ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡೇವಾ: ಅಕ್ಷರ ದಾಸೋಹ ಭವನಕ್ಕೆ ಭೂಮಿಪೂಜೆ

Last Updated 3 ಅಕ್ಟೋಬರ್ 2022, 4:26 IST
ಅಕ್ಷರ ಗಾತ್ರ

ತರೀಕೆರೆ: ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಡಿ.ಎಸ್. ಸುರೇಶ್ ಹೇಳಿದರು.

ಉಡೇವಾ ಗ್ರಾಮದಲ್ಲಿ ₹16 ಲಕ್ಷ ವೆಚ್ಚದ ಅಕ್ಷರದಾಸೋಹ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಉಡೇವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 10 ಲಕ್ಷ ಅನುದಾನದ ಘನತಾಜ್ಯ ಘಟಕ ಮತ್ತು ₹ 3 ಲಕ್ಷದಲ್ಲಿ ಉಡೇವಾ ಗ್ರಾಮದ ಈಶ್ವರ ಸ್ವಾಮಿ ದೇವಾಲಯದ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಸಿ. ರಾಜಪ್ಪ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಇಒ ಗೀತಾಶಂಕರ್, ಉಡೇವಾ ಗ್ರಾಮ ಪಂಚಾಯಿತಿ ಪಿಡಿಒ ಸಿದ್ದಮ್ಮ, ಕಾರ್ಯದರ್ಶಿ ಬಿ.ಮಂಜನಾಯ್ಕ, ಉಪಾಧ್ಯಕ್ಷೆ ಸುಚಿತ್ರಾ ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯರು, ಸಿಡಿಪಿಒ ಜ್ಯೋತಿಲಕ್ಷ್ಮೀ, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಮಂಜಪ್ಪ, ಗುತ್ತಿಗೆದಾರ ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT