ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ: ಗಿರಿಜನ ವೃದ್ಧೆಯನ್ನು ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

Last Updated 19 ಸೆಪ್ಟೆಂಬರ್ 2022, 5:08 IST
ಅಕ್ಷರ ಗಾತ್ರ

ಕಳಸ: ಇಲ್ಲಿನ ಗಂಟೆಮಕ್ಕಿ ಪ್ರದೇಶದಿಂದ ಗಿರಿಜನ ವೃದ್ಧೆಯೊಬ್ಬರನ್ನು ಭಾನುವಾರ ಸ್ಥಳೀಯರು ಬಡಿಗೆಗೆ ಕಟ್ಟಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು.

86 ವರ್ಷದ ವೃದ್ಧೆ ವೆಂಕಮ್ಮ ಅನಾರೋಗ್ಯ ಬಾಧಿತರಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಆದರೆ, ಈ ವೃದ್ಧೆಯ ಮನೆ ತಲುಪಲು ರಸ್ತೆ ಇಲ್ಲದ ಕಾರಣ ಅವರ ಬಂಧುಗಳು ಜೋಳಿಗೆಯಲ್ಲಿ ಮಲಗಿಸಿ ಮರದ ಬಡಿಗೆಗೆ ಕಟ್ಟಿ ಹೊತ್ತುಕೊಂಡು ಬರಬೇಕಾಯಿತು.

ಮೊದಲೇ ಆನಾರೋಗ್ಯದಿಂದ ಬಳಲಿದ್ದ ದಿ.ವೀರಪ್ಪ ಗೌಡ ಅವರ ಪತ್ನಿ ವೆಂಕಮ್ಮ ಈ ಯಾತ್ರೆಯಿಂದ ಮತ್ತಷ್ಟು ನೋವು ಅನುಭವಿಸಿದರು. ತನ್ನ ಮನೆ ಸಂಪರ್ಕಕ್ಕೆ ರಸ್ತೆ ಸೌಲಭ್ಯ ಬೇಕು ಎಂದು ಈ ವೃದ್ಧೆ ಹಲವಾರು ಬಾರಿ ಜಿಲ್ಲಾಧಿಕಾರಿಯಿಂದ ಹಿಡಿದು ಕಂದಾಯ ಸಚಿವರ ವರೆಗೆ ಅರ್ಜಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT