ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಹಳೆ ಮನೆ ದುರಸ್ತಿಗೆ ಸಾಲ ನೀಡಲು ಚಿಂತನೆ: ಹರಿಪ್ರಸಾದ್

Published : 11 ಸೆಪ್ಟೆಂಬರ್ 2024, 14:27 IST
Last Updated : 11 ಸೆಪ್ಟೆಂಬರ್ 2024, 14:27 IST
ಫಾಲೋ ಮಾಡಿ
Comments

ಬೀರೂರು: ಸಾಮಾನ್ಯ ವರ್ಗದ ಜನರು ತಮ್ಮ ಹಳೆಯ ಮನೆಗಳನ್ನು ದುರಸ್ತಿ ಮಾಡಿಕೊಳ್ಳಲು ಯಾವುದೇ ಬ್ಯಾಂಕ್‍ಗಳು ಸಾಲ ನೀಡಲು ಮುಂದಾಗದ ಕಾರಣ ಬೀರೂರು ಹೌಸ್ ಬಿಲ್ಡಿಂಗ್ ಕೋ-ಆಪರೇಟಿವ್ ಸೊಸೈಟಿ ಮೂಲಕ ಅಡಮಾನ ಸಾಲ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಬಿ.ಎಸ್. ಹರಿಪ್ರಸಾದ್ ತಿಳಿಸಿದರು.

ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ದಿ ಹೌಸ್ ಬಿಲ್ಡಿಂಗ್ ಕೋ-ಆಪರೇಟೀವ್ ಸೊಸೈಟಿಯ ಕಚೇರಿಯಲ್ಲಿ ಬುಧವಾರ ನಡೆದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಹೌಸ್ ಕೋ-ಆಪರೇಟೀವ್‍ನ ಮೂಲ ಉದ್ದೇಶ ಷೇರುದಾರರು ಮತ್ತು ಅರ್ಹರಿಗೆ ಸೇವೆ ಸಲ್ಲಿಸುವುದಾಗಿದೆ. ಬೀರೂರು ಭಾಗದಲ್ಲಿ ಗೃಹ ಮಂಡಳಿ ವತಿಯಿಂದ ಸೂಪರ್ ಮಾರ್ಕೆಟ್ ಸ್ಥಾಪನೆ ಉದ್ದೇಶವಿದೆ.  ಕೋ-ಆಪರೇಟೀವ್ ಸೊಸೈಟಿ ವತಿಯಿಂದ ಅರ್ಹರಿಗೆ ಪೂರಕ ದಾಖಲೆಗಳೊಂದಿಗೆ ಅಡಮಾನ ಸಾಲ ನೀಡುವ ಸೌಲಭ್ಯವನ್ನು ಕಲ್ಪಿಸುವ ಚಿಂತನೆಯನ್ನು ಮಾಡಲಾಗಿದೆ. ಕಾರ್ಯಕಾರಿ ಮಂಡಳಿಯ ಒಪ್ಪಿಗೆ ಮೇರೆಗೆ ಸೊಸೈಟಿಯ ಬೈಲಾವನ್ನು ತಿದ್ದುಪಡಿ ಮಾಡಿ ಈ ಸೌಲಭ್ಯ ಕಲ್ಪಿಸಬೇಕಿದೆ. ಈ ವಿಷಯವಾಗಿ ಎಲ್ಲರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.

ಸಭೆಯಲ್ಲಿ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಎಚ್.ವೆಂಕಟಗಿರಿಯಪ್ಪ, ಕಾರ್ಯದರ್ಶಿ ಸಿ.ಎಂ.ಷಡಕ್ಷರಿ, ನಿರ್ದೇಶಕರಾದ ವಿಶ್ವನಾಥಗೌಡ, ಎ.ಆರ್.ಪ್ರಕಾಶ್, ಎಂ.ಬಿ.ಗಿರೀಶ್, ಎಚ್.ನಾಗರಾಜ್, ಬಿ.ಎನ್.ನಾಗರತ್ನಮ್ಮ, ಬಿ.ಎಂ.ಮಂಜುನಾಥ್, ಬಿ.ಕೆ.ರಮೇಶ್, ದಾಕ್ಷಾಯಿಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT