ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ‘ದೇಶ ಕಂಡ ಮಹಾನ್ ಮುತ್ಸದ್ಧಿ ಅಂಬೇಡ್ಕರ್’

Published 6 ಡಿಸೆಂಬರ್ 2023, 14:25 IST
Last Updated 6 ಡಿಸೆಂಬರ್ 2023, 14:25 IST
ಅಕ್ಷರ ಗಾತ್ರ

ಕಡೂರು: ‘ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶ ಕಂಡ ಮಹಾನ್ ಮುತ್ಸದ್ಧಿ’ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಬುಧವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಕರ್ನಾಟಕ ಭೀಮ ಸೇನೆ ಜಿಲ್ಲಾಧ್ಯಕ್ಷ ಕುಂಕಾನಾಡು ಮಂಜುನಾಥ್ ಮಾತನಾಡಿ, ‘ದೇಶದ ಭವಿಷ್ಯವನ್ನೇ ಬದಲಿಸುವ ಸಂವಿಧಾನ ರಚಿಸಿ, ದೇಶವಾಸಿಗಳಿಗೆ ಸಮಾನ ಹಕ್ಕು ನೀಡಿದ ಮಹಾನ್ ಚೇತನ. ಹಿಂದುಳಿದ ವರ್ಗ, ಶೋಷಿತರಿಗೆ ಧ್ವನಿಯಾಗಿ ನಿಂತವರು ಅಂಬೇಡ್ಕರ್’ ಎಂದರು.

ಡಿಎಸ್ಎಸ್ ಮುಖಂಡ ಅಂಬೇಡ್ಕರ್ ನಗರ ಶಂಕರ್ ಮಾತನಾಡಿ, ‘ಬಾಬಾಸಾಹೇಬರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿದರೆ, ಅದೇ ನಾವು ಅವರಿಗೆ ಸಲ್ಲಿಸುವ ಗೌರವ’ ಎಂದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ ಮಾತನಾಡಿದರು.

ಮುಖಂಡರಾದ ಪತ್ರಕರ್ತ ಟಿ.ಲಕ್ಷ್ಮಣ್, ಮಾದಿಗ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪದ್ಮನಾಭಯ್ಯ, ಬೀರೂರುಜಗದೀಶ್, ಮೇಲ್ನಳ್ಳಿ ಪ್ರಭು, ತಿಮ್ಮಯ್ಯ, ಪುರಸಭಾ ಸದಸ್ಯ ಸಯ್ಯದ್ಯಾಸೀನ್, ಶ್ರೀನಿವಾಸ್ಬಿದರಿಕೆರೆ, ಪಟ್ಟಣಗೆರೆ ನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT