ಸೋಮವಾರ, ನವೆಂಬರ್ 30, 2020
27 °C
ಗ್ರಾಹಕರ ಹಣ ದುರ್ಬಳಕೆ ಪ್ರಕರಣ

ಅಂಚೆ ಇಲಾಖೆ ನೌಕರನಿಗೆ ಜೈಲು

  ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಗ್ರಾಹಕರಿಬ್ಬರು ಉಳಿತಾಯ ಖಾತೆಗೆ ಕಟ್ಟಿದ ಹಣವನ್ನು ಇಲಾಖೆಗೆ ಪಾವತಿಸದೆ ಸ್ವಂತಕ್ಕೆ ಬಳಸಿಕೊಂಡ ಪ್ರಕರಣದಲ್ಲಿ ಅಂಚೆ ಇಲಾಖೆ ನೌಕರ ವಿ.ಆರ್.ಕಲ್ಲೇಶಗೆ ಒಂದು ವರ್ಷ ಜೈಲು, ₹ 5,000 ದಂಡವನ್ನು ಕಡೂರಿನ ಜೆಎಂಎಫ್‌ ಕೋರ್ಟ್‌ ವಿಧಿಸಿದೆ.

ನ್ಯಾಯಾಧೀಶ ಈರಪ್ಪ ಢವಳೇಶ್ವರ್ ಈ ಆದೇಶ ನೀಡಿದ್ದಾರೆ.

ಏನಿದು ಪ್ರಕರಣ: 2013ನೇ ಇಸವಿಯಲ್ಲಿ ಪ್ರಕರಣ ನಡೆದಿತ್ತು. ಕಲ್ಲೇಶ ಅವರು ಮರವಂಜಿ ಗ್ರಾಮದ ಅಂಚೆ ಕಚೇರಿ ಪೋಸ್ಟ್‌ ಮಾಸ್ಟರ್ ಆಗಿದ್ದರು. ರೇವಮ್ಮ ಎಂಬವರು ₹9,900, ಚಿಕ್ಕಮ್ಮ ಎಂಬವರು ₹ 10,000 ನಗದನ್ನು ಉಳಿತಾಯ ಖಾತೆಗೆ ಜಮೆ ಮಾಡಲು ನೀಡಿದ್ದರು. ಕಲ್ಲೇಶ ಹಣ ಪಡೆದು ಪಾಸ್‌ ಪುಸ್ತಕದಲ್ಲಿ ಮೊತ್ತ ನಮೂದಿಸಿದ್ದರು. ಆದರೆ, ಇಲಾಖೆಗೆ ಹಣವನ್ನು ಪಾವತಿಸಿರಲಿಲ್ಲ. ಅದನ್ನು ಸ್ವಂತಕ್ಕೆ ಬಳಸಿಕೊಂಡಿದ್ದರು.

ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಪಬ್ಲಿಕ್‌ ಪ್ರಾಸಿಕ್ಯುಟರ್‌ ಬಿ.ಎಂ.ಹರೀಶ್‌ ಕುಮಾರ್‌ ಸಾಕ್ಷ್ಯ ವಿಚಾರಣೆ ಮಾಡಿದ್ದರು. ಸಹಾಯಕ ಪಬ್ಲಿಕ್‌ ಪ್ರಾಸಿಕ್ಯುಟರ್‌ ನಾಜಿಯಾ ಪರ್ವಿನ್‌ ವಾದ ಮಂಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.