ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ತ್ರೀ ಸ್ವಾತಂತ್ರ್ಯ, ಸಮಾನತೆ ಬೆಂಬಲಿಸಿದ ಗಾಂಧೀಜಿ: ಶಾಸಕ ಟಿ.ಡಿ.ರಾಜೇಗೌಡ

ಕಾಂಗ್ರೆಸ್ ಘಟಕದ ವತಿಯಿಂದ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ
Published : 2 ಅಕ್ಟೋಬರ್ 2024, 13:57 IST
Last Updated : 2 ಅಕ್ಟೋಬರ್ 2024, 13:57 IST
ಫಾಲೋ ಮಾಡಿ
Comments

ನರಸಿಂಹರಾಜಪುರ: ‘ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ, ಸಮಾನತೆ ಬೆಂಬಲಿಸಿ ಗಾಂಧೀಜಿ ಮಹಾನ್ ಚೇತನರಾದರು’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಇಲ್ಲಿನ ಉಮಾಮಹೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಗಾಂಧೀಜಿ ಅನುಸರಿಸಿದ ಅಹಿಂಸಾತ್ಮಕ ಮಾರ್ಗ ಹಲವು ದೇಶಗಳ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಯಿತು. ದೇಶದಲ್ಲಿದ್ದ ಅಸ್ಪೃಶ್ಯತೆ, ಜಾತಿ ಪದ್ಧತಿ ತೊಡೆದು ಹಾಕಲು ಪ್ರಯತ್ನಿಸಿದರು. ಸ್ವತಃ ತಾವೇ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಅಂದಿನ ದಿನಮಾನಗಳಲ್ಲಿಯೇ ಸ್ವಚ್ಛ ಭಾರತಕ್ಕೆ ಚಾಲನೆ ನೀಡಿದ್ದರು’ ಎಂದರು.

‘ಲಾಲ್ ಬಹದ್ದೂರ ಶಾಸ್ತ್ರಿಯವರು ಜೈಜವಾನ್, ಜೈಕಿಸಾನ್ ಎಂಬ ಘೋಷಣೆಯ ಮೂಲಕ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತರಿಗೆ ಗೌರವ ಸೂಚಿಸಿದರು. ಇವರಿಬ್ಬರ ತತ್ವ, ಆದರ್ಶಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ. ಜಾತಿ, ಮತ, ಪಂಥ, ಬೇಧ–‍ಭಾವ ಬಿಟ್ಟು ಭಾವೈಕ್ಯದಿಂದ ಬದುಕಬೇಕು’ ಎಂದರು.

ಜಿಲ್ಲಾಮಟ್ಟದ ಎಸ್.ಸಿ, ಎಸ್.ಟಿ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಎಂ.ಮಹೇಶ್ ಮಾತನಾಡಿ, ‘ಗಾಂಧಿಯವರ ಭಾವೈಕ್ಯತೆ, ಸಮನ್ವಯತೆ ತತ್ವಗಳು, ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದರು.

ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಈ.ಸಿ.ಜೋಯಿ ಮಾತನಾಡಿದರು. ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಬಿ.ವಿ.ಉಪೇಂದ್ರ, ಕೆ.ಎಂ.ಸುಂದರೇಶ್, ಸುರಯ್ಯಬಾನು, ಉಮಾ ಕೇಶವ್, ಸೈಯದ್ ವಸೀಂ, ಅಂಜುಮ್, ಸಮೀರಾ ನಹೀಂ, ಸಾಜು, ಮನು, ಎಂ.ಆರ್.ರವಿಶಂಕರ್, ರತ್ನಮ್ಮ ಸುನಿಲ್‌ಕುಮಾರ್, ಬಿನು, ಶೈಲಾ ಮಹೇಶ್, ಶಂಕರ್, ಆರ್.ಕುಮಾರ್, ಅಬೂಬಕರ್, ನಂದೀಶ್ ಇದ್ದರು. ಪಟ್ಟಣದ ಪ್ರವಾಸಿ ಮಂದಿರದಿಂದ ಉಮಾಮಹೇಶ್ವರ ಸಮುದಾಯ ಭವನದವರೆಗೆ ಪಾದಯಾತ್ರೆ ನಡೆಸಿ ಗಾಂಧೀಜಿ ಸಂದೇಶದ ಜಾಗೃತಿ ಮೂಡಿಸಲಾಯಿತು.

ಕಾಂಗ್ರೆಸ್‌ನ ತತ್ವ ಸಿದ್ಧಾಂತಕ್ಕೆ ಗಾಂಧಿಯವರ ಆದರ್ಶವೇ ಪ್ರೇರಣೆ

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್‌ನ ತತ್ವ ಸಿದ್ಧಾಂತಕ್ಕೆ ಗಾಂಧಿಯವರ ಆದರ್ಶವೇ ಪ್ರೇರಣೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ತತ್ವದಂತೆ ಕಾಂಗ್ರೆಸ್ ಎಲ್ಲಾ ಜನಾಂಗದವರನ್ನು ಒಟ್ಟಗೂಡಿಸಿಕೊಂಡು ಹೋಗುತ್ತಿದೆ. ಗಾಂಧಿಯವರ ತತ್ವ ಸಿದ್ಧಾಂತಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲ ರಾಜಕೀಯ ಪಕ್ಷಗಳು ಟೀಕಿಸುತ್ತಿರುವುದು ದುರಂತದ ಸಂಗತಿ’ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT