ತರೀಕೆರೆ ಪೊಲೀಸ್ ಉಪಾಧೀಕ್ಷಕರ ಕಚೇರಿ ಹಾಗೂ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರು ಧ್ವಜಾರೋಹಣ ನೆರವೇರಿಸಿದರು. ಸಿಪಿಐಗಳಾದ ರಾಮಚಂದ್ರ ನಾಯಕ್ ಗಿರೀಶ್ ಹಾಗೂ ಪಿಎಸ್ಐಗಳಾದ ನಾಗೇಂದ್ರ ನಾಯಕ್ ಆನಂದ್ ಪಾವಸ್ಕರ್ ಮಂಜುನಾಥ್ ಮನ್ನಂಗಿ ದೇವೇಂದ್ರ ರಾಥೋಡ್ ಭಾಗವಹಿಸಿದ್ದರು
ಯುನೈಟೆಡ್ ಎಜುಕೇಷನ್ ಟ್ರಸ್ಟ್ ಲಯನ್ಸ್ ಹಾಗೂ ಲಿಯೋ ಕ್ಲಬ್ ತರೀಕೆರೆಯ ಸಹಯೋಗದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾಜಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ ಟಿ.ಎನ್. ದೀಪ ಬೆಳಗಿಸಿದರು. ಶಾಲಾ ಅಧ್ಯಕ್ಷ ಫಜಲ್ ಅಹಮದ್ ಲಯನ್ ಸಂಸ್ಥೆಯ ಅಧ್ಯಕ್ಷ ಟಿ.ಎಂ. ಹರೀಶ್ ಧ್ವಜಾರೋಹಣವನ್ನು ನಡೆಸಿಕೊಟ್ಟರು
ತರೀಕೆರೆ ತಾಲ್ಲೂಕಿನ ಆಡಳಿತ ವತಿಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು
ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಶಾಲಾ ಮಕ್ಕಳು ವಿಶೇಷವಾಗಿ ನೃತ್ಯ ಪ್ರದರ್ಶನ ನಡೆಸಿಕೊಟ್ಟರು