದ ರಂಗಪ್ಪ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹಾಲುವಜ್ರಪ್ಪ, ಡಿಎಸ್ ಎಸ್ ಮುಖಂಡ ರಾಜು, ಪಾಂಪಣ್ಣ, ಮಂಜಣ್ಣ,ಕಿಟ್ಟಯ್ಯ,ಕೂರಚ ಸಮಾಜದ ಬಸವರಾಜು, ಲಕ್ಷೀಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT