ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠ, ಚರ್ಚ್‌, ಮಸೀದಿಗಳಿಗೆ ಜಾರ್ಜ್ ಭೇಟಿ

Published 17 ಏಪ್ರಿಲ್ 2024, 17:08 IST
Last Updated 17 ಏಪ್ರಿಲ್ 2024, 17:08 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸಿಂಸೆಯ ಆಂಥೋಣಿ ಚರ್ಚ್, ಪಟ್ಟಣದ ಎಲ್.ಎಫ್. ಚರ್ಚ್, ಸಿಂಹನಗದ್ದೆ ಬಸ್ತಿಮಠ, ಸೇಂಟ್ ಆರ್ಥೋಡಕ್ಸ್ ಚರ್ಚ್, ಜಾಮಿಯಾ ಮಸೀದಿ, ಸೇಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ಗಳಿಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಗುರುಗಳ ಆಶೀರ್ವಾದ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಿಕ್ಕಮಗಳೂರು ಜಿಲ್ಲೆ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸಮಯದಲ್ಲಿ ಯಾರೂ ಬೇಕಾದರೂ ಆಶ್ವಾಸನೆ ನೀಡಬಹುದು. ಆದರೆ, ಅದನ್ನು ಈಡೇರಿಸಬೇಕು. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತ ಬಂದಿದೆ. ಎಲ್ಲ ಜಾತಿ, ಧರ್ಮದ ಬಡವರಿಗೆ ಸಹಾಯ ಮಾಡಿದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್, ತಾಲ್ಲೂಕು ಘಟಕದ ಅಧ್ಯಕ್ಷ ಗೇರ್‌ಬೈಲು ನಟರಾಜ್, ಕೆಪಿಸಿಸಿ ಸದಸ್ಯರಾದ ಪಿ.ಆರ್.ಸದಾಶಿವ, ಇಫ್ತೀಕರ್ ಆದಿಲ್, ಮುಖಂಡರಾದ ಕೆ.ಎ.ಅಬೂಬಕರ್, ಕೆ.ಎಂ.ಸುಂದರೇಶ್, ಈ.ಸಿ.ಜೋಯಿ, ಎಚ್.ಬಿ.ರಘುವೀರ್, ಎಂ.ಆರ್.ರವಿಶಂಕರ್, ಪ್ರಶಾಂತಶೆಟ್ಟಿ, ದೇವಂತ ಗೌಡ, ಜುಬೇದಾ, ಎಚ್.ಎಂ.ಮನು, ಸಾಜು, ಎಲ್ದೋ, ಎಲಿಯಾಸ್, ಕ್ಸೇವಿಯಾರ್ ಇದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಿಂಹನಗದ್ದೆ ಬಸ್ತಿಮಠಕ್ಕೆ ಭೇಟಿ ನೀಡಿದರು
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಿಂಹನಗದ್ದೆ ಬಸ್ತಿಮಠಕ್ಕೆ ಭೇಟಿ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT