ಕೊಪ್ಪ: ‘ರಸ್ತೆ ಮಾರ್ಗ ಚೆನ್ನಾಗಿದ್ದರೆ ಮಲೆನಾಡು ಭಾಗದಲ್ಲಿ ತಾಂತ್ರಿಕ ಆಧಾರಿತ ಉದ್ಯಮ ಸೃಷ್ಟಿ ಸಾಧ್ಯವಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್.ಕೆ.ಸಿ.ಸಿ) ನಿರ್ದೇಶಕ ಎಚ್.ಎ.ಕಿರಣ್ ತಿಳಿಸಿದರು.

ಪಟ್ಟಣ ಸಮೀಪದ ಬಂಟರ ಭವನದಲ್ಲಿ ಮಂಗಳವಾರ ಅಮ್ಮ ಫೌಂಡೇಷನ್ ವತಿಯಿಂದ ತುಮಖಾನೆ ಸುಧಾಕರ್ ಎಸ್.ಶೆಟ್ಟಿ ಮತ್ತು ಸುಖಲತಾ ಶೆಟ್ಟಿ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ನಮ್ಮ ದೇಶದಲ್ಲಿ ಐ ಫೋನ್ ತಯಾರಿಕೆಯಾಗುತ್ತಿದೆ ಎಂದರೆ, ಅದು ನಮ್ಮ ದೇಶದ ಹೆಮ್ಮೆಯ ಟಾಟಾ ಕಂಪನಿಯಿಂದ ಸಾಧ್ಯವಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವುದು ಪುಣ್ಯ. ಶ್ರದ್ಧೆ, ಶ್ರಮದಿಂದ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವಿದೆ. ಇಲ್ಲಿ ಉದ್ಯೋಗ ಪಡೆದವರು ಚೆನ್ನಾಗಿ ಕೆಲಸ ನಿರ್ವಹಿಸಿ ಉನ್ನತ ಹಂತ ತಲುಪುವಂತಾಗಲಿ ಎಂದರು.

ಈ ಭಾಗದಲ್ಲಿ ರಸ್ತೆಗಳು ಹದಗೆಟ್ಟಿವೆ, ಹಬ್ಬದ ಊಟಕ್ಕಾಗಿ ವರ್ಷದ ಊಟ ಕಳೆದುಕೊಂಡಂತಾಗಿದೆ. ರಸ್ತೆಗಳು ಸರಿಯಾಗಿದ್ದರೆ ಉಳಿದ ಅಭಿವೃದ್ಧಿ ಹಾದಿ ಸುಗಮವಾಗುತ್ತದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಸುಧಾಕರ್ ಶೆಟ್ಟಿ ಅವರೊಂದಿಗೆ ನಾನೂ ಕೈ ಜೋಡಿಸುತ್ತೇನೆ. ಮೊದಲು ರಸ್ತೆ ಸರಿಯಾಗಬೇಕು ಎಂದು ಹೇಳಿದರು.

ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಧಾಕರ್ ಶೆಟ್ಟಿ ಅವರು ಮೂರು ವರ್ಷದ ಹಿಂದೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಮೇಳ ನಡೆಸಿದ್ದರು. 110 ಸಂಸ್ಥೆಗಳು ಕೊಪ್ಪಕ್ಕೆ ಬಂದಿದ್ದವು, 700 ಜನರಿಗೆ ಉದ್ಯೋಗ ಸಿಕ್ಕಿದೆ. ಅದು ಮಲೆನಾಡಿನ ದೊಡ್ಡ ಉದ್ಯೋಗ ಮೇಳವಾಗಿತ್ತು ಎಂದರು.

ಟೀಮ್ ಲಿಸ್ ಸರ್ವಿಸ್ ಸಂಸ್ಥೆಯ ಶ್ರೀಧರ್ ಕೆ.ಟಿ ಮಾತನಾಡಿ, ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗೆ ಹಿಯರಿಂಗ್ ಮಾಡುತ್ತಿದ್ದೇವೆ. ಮೊದಲು ₹19,600 ಸಂಬಳ ಸಿಗುತ್ತದೆ. ಹಾಸ್ಟೆಲ್ ಸೌಲಭ್ಯ, ಸಂಸ್ಥೆ ವತಿಯಿಂದ ಬಸ್ ಸೌಲಭ್ಯ ಸಿಗುತ್ತದೆ ಎಂದು ಸಂಸ್ಥೆ ಬಗ್ಗೆ ಮಾಹಿತಿ ನೀಡಿದರು.

ಬಂಟರ ಸಂಘದ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಮೂರು ತಿಂಗಳ ಹಿಂದೆ ಬಂಟರ ಭವನ ಕಟ್ಟಲಾಗಿತ್ತು. ಮೂರು ಮದುವೆ ಕಾರ್ಯಕ್ರಮ ನಡೆದಿದೆ, ನಾನು ಭಾಗವಹಿಸಿದ್ದೆ. ಆದರೆ, ಉದ್ಯೋಗ ಮೇಳ ಆಯೋಜಿಸಿರುವುದು ಹೆಚ್ಚು ಸಂತೋಷವಾಗುತ್ತಿದೆ. ಬಂಟರ ಭವನ ನಿರ್ಮಾಣಕ್ಕೆ ಸುಧಾಕರ್ ಶೆಟ್ಟಿ ಹೆಚ್ಚು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ದಿವಾಕರ್ ಭಟ್ ಮಾತನಾಡಿ, ಶೃಂಗೇರಿ ಕ್ಷೇತ್ರ ಮೂಲ ಸೌಕರ್ಯ ಇಲ್ಲದ ಕ್ಷೇತ್ರ. ಸುಧಾಕರ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಮೂರು ತಾಲ್ಲೂಕಿನ ಆರೋಗ್ಯ ಶಿಬಿರ ನಡೆಸಿದ್ದಾರೆ. ಬಹುತೇಕ ರಾಜಕಾರಣಿಗಳ ಹಿಡಿತದಲ್ಲಿ ಶಿಕ್ಷಣ ಸಂಸ್ಥೆ ಇದೆ. ಆದ್ದರಿಂದ ಸರ್ಕಾರಿ ಶಾಲೆ ಉಳಿಸಲು ಅಭಿವೃದ್ಧಿಗೆ ಆಸಕ್ತಿ ವಹಿಸುವುದಿಲ್ಲ. ಸುಧಾಕರ ಶೆಟ್ಟಿ ಅವರು ಮೈಸೂರಿನಲ್ಲಿ ಜ್ಞಾನ ಸರೋವರ ಎಂಬ ವಿದ್ಯಾ ಸಂಸ್ಥೆಯಲ್ಲಿ 50 ದೇಶದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೂ ಮಲೆನಾಡಿನ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಸಹಕಾರ ನೀಡಿದ್ದಾರೆ ಎಂದರು.

ಅಮ್ಮ ಫೌಂಡೇಷನ್ ಶೃಂಗೇರಿ ಕ್ಷೇತ್ರ ಉಸ್ತುವಾರಿ ಗುರುಪ್ರಸಾದ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ 10 ಸಾವಿರಕ್ಕೂ ಹೆಚ್ಚು ಆಹಾರ ಕಿಟ್ ಕೊಟ್ಟಿದ್ದಾರೆ. 29 ಆರೋಗ್ಯ ಮೇಳ ನಡೆಸಿದ್ದಾರೆ. ಕಣ್ಣಿನ ತಪಾಸಣೆ ಶಿಬಿರ ನಡೆಸಿ 2,500 ಉಚಿತವಾಗಿ 250ಕ್ಕೂ ಹೆಚ್ಚು ಕನ್ನಡಕ, ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ ದೃಷ್ಟಿ ಕೊಡಿಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಶಿಕ್ಷಕರನ್ನು ನೇಮಿಸಿದ್ದಾರೆ. ಇಂದು ಬೇರೆ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಮುಖಂಡ ಕುಂಚೂರು ವಾಸಪ್ಪ ಮಾತನಾಡಿದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಅಮ್ಮ ಫೌಂಡೇಷನ್ ಕ್ಷೇತ್ರ ಯೋಜನಾಧಿಕಾರಿ ವೆಂಕಪ್ಪ ಆಚಾರ್ಯ, ನಿರ್ದೇಶಕ ಪ್ರಭಾಕರ್ ಶೆಟ್ಟಿ ಇದ್ದರು.

ಉದ್ಯೋಗ ಆಧಾರಿತ ಕೇಂದ್ರಕ್ಕೆ ಒತ್ತು

‘ಅಂದು ನನ್ನ ಕನಸು ಉದ್ಯಮಿ ಆಗು ಉದ್ಯೋಗ ನೀಡು ಎಂಬುದಾಗಿತ್ತು. ಬದುಕಿಗೆ ಉದ್ಯೋಗ ಎಂಬುದು ಮೊದಲ ಮೆಟ್ಟಿಲು. ಉದ್ಯೋಗ ಕಲ್ಪಿಸಲು ಆದ್ಯತೆ ಕೊಟ್ಟಿದ್ದೇನೆ. ಟಾಟಾ ಕಂಪನಿಗೆ ನೀವು ಕೆಲಸಕ್ಕೆ ಸೇರುವುದು ಮೊದಲ ಮೆಟ್ಟಿಲು ಇದ್ದಂತೆ. ಉದ್ಯೋಗ ಮೇಳ ಯಾವುದೇ ಜಾತಿ ಮತ ಪಂಥಕ್ಕೆ ಸೀಮಿತವಾಗಿಲ್ಲ’ ಎಂದು ಅಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಹೇಳಿದರು. ಉದ್ಯೋಗಕ್ಕೆ ಆಯ್ಕೆ ಆದವರು ಇನ್ನು ಮೂರು ದಿನದೊಳಗೆ ಹೋಗುತ್ತೇನೆ ಎಂದರೆ ವಾಹನ ವ್ಯವಸ್ಥೆ ಮಾಡಿ ಕಳುಹಿಸಿಕೊಡುತ್ತೇನೆ. ನಿಮಗೆ ನೀವೆ ಸ್ಪರ್ಧಿಗಳು ಹೊರತು ಬೇರೆಯವರಲ್ಲ. ನೀವು ಕೆಲಸಕ್ಕೆ ಸೇರಿ ಜೀವನ ರೂಪಿಸಿಕೊಂಡರೆ ಅದೇ ನನಗೆ ಹೆಮ್ಮೆ. ಜೆಸಿಬಿಎಂ ಕಾಲೇಜು ಟೈಅಪ್ ಮಾಡಿಕೊಂಡು ಉದ್ಯೋಗ ಆಧಾರಿತ ಕೇಂದ್ರಕ್ಕೆ ಒತ್ತು ಕೊಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.