ನರಸಿಂಹರಾಜಪುರ ತಾಲ್ಲೂಕು ಮಂಜಿನಕೊಪ್ಪ ವ್ಯಾಪ್ತಿಯಲ್ಲಿ ಭತ್ತದ ನಾಟಿಗೆ ಸಸಿ ಮಡಿ ಬಿಟ್ಟಿರುವುದು
ವೆಚ್ಚ ದುಬಾರಿ:
ಭತ್ತ ಬೆಳೆಯಲು ಹಿಂದೇಟು ಶೃಂಗೇರಿ: ತಾಲ್ಲೂಕಿನಲ್ಲಿ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಭತ್ತ ದರ ಕ್ವಿಂಟಾಲ್‌ಗೆ ₹2 ಸಾವಿರ ತೀರ ಕಡಿಮೆ ಇರುವುದರಿಂದ ವಾಣಿಜ್ಯ ಬೆಳೆಗಳಾದ ಅಡಿಕೆ ಕಾಫಿ ಕಾಳು ಮೆಣಸಿನ ದರ ಹೆಚ್ಚಳ ಇರುವುದರಿಂದ ರೈತರು ಭತ್ತದ ಕೃಷಿ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 4510 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಗದ್ದೆ ಸಜ್ಜುಗೊಳಿಸಿದ್ದಾರೆ. ವರ್ಷದಲ್ಲಿ ಭತ್ತ ಬೆಳೆಯಲು ಸಸಿ ಮಡಿ ನಾಟಿ ಬತ್ತ ಸಂಸ್ಕರಣೆಗೆ ಕಾರ್ಮಿಕರ ವೆಚ್ಚ ಅಧಿಕವಾಗಿದೆ. ಇದರಿಂದ ಒಂದು ಕ್ವಿಂಟಾಲ್ ಭತ್ತ ಬೆಳೆಯಲು ಸುಮಾರು ₹7 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ನಷ್ಟನೆ ಜಾಸ್ತಿ ಆಗಿರುವುದರಿಂದ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್ ತಿಳಿಸಿದರು.