ತರೀಕೆರೆ: ‘ಜನಪದ ಸಾಹಿತ್ಯಕ್ಕೆ ಯಾವುದೇ ಇತಿಮಿತಿ ಹಾಗೂ ಚೌಕಟ್ಟಿಲ್ಲ. ಜಾನಪದ ಒಂದು ಜಾತಿಗೆ, ಒಂದು ಧರ್ಮಕ್ಕೆ ಸೀಮಿತವಲ್ಲ. ಜನಪದ ಸಾಹಿತ್ಯ ಧರ್ಮಾತೀತ ಹಾಗೂ ಜಾತ್ಯತೀತವಾದದ್ದು’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಜಾನಪದ ಎಸ್. ಬಾಲಾಜಿ ಹೇಳಿದರು.

ತಾಲ್ಲೂಕಿನ ಲಿಂಗದಹಳ್ಳಿಯ ದೇವಾಂಗ ಸಮುದಾಯ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಲಿಂಗದಹಳ್ಳಿ ಹೋಬಳಿ ಮಹಿಳಾ ಘಟಕದ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿ ಮಕ್ಕಳಿಗೆ ಶಿಶುಪ್ರಾಸ ಗೀತೆಗಳು ಹಾಗೂ ಹಳೆಕಾಲದ ತಿಂಡಿ–ತಿನಿಸುಗಳನ್ನು ತಿನ್ನಿಸುವ ಪ್ರಯತ್ನ ತಮ್ಮದಾಗಲಿ. ವಿದೇಶ ಆಹಾರವನ್ನು ನಿಲ್ಲಿಸಬೇಕೆಂದು ಸಲಹೆ ನೀಡಿದರು. ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೋಬಾನೆ, ರಾಗಿ ಬೀಸುವ ಪದಗಳು, ಗೀಗಿ ಪದಗಳು, ಜಾನಪದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.

ಕಜಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್. ವಿಶಾಲಾಕ್ಷಮ್ಮ ಮಾತನಾಡಿ, ಇಂದು ಲಿಂಗದಹಳ್ಳಿ ಹೋಬಳಿ ಮಟ್ಟದ ಮಹಿಳಾ ಘಟಕದ ಪದಗ್ರಹಣ ಸಮಾರಂಭ ನಡೆಯುತ್ತಿರುವುದು ಖುಷಿಯಾಗಿದೆ. ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಜೋಡಿಸಿ ಇಟ್ಟಿರುವುದನ್ನು ನೋಡಿದರೆ, ಲಿಂಗದಹಳ್ಳಿ ಹೋಬಳಿಯ ಮಹಿಳಾ ಘಟಕದ ಸದಸ್ಯೆಯರು ಜಾನಪದ ಸೊಗಡನ್ನು ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದಿದ್ದಾರೆ ಎಂದು ಹೇಳಿದರು.

ಹೋಬಳಿ ಮಹಿಳಾ ಘಟಕದ ನೂತನ ಅಧ್ಯಕ್ಷೆ ಆರ್.ಆರ್. ಜಯಮ್ಮ ನಾಗರಾಜ್ ಅಧಿಕಾರ ಸ್ವೀಕರಿಸಿ ಮಾತನಾಡಿ, ನನ್ನನ್ನು ಹೋಬಳಿ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಜಿ.ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಮಾತನಾಡಿ, ಜಾನಪದದ ಸಾರವನ್ನು ಸಾರುವ ರಾಗಿಯ ರಾಶಿ, ಮಣ್ಣಿನಿಂದ ಮಾಡಿರುವ ಮಡಕೆಯ ಕಲಾಕೃತಿಗಳು, ಕುಂಭಗಳು, ಎತ್ತಿನ ಗಾಡಿ, ಒನಕೆ ಮುಂತಾದ ವಸ್ತುಗಳನ್ನು ನೋಡಿದರೆ, ಮಹಿಳೆಯರಿಗೆ ಜಾನಪದದ ಬಗ್ಗೆ ತುಂಬಾ ಆಸಕ್ತಿ ಇದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.

ಲಿಂಗದಹಳ್ಳಿ ಹೋಬಳಿ ಮಟ್ಟದ ಸಮ್ಮೇಳನ ಹಾಗೂ ತರೀಕೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಸರ್ವರ ಸಹಕಾರ ಹಾಗೂ ಶಾಸಕರು ಮತ್ತು ನಾನು ನಿಮ್ಮ ಜೊತೆ ಇರುತ್ತೇನೆಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ ತರೀಕೆರೆ ಅಧ್ಯಕ್ಷೆ ಲೀಲಾಸೋಮಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ತಮ್ಮ, ಕಜಾಪ ಜಿಲ್ಲಾ ಘಟಕದ ಬ್ಯಾಟರಾಯನಪುರ ಅಧ್ಯಕ್ಷ ಮಹೇಂದ್ರ ಜಾದವ್, ಸಿ.ಡಿ.ಪಿ.ಒ. ಚರಣ್ ರಾಜ್, ಮಹಿಳಾ ಸಮಾಜ ಅಧ್ಯಕ್ಷೆ ದ್ರಾಕ್ಷಾಯಣಿ, ದೇವಾಂಗ ಸಮಾಜದ ಅಧ್ಯಕ್ಷ ನಾಗರಾಜ್, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಶಾರದಮ್ಮ, ಲಿಂಗದಹಳ್ಳಿ ಹೋಬಳಿ ಪದಾಧಿಕಾರಿಗಳು ಹಾಗೂ ಸದಸ್ಯರು, ಪ್ರಹರ್ಷಿತ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅನೂಪ್ ಭಾಗವಹಿಸಿದ್ದರು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಂಕರಮ್ಮ ಶೇಖರಪ್ಪ ಸ್ವಾಗತಿಸಿದರು. ರೇಣುಕಾ ನೀಲಕಂಠಪ್ಪ ವಂದಿಸಿದರು. ಶೖಲಜಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.