ಕೆಎಫ್‌ಡಿ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಹೆಚ್ಚಿನದಾಗಿ ಮಾಡಲಾಗುತ್ತಿದ್ದು ಈವರೆಗೆ 4 ಪ್ರಕರಣ ದಾಖಲಾಗಿವೆ. ಎಲ್ಲರಿಗೂ ಚಿಕಿತ್ಸೆ ದೊರಕಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಡಾ.ಅಶ್ವತ್ಥಬಾಬು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ರೋಗದ ಲಕ್ಷಣಗಳು
ಮೊದಲನೇ ಹಂತದಲ್ಲಿ ಜ್ವರ ತಲೆನೋವು ಚಳಿ ವಾಂತಿ ಸಂದು ನೋವು ಹಾಗೂ ಬೇಧಿ ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣ. ಎರಡನೇ ಹಂತದಲ್ಲಿ ಅತಿಯಾದ ತಲೆನೋವು ಮಾನಸಿಕ ತೊಂದರೆ ರಕ್ತಸ್ತ್ರಾವ ಉಂಟಾಗುತ್ತದೆ. ಕೆಎಫ್‌ಡಿ ಪೀಡಿತ ಉಣ್ಣೆ ಕಚ್ಚಿದ ನಂತರ 3ರಿಂದ 8 ದಿನಗಳು ರೋಗ ಕಾರಕ. ರೋಗಕ್ಕೆ ತುತ್ತಾದವರು ಬಹುಪಾಲು ಚೇತರಿಸಿಕೊಳ್ಳುತ್ತಾರೆ. ಶೇ 3ರಿಂದ ಶೇ 10ರಷ್ಟು ಮಾತ್ರ ಸಾವಿನ ಪ್ರಮಾಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ನಿಖರವಾದ ಚಿಕಿತ್ಸೆ ಇಲ್ಲ
ಮಂಗನ ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಕೇವಲ ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗದ ಲಕ್ಷಣ ಕಾಣಸಿಕೊಂಡ ಕೂಡಲೇ ಚಿಕಿತ್ಸೆ ಪಡೆಯುವುದು ಉತ್ತಮ ಎಂಬುದು ಆರೋಗ್ಯ ಇಲಾಖೆಯ ಸಲಹೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೂ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿದೆ. ಕೆಎಫ್‌ಡಿ ಲಸಿಕೆಯು ಮೊದಲ ಹಂತದಲ್ಲಿ ಭರವಸೆ ಫಲಿತಾಂಶ ನೀಡಿದೆ. ಮಂಗಗಳ ಮೇಲಿನ ಪ್ರಾಯೋಗಿಕ ಬಳಕೆ ಎರಡನೇ ಹಂತದಲ್ಲಿದೆ. ಮಾನವರ ಮೇಲೆ ಈ ಲಸಿಕೆಯ ಪ್ರಯೋಗ ಇನ್ನೂ ಆಗಿಲ್ಲ. ಆದ್ದರಿಂದ ಮುನ್ನೆಚ್ಚರಿಕೆಯೇ ಉತ್ತಮ ಎಂದು ಅಧಿಕಾರಿಗಳು ಹೇಳುತ್ತಾರೆ.