ಶನಿವಾರ, ಅಕ್ಟೋಬರ್ 24, 2020
18 °C

ಕಾಫಿನಾಡು: ಖ್ಯಾತ ಗಾಯಕ ಡಾ.ಎಸ್‌.ಪಿ. ಬಾಲಸುಬ್ರಮಣ್ಯಂ ನೆನಪಿನ ಯಾನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಖ್ಯಾತ ಗಾಯಕ ಡಾ.ಎಸ್‌.ಪಿ. ಬಾಲಸುಬ್ರಮಣ್ಯಂ ಅವರು  ಕಾಫಿನಾಡಿನ ತಾಣಗಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದಾರೆ. 

‘ಮುದ್ದಿನ ಮಾವ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಎಸ್‌ಪಿಬಿ ಅವರು ಶೃಂಗೇರಿ,  ಹೊರನಾಡು ತಾಣಗಳಿಗೆ ಭೇಟಿ ನೀಡಿದ್ದಾರೆ. ಶಾರದಾಂಬೆ, ಅನ್ನಪೂರ್ಣೇಶ್ವರಿ ದೇಗುಲ ಆವರಣದಲ್ಲಿ ಚಿತ್ರೀಕರಣ ನಡೆದಿತ್ತು. 

‌‘ಎಸ್‌ಪಿಬಿ ಅವರು  2006ರಲ್ಲಿ ಗಾಯನ ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣಕ್ಕೆ ಬಂದಿದ್ದರು. ಆದರೆ, ಮಳೆಯ ಕಾರಣದಿಂದಾಗಿ ಕಾರ್ಯಕ್ರಮ ನಡೆಯಲಿಲ್ಲ. ಜನರು ಎಸ್‌ಪಿಬಿ ಅವರನ್ನು ನೋಡಿಯೇ ಪುಳಕಿತರಾಗಿದ್ದರು’ ಎಂದು ರಂಗಕರ್ಮಿ ರಮೇಶ್‌ ಬೇಗಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆಗ ಶೃಂಗೇರಿಯಲ್ಲಿ ಒಂದೂವರೆ ದಿನ ಇದ್ದರು. ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದರು. ಇಡೀ ಒಂದೂವರೆ ದಿನ ಅವರ ಜತೆ ಕಳೆದಿದ್ದೆ’ ಎಂದು ನೆನಪಿಸಿಕೊಂಡರು. 

ಎಸ್‌ಪಿಬಿ ಆವರು ರಂಭಾಪುರಿಶ್ರೀ ಅವರನ್ನು ಭೇಟಿ ಮಾಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು