ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಪ್ಪುಹಂದಿ ಮಾರಾಟ: 10 ಮಂದಿ ಬಂಧನ

Last Updated 18 ಆಗಸ್ಟ್ 2020, 16:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಿಪ್ಪುಹಂದಿ ಬೇಟೆ, ಮಾರಾಟ ಜಾಲ ಭೇದಿಸಿ 10 ಮಂದಿ ಬಂಧಿಸಿ, 6 ಕೆ.ಜಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಅರಣ್ಯ ಸಂಚಾರಿ ದಳ, ಅರಣ್ಯ ಸಿಬ್ಬಂದಿ ಸೋಮವಾರ ಮತ್ತು ಮಂಗಳವಾರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಖರೀದಿದಾರರಂತೆ ಖಾಸಗಿ ವಾಹನಗಳಲ್ಲಿ ತೆರಳಿ ನಗರದ ಉಪ್ಪಳ್ಳಿ, ಇತರೆಡೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಆರೋಪಿಗಳು ಮುತ್ತೋಡಿ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ಚಿಪ್ಪು ಹಂದಿಗಳನ್ನು ಬೇಟೆಯಾಡಿ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಸಖರಾಯಪಟ್ಟಣ, ಜಾವಗಲ್‌, ಕಳಾಸಪುರ ಇತರ ಊರಿನವರು. ಆರೋಪಿಗಳ ಫೋನ್‌ ಕಾಲ್‌ ಡಿಟೇಲ್ಸ್‌ನಿಂದ ಜಾಲವನ್ನು ಪತ್ತೆ ಹೆಚ್ಚಿದೆವು. 6 ಕೆ.ಜಿ ಮಾಲು ವಶಪಡಿಸಿಕೊಂಡಿದ್ದೇವೆ.’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌.ಜಗನ್ನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಜಾಲವು ಬೆಂಗಳೂರು ಇತರೆಡೆಗಳಲ್ಲೂ ಲಿಂಕ್‌ ಇದೆ. ಈ ನಿಟ್ಟಿನಲ್ಲೂ ತಲಾಶ್‌ ಶುರು ಮಾಡಿದ್ದೇವೆ. ಜಾಲವು ವಿದೇಶಗಳಲ್ಲೂ ಸಂಪರ್ಕ ಹೊಂದಿರುವ ಗುಮಾನಿ ಇದೆ. ವಿಚಾರಣೆಯಲ್ಲಿ ತೊಡಗಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT