ಶುಕ್ರವಾರ, ಅಕ್ಟೋಬರ್ 22, 2021
29 °C
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವಿ

ಆರ್‌ಎಸ್‌ಎಸ್‌ ಆನೆ ಇದ್ದಂತೆ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಆರ್‌ಎಸ್‌ಎಸ್‌ ಆನೆ ಇದ್ದಂತೆ. ಬೇರೆಯವರು ಏನು ಮಾಡುತ್ತಾರೆ ಎಂದು ಆನೆ ಯಾವತ್ತೂ ತಲೆಕೆಡಿಸಿಕೊಳ್ಳಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಆರ್‌ಎಸ್‌ಎಸ್‌ ಬಗ್ಗೆ ಎಚ್‌ಡಿಕೆ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವ ಪದ್ಧತಿ ಸಂಘದಲ್ಲಿ ಇಲ್ಲ. ಸತ್ಯದ ಅರಿವಿದ್ದರೆ ಆರ್‌ಎಸ್‌ಎಸ್‌ ಅರ್ಥವಾಗುತ್ತದೆ. ತಾನು ಬದುಕಿರುವವರೆಗೆ ವೋಟು ಬಂದರೆ ಸಾಕು ಅನ್ನುವ ಮನೋಭಾವ ಇರುವವರಿಗೆ, ಸ್ವಾರ್ಥದಲ್ಲಿ ಯೋಚಿಸುವವರಿಗೆ ಅರ್ಥವಾಗಲ್ಲ. ತನ್ನ ಸ್ವಾರ್ಥಕ್ಕಿಂತ ದೇಶ ಮಹತ್ವದ್ದು ಎನ್ನುವವರಿಗೆ ಆರ್‌ಎಸ್‌ಎಸ್‌ ಅರ್ಥವಾಗುತ್ತದೆ’ ಎಂದರು.

‘ಜಿಲ್ಲೆ ಉಸ್ತುವಾರಿ ಯಾರಿಗೆ ಕೊಡಬೇಕು ಎಂಬುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು, ಆಯಾ ಜಿಲ್ಲೆ ಪರಿಸ್ಥಿತಿ ಆಧರಿಸಿ ಅವರು ತೀರ್ಮಾನಿಸುತ್ತಾರೆ. ಆ ವಿಷಯದಲ್ಲಿ ತಲೆಹಾಕಲ್ಲ’ ಎಂದು ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು