ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಎಸ್.ಎಂ.ಕೃಷ್ಣ ಅವರು ಮೇಲ್ದರ್ಜೆಗೇರಿಸಿದ್ದರು.

ತಾಲ್ಲೂಕಿನಲ್ಲಿ ಉತ್ತಮ ಆಸ್ಪತ್ರೆ ಇರಬೇಕು ಎಂಬುದು ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ ಅವರ ಬಯಕೆಯಾಗಿತ್ತು. ಅದರಂತೆ 2003ರಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿತ್ತು.

‘ಎಸ್.ಎಂ.ಕೃಷ್ಣ ಅವರಿಗೆ ಮೂಡಿಗೆರೆ ಮೇಲೆ ವಿಶೇಷವಾದ ಕಾಳಜಿಯಿತ್ತು. ಎಂಜಿಎಂ ಆಸ್ಪತ್ರೆಯ ಮೇಲ್ದರ್ಜೆ, ಹೇಮಾವತಿ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆಗೆ ₹ 5 ಕೋಟಿ ಅನುದಾನ ಒದಗಿಸಿದ್ದರು. ಹೊಯ್ಸಳ ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನ ಒದಗಿಸಿದ್ದರು. ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಲು ನನಗೆ ಪ್ರೇರಕರಾಗಿದ್ದರು’ ಎಂದು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೋಟಮ್ಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.