ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿ ಪರ ಶೋಭಾ ಮತಯಾಚನೆ

Last Updated 25 ಮೇ 2019, 11:59 IST
ಅಕ್ಷರ ಗಾತ್ರ

ಮೂಡಿಗೆರೆ: ಪಕ್ಷದ ತಾಲ್ಲೂಕು ಘಟಕದಿಂದ ಅಭಿನಂದನೆ ಸ್ವೀಕರಿಸಲು ಶುಕ್ರವಾರ ರಾತ್ರಿ ಪಟ್ಟಣಕ್ಕೆ ಬಂದಿದ್ದ ನೂತನ ಸಂಸದೆ ಶೋಭಾ ಕರಂದ್ಲಾಜೆ ಪಟ್ಟಣ ಪಂಚಾಯಿತಿ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದರು.

ಸಂಜೆ ಆರು ಗಂಟೆಯ ಸುಮಾರಿಗೆ ಪಟ್ಟಣಕ್ಕೆ ಬಂದ ಅವರು, ಕೊಲ್ಲಿಬೈಲ್ ತಿರುವಿನಲ್ಲಿ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ನೀಡಿದ ಅಭಿನಂದನೆಯನ್ನು ಸ್ವೀಕರಿಸಿ, ನೇರವಾಗಿ ಒಂದನೇ ವಾರ್ಡಿಗೆ ತೆರಳಿ ಅಭ್ಯರ್ಥಿಗಳೊಂದಿಗೆ ಮತಯಾಚನೆ ಮಾಡಿದರು. ಪಟ್ಟಣ ಪಂಚಾಯಿತಿ ಚುನಾವಣೆ ವ್ಯಾಪ್ತಿಯ 11ವಾರ್ಡ್ ಗಳಲ್ಲಿ ಮತ ಬೇಟೆಗೆ ಇಳಿದ ಅವರು, ಪ್ರಮುಖ ರಸ್ತೆಗಳಲ್ಲಿ ತೆರಳಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತಯಾಚನೆ ಮಾಡಿದರು.

ಸಂಸದೆ ಶೋಭಾ ಕರಂದ್ಲಾಜೆ ಮತಯಾಚನೆಗೆ ಬರುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ರಸ್ತೆ ಬದಿಯಲ್ಲಿ, ಅಂಗಡಿ ಮುಂಗಟ್ಟುಗಳ ಬಳಿ, ಜನರು ನಿಂತು ನೂತನ ಸಂಸದೆಯನ್ನು ಸ್ವಾಗತಿಸಿದರು. ರಸ್ತೆಯಲ್ಲಿಯೇ ಬಿಜೆಪಿ ಕಾರ್ಯಕರ್ತರು ನೂತನ ಸಂಸದೆಗೆ ಹಾರ, ತುರಾಯಿಗಳನ್ನು ಹಾಕಿ ಅಭಿನಂದಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಮಾತನಾಡಿ, ‘ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಪಕ್ಷಕ್ಕೆ ಜಯ ತಂದುಕೊಟ್ಟಿರುವುದು ಖುಷಿ ನೀಡಿದೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಮೂಲಕ, ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಲಾಗುವುದು’ ಎಂದರು.

ಪಕ್ಷದ ಪದಾಧಿಕಾರಿಗಳಾದ ದುಂಡುಗ ಪ್ರಮೋದ್ ಕುಮಾರ್, ಕೆ.ಸಿ. ರತನ್, ಟಿ.ಎಂ. ಗಜೇಂದ್ರ, ಹಳಸೆ ಶಿವಣ್ಣ, ಎಂ.ಎನ್. ಕಲ್ಲೇಶ್, ಬಿದ್ರಳ್ಳಿ ಜಯಂತ್, ಪಟೇಲ್ ಮಂಜು, ಕೆಂಜಿಗೆ ಕೇಶವ್, ಸುದರ್ಶನ್, ಹಾಲಪ್ಪಗೌಡ, ಜೆ.ಎಸ್. ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT