ಮೂಡಿಗೆರೆ: ‘ಮಾಜಿ ಮುಖ್ಯಮಂತ್ರಿ ದಿ. ಎಸ್.ಎಂ.ಕೃಷ್ಣ ಅವರು ದೂರದೃಷ್ಟಿತ್ವದಿಂದ ರಾಜ್ಯವು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಬೆಳಗುವಂತೆ ಮಾಡಿದರು’ ಎಂದು ಕಾಫಿ ಬೆಳೆಗಾರರ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಬಿದ್ರಳ್ಳಿ ಜಯರಾಂ ಹೇಳಿದರು.

ಪಟ್ಟಣದ ಜೇಸಿಐ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸಹಕಾರದಡಿ ಏರ್ಪಡಿಸಿದ್ದ ಎಸ್.ಎಂ. ಕೃಷ್ಣ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಡಳಿತದಲ್ಲಿ ನಿಷ್ಕಲ್ಮಶ ಹೊಂದಿದ್ದ ಎಸ್.ಎಂ. ಕೃಷ್ಣ ಅವರು, ಸದಾ ರಾಜ್ಯದ ಅಭಿವೃದ್ಧಿ ಬಯಸುತ್ತಿದ್ದರು. ಅವರ ಆಡಳಿತಾವಧಿಯಲ್ಲಾದ ಹಲವು ಯೋಜನೆಗಳು ರಾಜ್ಯವನ್ನು ಅಭಿವೃದ್ಧಿ ಪಥದತ್ತ ತಂದು ನಿಲ್ಲಿಸಿತು. ರಾಜಕೀಯದಲ್ಲಿ ಹಲವು ಉನ್ನತ ಹುದ್ದೆಗಳನ್ನು ನಿಭಾಹಿಸಿದರೂ ಸರಳತೆಯಿಂದ ಜೀವಿಸಿದ ಎಸ್.ಎಂ. ಕೃಷ್ಣ ಅವರ ನಡೆಯು ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದರು.

ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ‘ಸರ್ಕಾರಿ ಶಾಲೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಎಸ್.ಎಂ. ಕೃಷ್ಣ ಅವರು, ಬಿಸಿಯೂಟ ಯೋಜನೆ ಜಾರಿಗೊಳಿಸಿದರು. ಜಿಲ್ಲೆಗೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿದ ಅವರು ಅಜಾತಶತ್ರುವಾಗಿದ್ದರು. ರಾಜ್ಯದಿಂದ ಪ್ರತಿಭಾ ಪಲಾಯನವಾಗದಂತೆ ತಡೆಯಲು ಐ.ಟಿ, ಬಿ.ಟಿ ಕ್ಷೇತ್ರವನ್ನು ಬಲಪಡಿಸಿದರು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ಸಂಘಟನೆಗಳ ಪದಾಧಿಕಾರಿಗಳಾದ ಜಿ.ಎಚ್. ಹಾಲಪ್ಪಗೌಡ, ಹಳಸೆ ಶಿವಣ್ಣ, ಪ್ರಸನ್ನ ಗೌಡಳ್ಳಿ, ಪಿ.ಕೆ.ನಾಗೇಶ್ ಮಾತನಾಡಿದರು.

ರೇವಣ್ಣಗೌಡ, ಪ್ರದೀನ್, ಪ್ರದೀಪ್ ಮುಗ್ರಹಳ್ಳಿ, ಚಂದ್ರಕಾಂತ್ ಹಳಸೆ, ಹರ್ಷ ಹಳೇಕೋಟೆ, ನರೇಂದ್ರಶೆಟ್ಟಿ, ಜಯಕುಮಾರ್, ಬಿ.ಆರ್. ನವೀನ್ ಕುಮಾರ್, ಎಂ.ಎಸ್. ನಾಗರಾಜ್, ಎಚ್.ಕೆ. ಶಿವಕುಮಾರ್, ಬಿ.ಎಲ್. ದಿನೇಶ್, ಲೋಕೇಶ್ ಬೆಟ್ಟಗೆರೆ, ಬಿ.ಕೆ. ಲಕ್ಷ್ಮಣಕುಮಾರ್, ಪವಿತ್ರ, ಆರ್. ಪ್ರಕಾಶ್, ಜಯಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.