ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಸೆ | ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Published 26 ಆಗಸ್ಟ್ 2023, 10:57 IST
Last Updated 26 ಆಗಸ್ಟ್ 2023, 10:57 IST
ಅಕ್ಷರ ಗಾತ್ರ

ಸಿಂಸೆ(ಎನ್.ಆರ್.ಪುರ): ತಾಲ್ಲೂಕಿನ ಗಾಯಿತ್ರಿ ವಿಶ್ವಕರ್ಮ ಮಹಿಳಾ ಸಂಘದ ಸದಸ್ಯರು ಸಿಂಸೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.

ಪಟ್ಟಣದ ಕಾಳಿಕಾಂಬ ದೇವಸ್ಥಾನದ ಪುರೋಹಿತರಾದ ಶಿವಶಂಕರ ಆಚಾರ್ಯ ಪೂಜಾ ಕಾರ್ಯ ನೆರವೇರಿಸಿದರು.

ಗಾಯಿತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್ಯ, ಕಾರ್ಯದರ್ಶಿ ಸುಮತಿ ಆಚಾರ್ಯ, ಖಜಾಂಚಿ ಜಯಲಕ್ಷ್ಮೀ ಆಚಾರ್ಯ ಹಾಗೂ ಸದಸ್ಯರು ಇದ್ದರು.

ಶೃಂಗೇರಿ ಕ್ಷೇತ್ರಮಟ್ಟದ ವಿಶ್ವಕರ್ಮ ಸಮಾಜದ ವಾರ್ಷಿಕೋತ್ಸವ:

ವಿಶ್ವಕರ್ಮ ಸೇವಾ ಸಮಾಜದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಮಾತನಾಡಿ, ‘ಆ 27ರಂದು ಕೊಪ್ಪದಲ್ಲಿ ಶೃಂಗೇರಿ ಕ್ಷೇತ್ರಮಟ್ಟದ ವಿಶ್ವಕರ್ಮ ಸಮಾಜದ ವಾರ್ಷಿಕೋತ್ಸವ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿರುವ ಸಮುದಾಯದ 3 ಜನರಿಗೆ ಹಾಗೂ ಶಾಸಕರಿಗೆ ಅಭಿನಂದಿಸಲಾಗುವುದು’ ಎಂದರು.

ಪಟ್ಟಣ ಹಳೇಮಂಡಗದ್ದೆ ವೃತ್ತದ ವ್ಯಾಪ್ತಿಯಲ್ಲಿರುವ ಕಾಳಿಕಾಂಬ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಶೃಂಗೇರಿ ಕ್ಷೇತ್ರ ಮೂರು ತಾಲ್ಲೂಕುಗಳಲ್ಲಿ ನರಸಿಂಹರಾಜಪುರದಲ್ಲಿ ಮಾತ್ರ ವಿಶ್ವಕರ್ಮ ಸಮಾಜದ ಕಾಳಿಕಾಂಬ ದೇವಸ್ಥಾನವಿದೆ. ದೇವಸ್ಥಾನ ಜೀರ್ಣೋದ್ಧಾರ ಮಾಡಲು ಸಮಾಜದ ಎಲ್ಲರೂ ಸಹಕಾರ ನೀಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT