ಚಿಕ್ಕಮಗಳೂರು: ಲಕ್ಕವಳ್ಳಿಯ ಆರೋಗ್ಯ ಕೇಂದ್ರದ ನೌಕರ ರಮೇಶ್‌ಕುಮಾರ್ ಅವರು ತರೀಕೆರೆ ಸಮೀಪ ಲಕ್ಕವಳ್ಳಿ ಕ್ರಾಸ್‌ನಲ್ಲಿ (ಟೌನ್ ಕ್ಲಬ್ ಬಳಿ) ಬೈಕಿನಿಂದ ಬಿದ್ದು ರಸ್ತೆಯಲ್ಲಿ ಒದ್ದಾಡುತ್ತಿದ್ದರೂ, ಪಕ್ಕದಲ್ಲೇ ಕಾರಿನಲ್ಲಿ ಕುಳಿತಿದ್ದ ಶಾಸಕ ಡಿ.ಎಸ್.ಸುರೇಶ್ ಸಹಾಯಕ್ಕೆ ಹೋಗಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ರಮೇಶ್‌ಕುಮಾರ್ ಗಾಯಗೊಂಡು ಒದ್ದಾಡುತ್ತಿರುವ ಮತ್ತು ಪಕ್ಕದಲ್ಲಿ ಕಾರಿನಲ್ಲಿ
ಶಾಸಕ ಸುರೇಶ್ ಇರುವ ವಿಡಿಯೋ ವೈರಲ್ ಆಗಿದೆ. ಬುಧವಾರ ಮಧ್ಯಾಹ್ನ ಘಟನೆ ನಡೆದಿದೆ.

ಎಂಎಲ್‌ಎ ಕಾರು ಇದೆ. ಅವರ ಕಾರಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯಬಹುದು. ಎಂಎಲ್‌ಎ ಒಳಗೆ ಕುಳಿತಿರುವವರು ಹೊರಗೆ ಬರುತ್ತಿಲ್ಲ ಎಂದು ಒಬ್ಬರು ಹೇಳುವುದು. ಆಂಬುಲೆನ್ಸ್‌ಗೆ ಫೋನ್ ಮಾಡಿದ್ದೇವೆ, ಬರುತ್ತದೆ ಎಂದು ಮತ್ತೊಬ್ಬರು ಹೇಳುವುದು ವಿಡಿಯೋದಲ್ಲಿದೆ.

ರಮೇಶ್ ಅವರನ್ನು ಆಂಬುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರು ಮೃತಪಟ್ಟಿದ್ದಾರೆ.

ಇದನ್ನೂ ಒದಿ..‘ನಿದ್ರೆಗೆ ಜಾರಿದ್ದೆ, ಏನಾಗಿದೆ ಎಂಬುದು ಗಮನಕ್ಕಿಲ್ಲ: ಶಾಸಕ ಸುರೇಶ್ ಸ್ಪಷ್ಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.