ಶೃಂಗೇರಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ತಾಲ್ಲೂಕು ಆಸ್ಪತ್ರೆಯಾಗಿ ಮಂಜೂರಾತಿ ಆಗಿದ್ದರೂ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಾಲ್ಲೂಕು ವೈದ್ಯಾಧಿಕಾರಿ ಹೊರತುಪಡಿಸಿ ವೈದ್ಯರಿಲ್ಲದೆ ಆಸ್ಪತ್ರೆ ಬಿಕೋ ಎನ್ನುತ್ತಿದೆ.

30 ಬೆಡ್ ಸಾಮರ್ಥ್ಯದ ಆಸ್ಪತ್ರೆಯು 2007ರಲ್ಲಿ 100 ಬೆಡ್ ಆಸ್ಪತ್ರೆಯಾಗಿ ದಾಖಲೆಯಲ್ಲಿ ಮಾತ್ರ ಮಂಜೂರಾತಿ ಆಗಿದೆ. ಅಗತ್ಯ ಸೌಲಭ್ಯಗಳಿಲ್ಲದೆ ಆಸ್ಪತ್ರೆಯು ಖಾಲಿ ಹೊಡೆಯುತ್ತಿದೆ. ಹಿಂದಿನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಶೃಂಗೇರಿಗೆ ಭೇಟಿ ನೀಡಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ ಸಾರ್ವಜನಿಕರು, 100 ಬೆಡ್ನ ಆಸ್ಪತ್ರೆ ಮಾಡಲು ಮನವಿ ಮಾಡಿದ್ದರು. ಆಗ ಸಚಿವರು ಒಪ್ಪಿಗೆ ನೀಡಿ ಜಾಗ ಗುರುತಿಸಲು ತಹಶೀಲ್ದಾರ್ಗೆ ತಿಳಿಸಿದ್ದರು. ಶಿಡ್ಲೆಯಲ್ಲಿ ಜಾಗ ಗುರುತು ಮಾಡಿದ ನಂತರ ಶಂಕುಸ್ಥಾಪನೆ ನೇರವೇರಿತ್ತು. ಆದರೆ ಅದು ಅರಣ್ಯ ಜಾಗ ಎಂದು ರದ್ದಾಯಿತು. ಈಗ ಬೆಳಂದೂರಿನಲ್ಲಿ ಜಾಗ ಗುರುತು ಮಾಡಿದ್ದಾರೆ. ಆದರೆ 100 ಬೆಡ್ನ ಆಸ್ಪತ್ರೆ ಕನಸಾಗಿಯೇ ಉಳಿದಿದೆ.

ಅರಿವಳಿಕೆ ತಜ್ಞ ಇದ್ದು, ಜನರಲ್ ಸರ್ಜನ್, ಮಕ್ಕಳ ತಜ್ಞ, ನೇತ್ರ ತಜ್ಞ, ಕೀಲು– ಮೂಳೆ ತಜ್ಞ, ಕಿವಿ– ಮೂಗು– ಗಂಟಲು ತಜ್ಞರು, ಚರ್ಮರೋಗ ತಜ್ಞರು, ಪ್ರಸೂತಿ ತಜ್ಞರು, ರೇಡಿಯಾಲಜಿ ತಜ್ಞ ಹುದ್ದೆಗಳು ದೀಘ ಕಾಲದಿಂದ ಖಾಲಿ ಇವೆ. ತುರ್ತು ಚಿಕಿತ್ಸೆಗಳಾದ ಅಪಘಾತ, ಹೃದಯಘಾತ, ಕಿಡ್ನಿ ಸಮಸ್ಯೆ, ಮೆದುಳು ಸಮಸ್ಯೆ, ಹೊಟ್ಟೆನೋವು, ದಂತ ಚಿಕಿತ್ಸೆ ಯಂತ್ರೋಪಕರಣ, ಮೂಳೆ ಜೋಡಿಸುವುದು ಮುಂತಾದ ಆಪರೇಷನ್ ಮಾಡಿಸಿಕೊಳ್ಳಲು, ಎಕ್ಸರೇ, ರೇಡಿಯಾಲಜಿ, ಅಲ್ಟ್ರಾಸೌಂಡ್ ಸ್ಕ್ಯಾನ್, ಇ.ಸಿ.ಜಿ, ಎಂ.ಆರ್.ಐ. ಸೌಲಭ್ಯಗಳು, ತಜ್ಞರಿಲ್ಲದ ಕಾರಣ ಮಣಿಪಾಲ್, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಒದಗಿದೆ. ರಾತ್ರಿ ತುರ್ತಾಗಿ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದೆ ವಾಪಸ್ ಹೋಗಬೇಕಿದೆ.

ಚಿಕಿತ್ಸಾ ಸೌಲಭ್ಯ ವಿಭಾಗದಲ್ಲಿ 21 ಶುಶ್ರೂಶಕ ಅಧಿಕಾರಿಗಳು ಇದ್ದಾರೆ. ಆಸ್ಪತ್ರೆಯಲ್ಲಿ 3 ವರ್ಷಗಳಲ್ಲಿ ಹೆರಿಗೆಗಳು ನಡೆದಿಲ್ಲ. ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು ಖಾಲಿ ಇವೆ. ಒಬ್ಬರು ಫಾರ್ಮಾಸಿಸ್ಟ್ ಬೇಕಿದೆ. ಇಬ್ಬರು ಆಂಬುಲೆನ್ಸ್ ಚಾಲಕರು ಕಾರ್ಯ ನಿರ್ವಹಿಸುತ್ತಿದ್ದು, ಇನ್ನಿಬ್ಬರು ಬೇಕಿದೆ. 108 ಆಂಬುಲೆನ್ಸ್ ಹದಗೆಟ್ಟಿದೆ.

ಗ್ರಾಮ ಪಂಚಾಯಿತಿ ನೀರಿನ ಸೌಲಭ್ಯ ಸರಿಯಾಗಿ ಒದಗಿಸುತ್ತಿಲ್ಲ. ನೀರಿನ ಕೊರತೆಯಿಂದಾಗಿ ಶೌಚಾಲಯ ಬಳಸುವುದು ಕಷ್ಟ. ಕಟ್ಟಡದ ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಆಸ್ಪತ್ರೆ ನೈರ್ಮಲ್ಯವಾಗಿಲ್ಲ. ‘ನಿತ್ಯ ಸಾವಿರಾರು ಜನ ಚಿಕಿತ್ಸೆ ಅರಸಿ ಪಟ್ಟಣಕ್ಕೆ ಬಂದರೆ ಮೂಲಸೌಕರ್ಯಗಳೇ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಆಸ್ಪತ್ರೆ ದುಃಸ್ಥಿತಿ ಬಗ್ಗೆ ಸರ್ಕಾರ, ಮುಖ್ಯಮಂತ್ರಿ, ಆರೋಗ್ಯ ಸಚಿವ, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಹೋರಾಟ ಸಮಿತಿಯ ರಂಜಿತ್ ಹೇಳಿದರು.

‘ತಾಲ್ಲೂಕು ಆಸ್ಪತ್ರೆ ಬಗ್ಗೆ ಎಷ್ಟೇ ದೂರು ದಾಖಲಾದರೂ ಸಂಬಂಧಿಸಿದ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ಜಿಲ್ಲೆಯ ಇತರ ತಾಲ್ಲೂಕುಗಳಿಗೆ ವೈದ್ಯರನ್ನು ನೇಮಿಸಿದ್ದಾರೆ, ಇಲ್ಲಿ ಮಾತ್ರ ಆಸ್ಪತ್ರೆ ಸೊರಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಹೇಳಿದರು.

‘ತಜ್ಞರು, ಸಿಬ್ಬಂದಿ ನೇಮಿಸಿ’

ತಾಲ್ಲೂಕಿನ ಸಾವಿರಾರು ಜನರು, ರೋಗಿಗಳು ಚಿಕಿತ್ಸೆ ಅರಸಿ ನಮ್ಮಲ್ಲಿಗೆ ಬರುತ್ತಾರೆ. ಇಲ್ಲಿ ಎಲ್ಲಾ ವಿಭಾಗದಲ್ಲಿ ತಜ್ಞ ವೈದ್ಯರು ಇಲ್ಲದಿರುವುದರಿಂದ ನಮಗೆ ಸಾರ್ವಜನಿಕರ ನಿರೀಕ್ಷೆಯ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇಲ್ಲಿ ಖಾಲಿ ಇರುವ ವೈದ್ಯರು, ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.

ಕಾಡುವ ನೋವು

‘ಇಲ್ಲಿನ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಮಣಿಪಾಲಕ್ಕೆ ಕರೆದುಕೊಂಡು ಹೋದರೆ, ಅಲ್ಲಿ ವೈದ್ಯರು ಸ್ವಲ್ಪ ಹೊತ್ತು ಮುಂಚೆ ಕರೆದುಕೊಂಡು ಬಂದಿದ್ದರೆ ಪ್ರಾಣ ಉಳಿಸಬಹುದಿತ್ತು ಎಂದು ಹೇಳುವಾಗ ಆಗುವ ನೋವು ಜೀವನ ಪೂರ್ತಿ ಕಾಡುತ್ತದೆ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.