ಕಡೂರು: ದೊಡ್ಡಪಟ್ಟಣಗೆರೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಂ.ಆರ್. ಸಂಗೀತಾ (582), ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್. ಪವಿತ್ರಾ (569) ಇಬ್ಬರೂ ಕಲಾ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಬಾರಿ ಶೇ 70ರಷ್ಟು ಫಲಿತಾಂಶ ಪಡೆದಿದ್ದು, ಕಲಾ ವಿಭಾಗದಲ್ಲಿ ಪವಿತ್ರಾ (569), ವಾಣಿಜ್ಯ ವಿಭಾಗದಲ್ಲಿ ಸಿ.ಸಿ. ಪ್ರಿಯಾ ಮತ್ತು ಜಿ.ಆರ್. ವರ್ಷ ತಲಾ (556) ಮತ್ತು ವಿಜ್ಞಾನ ವಿಭಾಗದಲ್ಲಿ ಬಿ.ಆರ್. ದಿವ್ಯಾ (564) ಅಂಕ ಪಡೆದಿದ್ದಾರೆ. ಕಾಲೇಜಿನಲ್ಲಿ ಅತ್ಯುನ್ನತ (54), ಪ್ರಥಮ (206), ದ್ವಿತೀಯ (92) ತೃತೀಯ (51) ಸ್ಥಾನಗಳಲ್ಲಿ ಒಟ್ಟು 403 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ತವರಾಜ್ ತಿಳಿಸಿದರು.

ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು: ವಿಜ್ಞಾನ ವಿಭಾಗದಲ್ಲಿ ಶೇ 83 ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 85 ಫಲಿತಾಂಶ ದಾಖಲಿಸಿದೆ.

ಆರ್.ಪಿ. ಪಿಯು ವಸತಿಯುತ ಕಾಲೇಜು: ವಿಜ್ಞಾನ ವಿಭಾಗದಲ್ಲಿ ಶೇ 95, ವಾಣಿಜ್ಯ ವಿಭಾಗದಲ್ಲಿ ಶೇ 97ರಷ್ಟು ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 144 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 46 ವಿದ್ಯಾರ್ಥಿಗಳು ಅತ್ಯುತ್ತಮ, 81 ಪ್ರಥಮ ದರ್ಜೆ ಮತ್ತು 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 46 ವಿದ್ಯಾರ್ಥಿಗಳ ಪೈಕಿ 11 ಅತ್ಯುನ್ನತ, 31 ಪ್ರಥಮ ಹಾಗೂ ಒರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ. ವಿಜ್ಞಾನ ವಿಭಾಗದಲ್ಲಿ ಸ್ವರ್ಣಶ್ರೀ (581), ತೇಜಸ್ವಿನಿ (580), ಭರತ್ (571). ವಾಣಿಜ್ಯ ವಿಭಾಗದಲ್ಲಿ ಸಹನಾ (575), ಸಿಂಚನಾ (564), ಯಮುನಾ (556) ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ರವಿಕಾಂತ್ ತಿಳಿಸಿದರು.

ಕಡೂರು ಪಟ್ಟಣದ ಪತ್ರಕರ್ತ ಎ.ಜೆ. ಪ್ರಕಾಶ್ ಮೂರ್ತಿ ಮತ್ತು ಶಿಕ್ಷಕಿ ಪಿ.ಎಂ. ಉಷಾ ದಂಪತಿ ಪುತ್ರ ಎ.ಪಿ.ಷಡ್ಜಯ್ ವಿಜ್ಞಾನ ವಿಭಾಗದಲ್ಲಿ ಶೇ 99.37 (596) ಅಂಕ ಗಳಿಸುವ ಮೂಲಕ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿಗೆ ಪ್ರಥಮ ಸ್ಥಾನಯಾಗಿದ್ದಾರೆ. ಕನ್ನಡ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ ತಲಾ 100 ಮತ್ತು ಭೌತಶಾಸ್ತ್ರ 98, ಗಣಿತ 99, ಇಂಗ್ಲಿಷ್ನಲ್ಲಿ 99 ಅಂಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.