ಕೊಪ್ಪ: ಬಿಸಿಲಿನ ತಾಪ ಹೆಚ್ಚಾಗಿದ್ದು, ಕೆರೆ ಕಟ್ಟೆಗಳು ಬತ್ತುತ್ತಿವೆ. ಪಟ್ಟಣ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುವ ಹಿರೀಕೆರೆಯಲ್ಲೂ ನೀರು ಕಡಿಮೆಯಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಹರಿಹರಪುರ ಸಮೀಪದ ನಾಗಲಾಪುರ ಬಳಿಯ ತುಂಗಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣ ವ್ಯಾಪ್ತಿಯ 1,500 ಮನೆಗಳಿಗೆ, ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ 300 ಮನೆಗಳಿಗೆ ಪಟ್ಟಣ ಪಂಚಾಯಿತಿ ವತಿಯಿಂದ ನೀರು ಪೂರೈಸಲಾಗುತ್ತಿದೆ. ಪ್ರತಿದಿನ 8 ಮಿಲಿಯನ್ ಲೀಟರ್ ನೀರು ಒದಗಿಸಲಾಗುತ್ರಿದೆ. ಆದರೆ, ಇದೇ ಸಂದರ್ಭದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿರುವುದರಿಂದ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.

ಒಂದು ತಿಂಗಳಿಂದ ಕುಡಿಯುವ ನೀರನ್ನು ತುಂಗಾ ನದಿಯಿಂದ ಪೂರೈಸಲಾಗುತ್ತಿದೆ. ಪಂಪ್ ಮೂಲಕ ನದಿಯಿಂದ ನೇರವಾಗಿ ಹಿರೀಕೆರೆ ಬಳಿ ಇರುವ ನೀರು ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಲಾಗುತ್ತದೆ. ಅಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ 2 ಜಿ.ಎಲ್.ಎಸ್.ಆರ್ ಟ್ಯಾಂಕ್, ಒಂದು ಲಕ್ಷ ಗ್ಯಾಲನ್ ಸಾಮರ್ಥ್ಯದ 2 ಟ್ಯಾಂಕ್ನಲ್ಲಿ ನೀರು ಸಂಗ್ರಹಗೊಂಡು ಗ್ರಾವಿಟಿ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತದೆ. ಇದೀಗ ನೀರಿನ ಅಭಾವದಿಂದ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಮೇಲಿನಪೇಟೆಯಲ್ಲಿ ಒಂದು ಓವರ್ಹೆಡ್ ಟ್ಯಾಂಕ್ ಇದ್ದು, ಅದರಿಂದ ಅಯ್ಯಂಗಾರ್ ಬಡಾವಣೆ ಹಾಗೂ ವೀರಭದ್ರ ದೇವಸ್ಥಾನ ಸಮೀಪದ ಮನೆಗಳಿಗೆ ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ಇನ್ನೊಂದು ಓವರ್ಹೆಡ್ ಟ್ಯಾಂಕ್ ಮೂಲಕ ಮಾರುಕಟ್ಟೆ ಪ್ರದೇಶ, ಸಾರ್ವಜನಿಕ ಶೌಚಾಲಯಕ್ಕೆ ನೀರು ಪೂರೈಕೆಯಾಗುತ್ತದೆ.

ಕೆಸುವಿನಕೆರೆ ಯೋಜನೆ ಹಳ್ಳ ಹಿಡಿದಿದೆ: ಆರೋಪ

ಕೆಸುವಿನಕೆರೆ ಎಂಬಲ್ಲಿ ಪಟ್ಟಣದ ಜನರಿಗೆ ದಿನದ 24ಗಂಟೆಯೂ ನೀರು ಒದಗಿಸಬಹುದಾದ ಅವಕಾಶವಿದೆ ಎಂದು ಕೆಲವು ವರ್ಷಗಳ ಹಿಂದೆ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸಲಾಗಿತ್ತು. ಆದರೆ, ಆ ಜಾಗದಲ್ಲಿ (ಕೆರೆ ಪ್ರದೇಶ) ಮೂರು ವರ್ಷಗಳ ಹಿಂದೆ ಒಂದು ಚಿಕ್ಕ ಬಾವಿ ತೆಗೆಯಲಾಗಿದೆ. ಇಲ್ಲಿನ ನೀರು ಯಾವುದಕ್ಕೂ ಬಳಕೆಯಾಗದೆ ವ್ಯರ್ಥವಾಗುತ್ತಿದೆ. ದಿನಪೂರ್ತಿ ನೀರು ಪೂರೈಸುವ ಕೆಸುವಿನಕೆರೆ ಯೋಜನೆ ಹಳ್ಳ ಹಿಡಿದಿದೆ ಎಂಬ ಆರೋಪವಿದೆ. ತುಂಗಾನದಿ ನೀರು ಸಂಪೂರ್ಣ ತಗ್ಗಿದ್ದರೂ, ಅವಶ್ಯಕತೆಗೆ ಬೇಕಾದಷ್ಟು ನೀರು ಸಿಗುತ್ತಿದೆ.

ನೀರಿಗೆ ಸಮಸ್ಯೆಯಾಗುತ್ತಿಲ್ಲ

ಪಟ್ಟಣ ಪಂಚಾಯಿತಿಯು ಬೇಸಿಗೆ ಪ್ರಾರಂಭದಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರನ್ನು ಒದಗಿಸುತ್ತಿದೆ. ಪ್ರತಿದಿನ 45 ನಿಮಿಷ ನೀರನ್ನು ಬಿಡಲಾಗುತ್ತಿದ್ದು, ಎಲ್ಲ ಟ್ಯಾಂಕ್ ಭರ್ತಿಯಾಗುತ್ತವೆ. ಕೆಲವೊಮ್ಮೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಸ್ವಲ್ಪ ಅಡಚಣೆಯಾದರೂ ನೀರಿಗೆ ಸಮಸ್ಯೆಯಾಗುತ್ತಿಲ್ಲ ಎಂದು ಕೊಪ್ಪ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಿ.ಕೆ.ಮಾಲತಿ ಹೇಳಿದರು.

ನೀರಿಗೆ ಕೊರತೆಯಾಗಿಲ್ಲ. ತುಂಗಾ ನದಿ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆಗೆ ವಿದ್ಯುತ್ ಸಮಸ್ಯೆ ಇದ್ದು, ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
ಗಾಯತ್ರಿ ವಸಂತ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ, ಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.