ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರನಾಡು: ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ 12 ಜೋಡಿ

Published 21 ಏಪ್ರಿಲ್ 2024, 13:38 IST
Last Updated 21 ಏಪ್ರಿಲ್ 2024, 13:38 IST
ಅಕ್ಷರ ಗಾತ್ರ

ಕಳಸ: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ದೇವಸ್ಥಾನದಿಂದ ವಧುವಿಗೆ ಚಿನ್ನದ ತಾಳಿ, ಸೀರೆ, ವರನಿಗೆ ಪಂಚೆ, ಶಲ್ಯ ನೀಡಲಾಗಿತ್ತು. ಅರ್ಚಕರು ಧ್ವನಿವರ್ಧಕದ ಮೂಲಕ ನೀಡಿದ ಸೂಚನೆಯಂತೆ ವಧೂವರರು ಪರಸ್ಪರ ಕೆನ್ನೆಗೆ ಎಳ್ಳು – ಜೀರಿಗೆ ಸವರಿದರು. ಭೀಮೇಶ್ವರ ಜೋಷಿ ದಂಪತಿ ವರರಿಗೂ ತಾಳಿಯನ್ನು ನೀಡಿದರು. ವೇದ ಮಂತ್ರ ಪಠಣೆ ನಡುವೆ ಮಾಂಗಲ್ಯಧಾರಣೆ ನಡೆಯಿತು. ತಮ್ಮ ಪೋಷಕರ ಸಾಕ್ಷಿಯಾಗಿ ವಧೂ ವರರು ಹಾರ ಬದಲಿಸಿಕೊಂಡು ಸತಿಪತಿಗಳಾದರು.

ವಧುವರರನ್ನು ಉದ್ದೇಶಿಸಿ ಮಾತನಾಡಿದ ಜಿ.ಭೀಮೇಶ್ವರ ಜೋಷಿ, ‘ಹೊರನಾಡಿನಲ್ಲಿ ಸರಳವಾಗಿ ವಿವಾಹವಾಗಿ ಉಳಿಸಿದ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ ಮುಂದಿನ ಜೀವನಕ್ಕೆ ಬಳಸಿಕೊಳ್ಳಿ’ ಎಂದರು. ಸರಳ, ಸಾಮೂಹಿಕ ವಿವಾಹದಿಂದ ಜನರು ಸಾಲಗಾರರು ಆಗುವ ಸಂದರ್ಭ ತಪ್ಪುತ್ತದೆ’ ಎಂದರು.

ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ರಾಜಲಕ್ಷ್ಮಿ ಜೋಷಿ, ಕೆ.ಕೆ.ಬಾಲಕೃಷ್ಣ ಭಟ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT