ಗುರುವಾರ , ಸೆಪ್ಟೆಂಬರ್ 23, 2021
24 °C

ಸರ್ಕಾರ ಸ್ಥಿರ, ಕಾಂಗ್ರೆಸ್‌ ಕನಸು ನನಸಾಗದು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಸರ್ಕಾರದ ವಿಚಾರದಲ್ಲಿ ಕಾಂಗ್ರೆಸ್‌ ಸಹಿತ ಯಾರ ಕನಸೂ ನನಸಾಗಲ್ಲ. ಸರ್ಕಾರ ಸ್ಥಿರವಾಗಿ ಇದೆ’ ಎಂದು ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನಸು ಕಾಣುವುದು ತಪ್ಪಲ್ಲ. ಕನಸು ಕಾಣಲು ಎಲ್ಲರಿಗೂ ಹಕ್ಕಿದೆ’ ಎಂದರು. 

‘ದತ್ತ ಪೀಠಕ್ಕೆ ಸಂಬಂಧಿಸಿದಂತೆ ವಾದ–ಪ್ರತಿವಾದ ಮುಗಿದು, ತೀರ್ಪು ಬಾಕಿ ಇದೆ ಎಂಬ ಸುದ್ದಿ ಇದೆ. ತೀರ್ಪು ಆಧರಿಸಿ ಸರ್ಕಾರ ಮುಂದಿನಹೆಜ್ಜೆ ಇಡಲಿದೆ’ ಎಂದು ತಿಳಿಸಿದರು. 

‘ವ್ಯಕ್ತಿ, ಶಕ್ತಿ, ಪಕ್ಷ, ಸಂಸ್ಥೆ ಯಾವುದೂ ಹೆಚ್ಚು ಅಲ್ಲ. ಕೆಟ್ಟ ಶಕ್ತಿಗಳನ್ನು ಸಹಿಸಲು ಸಾಧ್ಯವಿಲ್ಲ. ಸಂವಿಧಾನ ವಿರೋಧಿಸುವವರು, ರಾಷ್ಟ್ರ ಭಾವುಟಕ್ಕೆ ಅಗೌರವ ತೋರುವವರು ಇದ್ದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು